ತಿಂಗಳಾಡಿ ಶಂಸುಲ್ ಉಲಮಾ ಎಜುಕೇಷನ್ ಸೆಂಟರ್ ಗೆ ಅನಿವಾಸಿ ಉದ್ಯಮಿ ರಫೀಕ್ ಡಿಂಬ್ರಿ ಭೇಟಿ

0

ತಿಂಗಳಾಡಿ: ತಿಂಗಳಾಡಿ ಶಂಸುಲ್ ಉಲಮಾ ಎಜುಕೇಷನ್ ಸೆಂಟರ್ ತಿಂಗಳಾಡಿಗೆ ಅನಿವಾಸಿ ಉದ್ಯಮಿ ರಫೀಕ್ ಡಿಂಬ್ರಿ ಅವರು ಭೇಟಿ ನೀಡಿದರು.
ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸಂಸ್ಥೆಗೆ ತನ್ನಿಂದಾದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಸ್ಥೆಯ ವತಿಯಿಂದ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾದ್ಯಕ್ಷರಾದ ಮಹಮ್ಮದ್ ಹಾಜಿ ಸಂತೋಷ್, ಸಂಸ್ಥೆಯ ಅಧ್ಯಕ್ಷರಾದ ಸಿದ್ದೀಕ್ ಸುಲ್ತಾನ್, ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಪಟ್ಟೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಹಾಜಿ ದರ್ಬೆ, ಕೋಶಾಧಿಕಾರಿ ಅಬ್ದುಲ್ ಹಮೀದ್ ದರ್ಬೆ, ಅಧ್ಯಾಪಕರಾದ ಉಮ್ಮರ್ ಅಝ್ಹರಿ, ಸಂಸ್ಥೆಯ ನಿರ್ದೇಶಕರಾದ ರಝಾಕ್ ದರ್ಬೆ, ಲತೀಫ್ ಅಂಙನ್ತಡ್ಕ, ಹಾರಿಸ್ ಬುರಾಕ್, ಲತೀಫ್ ಆದ್ರೋಡಿ, ಅಬ್ದುಲ್ಲ ಕೈಕಾರ, ಕಾಸಿಂ ತಿಂಗಳಾಡಿ ಹಾಗೂ ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಅಧ್ಯಾಪಕರಾದ ಅಬ್ದುಲ್ ಸತ್ತಾರ್ ಕೌಸರಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here