




ನೆಲ್ಯಾಡಿ: ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ಸಂಸ್ಥೆಯಾದ ಜೆಸಿಐ ಇಂಡಿಯಾ ಇದರ ವಲಯ 15ರ ವಲಯ ಆಡಳಿತ ಮಂಡಳಿಗೆ ಜೆಸಿಐ ನೆಲ್ಯಾಡಿ ಘಟಕದ 2025ರ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಅವರು ಸಿಎಸ್‌ಆರ್ ವಿಭಾಗದ ವಲಯ ಸಂಯೋಜಕರಾಗಿ ನೇಮಕಗೊಂಡಿದ್ದಾರೆ.



ಡಿ.13ರಂದು ವಿಟ್ಲದ ಶತಮಾನೋತ್ಸವ ಸ್ಮಾರಕ ಸಭಾಭವನದಲ್ಲಿ ನಡೆದ ವಲಯಾಡಳಿತ ಮಂಡಳಿ ಪದಗ್ರಹಣ ಸಮಾರಂದಲ್ಲಿ ನೂತನ ವಲಯಾಧ್ಯಕ್ಷರಾದ ಸಂತೋಷ್ ಶೆಟ್ಟಿ ಅವರು ಡಾ. ಸುಧಾಕರ್ ಶೆಟ್ಟಿ ಅವರಿಗೆ ನೇಮಕಾತಿ ಪತ್ರವನ್ನು ವಿತರಿಸಿ ಪ್ರಮಾಣವಚನ ಬೋಧಿಸಿದರು.















