




ಪುತ್ತೂರು: ಕಳೆದ ಬಾರಿಯ ಭಾರೀ ಮಳೆಗೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಸಾರ್ವಜನಿಕ ರಸ್ತೆ ಬದಿ ಧರೆ ಕುಸಿತ, ರಸ್ತೆ ಕುಸಿತವಾಗಿದ್ದು ಅವುಗಳ ದುರಸ್ತಿಗೆ ಸರಕಾರದಿಂದ 12.50 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.



ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವರ್ಷಧಾರೆ ಅತೀ ಹೆಚ್ಚು ಸುರಿದಿದೆ.ಈ ಕಾರಣಕ್ಕೆ ಧರೆ ಕುಸಿತಕ್ಕೊಳಗಾಗಿ ಅನೇಕ ರಸ್ತೆಗಳು ಹಾನಿಯಾಗಿದೆ,ಧರೆ ಕುಸಿತದಿಂದ ಕೆಲ ರಸ್ತೆಗಳು ಕೊಚ್ಚಿ ಹೋಗಿವೆ.ಅವುಗಳ ಪಟ್ಟಿ ಮಾಡಿ ಎಲ್ಲೆಲ್ಲಿ ವಿಪರೀತ ಹಾನಿಗೊಳಗಾಗಿದೆಯೋ ಆ ಪ್ರದೇಶಗಳಿಗೆ ಈ ಬಾರಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ.ಬಹುತೇಕ ಎಲ್ಲಾ ಗ್ರಾಮಗಳಲ್ಲಿಯೂ ಈ ರೀತಿಯ ಹಾನಿಗಳು ಉಂಟಾಗಿದೆ.ಕೊಂಬೆಟ್ಟು ತಾಲೂಕು ಕ್ರೀಡಾಂಗಣ ಬಳಿಯ ಧರೆ ಕುಸಿಯುವ ಭೀತಿಯಲ್ಲಿದ್ದು ಅಲ್ಲಿ ತಡೆಗೋಡೆ ನಿರ್ಮಾಣಕ್ಕೆ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕರು ತಿಳಿಸಿದ್ದು, ರಾಜ್ಯ ಹೆದ್ದಾರಿ, ಲೋಕೋಪಯೋಗಿ ರಸ್ತೆಗಳು,ಜಿ.ಪಂ ರಸ್ತೆಗಳನ್ನೂ ಆಯ್ಕೆ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಹೇಳಿದ್ದಾರೆ.





ಬಿಡುಗಡೆಯಾದ ಅನುದಾನಗಳು:
ಕೊಂಬೆಟ್ಟು ಆಟದ ಮೈದಾನ ತಡೆಗೋಡೆಗೆ 1 ಕೋಟಿ ರೂ.,ಸವಣೂರು-ಮಾಡಾವು-ಕೊಳ್ತಿಗೆ-ಐವರ್ನಾಡು ಜಿಲ್ಲಾ ಮುಖ್ಯ ರಸ್ತೆ ಕುಸಿತ ತಡೆಗೋಡೆ ದುರಸ್ತಿಗೆ 30 ಲಕ್ಷ ರೂ, ಪುತ್ತೂರು-ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿ ತಡೆಗೋಡೆ ರಚನೆಗೆ 50 ಲಕ್ಷ ರೂ, ಪುತ್ತೂರು- ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿ ಬದಿ ತಡೆಗೋಡೆ ರಚನೆಗೆ ರೂ. 