




ಧಾರ್ಮಿಕ ಶ್ರದ್ಧಾಕೇಂದ್ರಗಳು ನಮ್ಮ ನಾಡಿನ ಆಧ್ಯಾತ್ಮಿಕತೆಯ ಸಂಕೇತ: ಕಣಿಯೂರು ಶ್ರೀ



ವಿಟ್ಲ: ಧಾರ್ಮಿಕ ಶ್ರದ್ಧಾಕೇಂದ್ರಗಳು ನಮ್ಮ ನಾಡಿನ ಆಧ್ಯಾತ್ಮಿಕತೆಯ ಸಂಕೇತ. ಆಲಯಗಳಿಗೆ ಸ್ವಾಗತ ಗೋಪುರಗಳು ಮುಕುಟವಿದ್ದಂತೆ, ಇದರ ನಿರ್ಮಾಣ ಕಾರ್ಯ ಪುಣ್ಯ ಪ್ರದವಾದುದು. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಪೂರ್ವ ಗೋಪುರ ನಿರ್ಮಾಣ, ನಾಗ ಸಾನಿಧ್ಯದ ಜೀರ್ಣೋದ್ದಾರ ಕಾರ್ಯ ಆರಂಭಿಸುವ ಯೋಜನೆಯಿದೆ ಎಂದು ಕಣಿಯೂರು ಶ್ರೀ ಚಾಮುಂಡೇಶ್ಚರೀ ದೇವೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿರವರು ಹೇಳಿದರು.





ಅವರು ಕ್ಷೇತ್ರದ ಪೂರ್ವ ಗೋಪುರ ನಿರ್ಮಾಣ, ನಾಗ ಸಾನಿಧ್ಯದ ಜೀರ್ಣೋದ್ದಾರ ಕಾರ್ಯದ ಅಂಗವಾಗಿ ಕ್ಷೇತ್ರದಲ್ಲಿ ನಡೆದ ಭಕ್ತಾಧಿಗಳ ಸಭೆಯಲ್ಲಿ ಆಶೀರ್ವಚನ ನೀಡಿದರು.
ಟ್ರಸ್ಟಿನ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು, ಯಶೋಧರ ಬಂಗೇರ ಅಳಿಕೆ, ಉದಯರಮಣ ಭಟ್ ಕಣಿಯೂರು, ಶ್ರೀ ವಿಘ್ನೇಶ್ವರ ಭಟ್ ಅನೆಯಾಲಕೋಡಿ, ಶ್ರೀ ಗಣೇಶ ಸುವರ್ಣ ತುಂಬೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರಾಭಿವೃಧ್ಧಿ ಸಮಿತಿ ಯನ್ನು ರಚಿಸಲಾಯಿತು. ಈ ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ, ಗೌರವ ಸಲಹೆಗಾರರಾಗಿ ಕೃಷ್ಣಯ್ಯ ಕೆ. ವಿಟ್ಲ ಅರಮನೆ , ಕೈಯ್ಯೂರು ನಾರಾಯಣ ಭಟ್ , ಯಶೋಧರ ಬಂಗೇರ ಅಳಿಕೆ, ಅಧ್ಯಕ್ಷರಾಗಿ ಗಣೇಶ್ ಸುವರ್ಣ ತುಂಬೆ, ಪ್ರಧಾನ ಕಾರ್ಯದರ್ಶಿಯಾಗಿ ದೀಕ್ಷಿತ್ ಕಣಿಯೂರು, ಕೋಶಾಧಿಕಾರಿಯಾಗಿ ಮಾತೇಶ್ ಭಂಡಾರಿ ಕನ್ಯಾನ, ಜೊತೆ ಕಾರ್ಯದರ್ಶಿಯಾಗಿ ನೋಣಯ್ಯ ಪೂಜಾರಿ ಸಣ್ಣಗುತ್ತು, ಪದ್ಮಾವತಿ ಸುವರ್ಣ ಕಣಿಯೂರು, ಉಪಾಧ್ಯಕ್ಷರಾಗಿ ಡಾ. ರಾಮಚಂದ್ರ ಭಟ್ ಕನ್ಯಾನ, ವಿಘ್ನೇಶ್ವರ ಭಟ್ ಅನೆಯಾಲಕೋಡಿ, ಸುರೇಶ್ ಬನಾರಿ, ಹರೀಶ್ ಪೂಜಾರಿ ಬಾಕಿಲ, ಸುಜಾತ ಪಾಲಿಗೆ ಹಾಗೂ ಕಾರ್ಯಕಾರಿಣಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ರೇಣುಕಾ ಕಣಿಯೂರು ಸ್ವಾಗತಿಸಿ, ನಿರೂಪಿಸಿದರು ಟ್ರಸ್ಟಿನ ಕಾರ್ಯದರ್ಶಿ ಚಂದ್ರಶೇಖರ ಕಣಿಯೂರು ವಂದಿಸಿದರು.









