ನಿಡ್ಪಳ್ಳಿ; ಸ್ವಾಧಂ ತಂತ್ರಾಂಶದ ಮೂಲಕ ನೀರಿನ ಕರ ಸಂಗ್ರಹ – ಘನ ತ್ಯಾಜ್ಯ ಸಂಗ್ರಹದ ಶುಲ್ಕ ವಸೂಲಿ ನಿರ್ವಹಣೆ – ಫಾಗಿಂಗ್ ಯಂತ್ರದ ಬಳಕೆಯ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮ

0

ನಿಡ್ಪಳ್ಳಿ; ನಿಡ್ಪಳ್ಳಿ ಗ್ರಾಮ ಪಂಚಾಯತ್ ಪ್ರಾಯೋಜಕತ್ವದಲ್ಲಿ ನೀರಿನ ತೆರಿಗೆ ಸಂಗ್ರಹ ಮಾಡುವ ನೂತನ ಯಂತ್ರ ಮತ್ತು ವಿಧಾನ ಸ್ವಾದಂ ತಂತ್ರಾಂಶದ ಬಗ್ಗೆ ಪಂಚಾಯತ್  ವಠಾರದಲ್ಲಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು. 

ಸ್ವಾಧಂ ತಂತ್ರಾಂಶದ ವ್ಯವಸ್ಥಾಪಕರಾದ ಕೇಶವ ಪ್ರಕಾಶ್ ಮಾಹಿತಿ ನೀಡಿದರು. ಫಾಗಿಂಗ್ ಮಾಡುವ ಮೂಲಕ ಯಂತ್ರದ ಬಗ್ಗೆ  ಪ್ರಾತ್ಯಕ್ಷಿಕೆಯನ್ನು ರಮೇಶ್ ನೀಡಿದರು.

ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ಪಿಡಿಒ ಜಯಪ್ರಕಾಶ್ ಉಪಸ್ಥಿತರಿದ್ದರು.ಪಂಚಾಯತ್ ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಸ್ವಚ್ಚತಾ ಘಟಕ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡರು. ಕಾರ್ಯದರ್ಶಿ ಶಿವರಾಮ ಮೂಲ್ಯ ಸ್ವಾಗತಿಸಿ ವಂದಿಸಿದರು.ಸಿಬ್ಬಂದಿಗಳಾದ ರೇವತಿ, ವಿನೀತ್ ಕುಮಾರ್, ಜಯ ಕುಮಾರಿ ಹಾಗೂ ಗ್ರಂಥ ಪಾಲಕಿ ಪವಿತ್ರ ಸಹಕರಿಸಿದರು.

LEAVE A REPLY

Please enter your comment!
Please enter your name here