




ಪುತ್ತೂರು: ಪುತ್ತೂರು ಕಡಬ 33 ಕೆವಿ ಮಾರ್ಗ ಮತ್ತು 33/11ಕೆ.ವಿ. ಕಡಬ ವಿದ್ಯುತ್ ಉಪಕೇಂದ್ರದಲ್ಲಿ ಪಾಲನಾ ಕಾರ್ಯ ಮತ್ತು ಉಪಕೇಂದ್ರದ ದುರಸ್ತಿ ಕಾರ್ಯ ಹಮ್ಮಿಕೊಂಡಿರುವುದರಿಂದ ಡಿ.18ರಂದು ಪೂರ್ವಾಹ್ನ 9.30ರಿಂದ ಸಾಯಂಕಾಲ 5:30 ಗಂಟೆಯವರೆಗೆ ಪುತ್ತೂರು ಕಡಬ 33 ಕೆವಿ ಮಾರ್ಗ ಮತ್ತು 22/11ಕೆ.ವಿ. ಕಡಬ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಆದ್ದರಿಂದ 33/11ಕೆವಿ ಕಡಬ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಹೊರಡುವ ಎಲ್ಲಾ 11ಕೆವಿ ಫೀಡರ್ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.










