




ಪುತ್ತೂರು: ಇಲ್ಲಿನ ದರ್ಬೆಯಲ್ಲಿರುವ ಆಫೀಸರ್ಸ್ ಕ್ಲಬ್ನಲ್ಲಿ ಡಿಸೆಂಬರ್ ತಿಂಗಳಿನಿಂದ ಶಟಲ್ ಬ್ಯಾಡ್ಮಿಂಟನ್ ತರಬೇತಿಯು ಆರಂಭಗೊಂಡಿದೆ.



ಮಾಜಿ ರಾಜ್ಯ ಬ್ಯಾಡ್ಮಿಂಟನ್ ಕ್ರೀಡಾಪಟುವಿನಿಂದ ತರಬೇತಿ ನೀಡಲಾಗುತ್ತಿದ್ದು, ವಾರದಲ್ಲೊಂದು ದಿನ ಮಿನಿ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಡೆಸಲಾಗುತ್ತದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 4.30 ರಿಂದ 6.30ರ ವರೆಗೆ ತರಬೇತಿ ನೀಡಲಾಗುತ್ತಿದೆ.





ತಿಂಗಳಿಗೆ 2 ಸಾವಿರ ರೂಪಾಯಿ ಶುಲ್ಕ ಇದ್ದು, ಸಂಬಂಧಿಕರು ಅಥವಾ ಗ್ರೂಪ್ ಬಂದರೆ ಶುಲ್ಕದಲ್ಲಿ ಶೇ.10ರಷ್ಟು ಡಿಸ್ಕೌಂಟ್ ನೀಡಲಾಗುತ್ತದೆ. ಟ್ರಯಲ್ ಕ್ಲಾಸ್ನ 1 ಸೆಶನ್ಗೆ 200 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಆಸಕ್ತರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ 7624882282 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.