30 ಲಕ್ಷ, ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ತಡೆಗೋಡೆ ನಿರ್ಮಾಣಕ್ಕೆ ರೂ.30 ಲಕ್ಷ, ಪುತ್ತೂರು ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಕೋಡಿಂಬಾಡಿಯಲ್ಲಿ ಧರೆ ಕುಸಿತ ತಡೆಗೋಡೆ ನಿರ್ಮಾಣಕ್ಕೆ 60 ಲಕ್ಷ ರೂ.,ಪುತ್ತೂರು ಉಪ್ಪಿನಂಗಡಿ ರಾಜ್ಯ ಹೆದ್ದಾರಿ ತಡೆಗೋಡೆ ನಿರ್ಮಾಣಕ್ಕೆ ರೂ. 50 ಲಕ್ಷ, ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಮಚ್ಚಿಮಲೆಯಲ್ಲಿ ತಡೆಗೋಡೆ ನಿರ್ಮಾಣಕ್ಕ ರೂ 45 ಲಕ್ಷ, ಕೊಡಿಮರ-ದಾರಂದಕುಕ್ಕು ಸೇಡಿಯಾಪು-ಕಡಂಬು ರಸ್ತೆ ಬದಿ ತಡೆಗೋಡೆ ನಿರ್ಮಾಣಕ್ಕೆ 25 ಲಕ್ಷ ರೂ., ಉಪ್ಪಿನಂಗಡಿ- ಹಿರೇಬಂಡಾಡಿ ಗ್ರಾಮದ ಕೊಯಿಲ-ರಾಮಕುಂಜ ಆಲಂತಾಯ-ನೆಲ್ಯಾಡಿ ರಸ್ತೆಯ ತಡೆಗೋಡೆ ಕಾಮಗಾರಿಗೆ 50 ಲಕ್ಷ ರೂ, ಕೊಡಿಮರ-ದಾರಂದಕುಕ್ಕು -ಸೇಡಿಯಾಪು-ಕಡಂಬು ಜಿಲ್ಲಾ ಮುಖ್ಯ ರಸ್ತೆ ತಡೆಗೋಡೆ ಕಾಮಗಾರಿಗೆ ರೂ.25 ಲಕ್ಷ, ಹಂಟ್ಯಾರು-ಬೆಟ್ಟಂಪಾಡಿ ಜಿಲ್ಲಾ ಮುಖ್ಯ ರಸ್ತೆಯ ತಡೆಗೋಡೆ ಕಾಮಗಾರಿಗೆ 1 ಕೋಟಿ ರೂ, ಮುಕ್ರಂಪಾಡಿ-ರೆಂಜಲಾಡಿ- ಸರ್ವೆ ರಸ್ತೆಯ ತಡೆಗೋಡೆ ಕಾಮಗಾರಿಗೆ 40 ಲಕ್ಷ ರೂ, ಬಂಟ್ವಾಳ ತಾಲೂಕು ವ್ಯಾಪ್ತಿಯ ಕುದ್ದುಪದವು-ಪಕಳಕುಂಜ ಜಿಲ್ಲಾ ಮುಖ್ಯ ರಸ್ತೆ ಮಾಣಿಲದಲ್ಲಿ ತಡೆಗೋಡೆ ಕಾಮಗಾರಿಗೆ 30 ಲಕ್ಷ ರೂ.,ಕುದ್ದುಪದವು-ಪಕಳಕುಂಜ ಜಿಲ್ಲಾ ರಸ್ತೆಯ ಮಾಣಮೂಲೆಯಲ್ಲಿ ತಡೆಗೋಡೆ ಕಾಮಗಾರಿಗೆ ರೂ.50 ಲಕ್ಷ ,ಬೆಟ್ಟಂಪಾಡಿ ಗ್ರಾಮದ ಕೀಲಂಪಾಡಿ ಒಡ್ಯ ರಸ್ತೆಯ ಬಳಿ ತಡೆಗೋಡೆ ಕಾಮಗಾರಿಗೆ 75 ಲಕ್ಷ ರೂ.,ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ಪೆರಾಬೆ ಸಂಪರ್ಕ ರಸ್ತೆ ತಡೆಗೋಡೆಗೆ 75 ಲಕ್ಷ ರೂ., ಕೋಡಿಂಬಾಡಿ ಗ್ರಾಪಂ ಹಿಂಬದಿ ತಡೆಗೋಡೆ ನಿರ್ಮಾಣಕ್ಕೆ ರೂ.25 ಲಕ್ಷ, ಉಪ್ಪಿನಂಗಡಿ ಗ್ರಾಮದ ನೂಜಿ ಪದಾಳ ರಸ್ತೆ ತಡೆಗೋಡೆ ನಿರ್ಮಾಣಕ್ಕೆ 20 ಲಕ್ಷ ರೂ, ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಪೆರ್ನೆ ರಸ್ತೆ ತಡೆಗೋಡೆ ನಿರ್ಮಾಣಕ್ಕೆ 30 ಲಕ್ಷ ರೂ,ಹಿರೇಬಂಡಾಡಿ ಗ್ರಾಮದ ದಾಸರಮೂಲೆ ಅಡೆಕ್ಕಲ್ ರಸ್ತೆ ತಡೆಗೋಡೆಗೆ ರೂ.90 ಲಕ್ಷ, 34 ನೆಕ್ಕಿಲಾಡಿ ಗ್ರಾಮದ ದರ್ಬೆ ಕೊಳಕ್ಕೆ ರಸ್ತೆಗೆ ತಡೆಗೋಡೆಗೆ 33 ಲಕ್ಷ ರೂ, ಕೊಳ್ತಿಗೆ ಗ್ರಾಮದ ಕಜೆ ಕುದ್ಕುಳಿ ತಡೆಗೋಡೆಗೆ 20 ಲಕ್ಷ ರೂ, ಒಳಮೊಗ್ರು ಗ್ರಾಮದ ಬಾಣಬೆಟ್ಟು ರಸ್ತೆಗೆ ತಡೆಗೋಡೆಗೆ 12 ಲಕ್ಷ ರೂ, ಒಳಮೊಗ್ರು ಗ್ರಾಮದ ಕುಟ್ಟಿನೋಪ್ಪಿನಡ್ಕ ನೀರ್ಪಾಡಿ ರಸ್ತೆ ತಡೆಗೋಡೆಗೆ 20 ಲಕ್ಷ ರೂ.,34 ನೆಕ್ಕಿಲಾಡಿ ಆದರ್ಶನಗರ ಕಾಲನಿ ರಸ್ತೆ ತಡೆಗೋಡೆಗೆ ರೂ. 30 ಲಕ್ಷ,ನಿಡ್ಪಳ್ಳಿ ಗ್ರಾಮದ ತಂಬುತ್ತಡ್ಕ ನುಳಿಯಾಲು ತಂಬುತ್ತಡ್ಕದಲ್ಲಿ ತಡೆಗೋಡೆ ನಿರ್ಮಾಣಕ್ಕೆ ರೂ.25 ಲಕ್ಷ, ನಿಡ್ಪಳ್ಳಿ ಗ್ರಾಮದ ಗೋಳಿತ್ತಡಿ ಡೊಂಬೆಗಿರಿ ರಸ್ತೆಯ ಚಿಕ್ಕೋಡಿಯಲ್ಲಿ ತಡೆಗೋಡೆ ಕಾಮಗಾರಿಗೆ ರೂ.30 ಲಕ್ಷ, ಇಡ್ಕಿದು ಗ್ರಾಮದ ಸೂರ್ಯ ದೇವಸ್ಯ ಕೋಲ್ಪೆ ರಸ್ತೆಯ ಸೇತುವೆಯ ಬದಿ ತಡೆಗೋಡೆ ನಿರ್ಮಾಣಕ್ಕೆ 30 ಲಕ್ಷ ರೂ.,ಕೆದಿಲ ಗ್ರಾಮದ ಪಾಟ್ರಕೋಡಿ ಕುದುಂಬ್ಲಾಡಿ ರಸ್ತೆಯ ಬಾಯಬ್ಬೆ ತಡೆಗೋಡೆ ನಿರ್ಮಾಣಕ್ಕೆ ರೂ.10 ಲಕ್ಷ ಹಾಗೂ ಪೆರ್ನೆ ಗ್ರಾಮದ ಬಿಳಿಯೂರು ದೇಂತಡ್ಕ ರಸ್ತೆ ಬದಿ ತಡೆ ಗೋಡೆ ನಿರ್ಮಾಣಕ್ಕೆ 10 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕರ ಕಚೇರಿಯಿಂದ ಮಾಹಿತಿ ನೀಡಲಾಗಿದೆ.








