




ನೆಲ್ಯಾಡಿ: ಜ.16 ಮತ್ತು 17ರಂದು ನಡೆಯಲಿರುವ ಕಡಬ ತಾಲೂಕಿನ ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಯ ’ಶತಮಾನೋತ್ಸವ ಸಂಭ್ರಮ-2026’ರ ಆಮಂತ್ರಣ ಪತ್ರಿಕೆ ಬಿಡುಗಡೆ ಡಿ.15ರಂದು ಬೆಳಿಗ್ಗೆ ಶಾಲಾ ಸಭಾಂಗಣದಲ್ಲಿ ನಡೆಯಿತು.




ಶಾಲಾ ಮುಖ್ಯಗುರು ಲವ್ಲಿಜೋಸ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಶೋಕ ಸಿ.ಬಿ., ಜನಾರ್ದನ ಶಿರೋಳ್ತಪಳಿಕೆ, ಪೂವಪ್ಪ ಕರ್ಕೇರ, ಪುರುಷೋತ್ತಮ ಆಚಾರ್ಯ ಸೇನೆರೆಕರೆ, ಈಶ್ವರ ಭಟ್ ಅಲಂಗಪೆ, ಮುರಳೀಕೃಷ್ಣ ಭಟ್ ಹಡೀಲು, ಶಿವಪ್ರಸಾದ್ ಶಿವಾರು, ಪದ್ಮನಾಭ ಪೂಜಾರಿ ಪೆರ್ನಾರ್, ನೀಲಪ್ಪ ನಾಯ್ಕ್ ಅಲಂಗಪ್ಪೆ, ಬಾಬು ನಾಯ್ಕ್ ಅಲಂಗಪ್ಪೆ, ಮನೋಹರ್ ಕೊಳೆಂಜಿರೋಡಿ, ಚಂದ್ರಶೇಖರ ಅಲಂಗಪ್ಪೆ, ಪ್ರೇಮಚಂದ್ರ ಪೆರ್ನಾರ್, ಚಂದ್ರ ಬೋರ್ಜಾಲ್, ಜಿನ್ನಪ್ಪ ಗೌಡ ಶಿವಾರು, ಯಾದವ ನಾಯ್ಕ್ ಶಿವಾರು, ಶಶಿಕಲಾ ಅಲಂಗಪೆ, ಆಶಾಲತಾ ಗುಂಪಕಲ್ಲು, ಭಾರತಿ ಕೊಳೆಂಜಿರೋಡಿ, ಪವಿತ್ರ ಪಿ., ಲೀಲಾವತಿ ಅಲಂಗಪ್ಪೆ, ಹರೀಶ್ ಸಿ.ಕೆ., ರೇವತಿ ಪೆರ್ನಾರ್, ರಮೇಶ ನಾಯ್ಕ್ ಶಿವಾರು, ಶಾಲಾ ಉಪನಾಯಕಿ ಚರಿಷ್ಮಾ, ಶಿಕ್ಷಕರಾದ ವರ್ಗೀಸ್ ಕೆ.ಪಿ., ರಮೇಶ ದೊಡವಾಡ, ನವ್ಯಶ್ರೀ, ರಶ್ಮಿ, ದೀಕ್ಷಿತಾ ಮತ್ತಿತರರು ಉಪಸ್ಥಿತರಿದ್ದರು.





ವಿಡಿಯೋ ಸಾಂಗ್ ಬಿಡುಗಡೆ;
ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಯ ಶತಮಾನೋತ್ಸವದ ಪ್ರಯುಕ್ತ ರಚನೆಗೊಂಡ ’ ನಮ್ಮೂರ ಶಾಲೆ, ನಮ್ಮ ಶಾಲೆ’ ಕನ್ನಡ ವಿಡಿಯೋ ಸಾಂಗ್ ಈ ವೇಳೆ ಬಿಡುಗಡೆಗೊಂಡಿತು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಶೋಕ್ ಸಿ.ಬಿ.ನಿರ್ಮಾಣ ಸಹಕಾರದೊಂದಿಗೆ ಸುಂದರ ಬಿ.ಜಿ.ಕೊಂಬಾರು ಹಾಡು ರಚಿಸಿದ್ದರು. ಉಮಾ ಚಿನ್ಮಯಿ ಈ ಹಾಡು ಹಾಡಿದ್ದಾರೆ. ಹಾಡು ಬಿಡುಗಡೆ ವೇಳೆ ಗಾಯಕಿ ಉಮಾಚಿನ್ಮಯಿ ಉಪಸ್ಥಿತರಿದ್ದರು.







