







ಬಡಗನ್ನೂರು: ದ.ಕ.ಜಿ.ಪಂ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಸಮೂಹ ಸಂಪನ್ಮೂಲ ಕೇಂದ್ರ ಕುಂಬ್ರ ಇದರ ಸಹಭಾಗಿತ್ವದಲ್ಲಿ ಕುಂಬ್ರ ಕ್ಲಸ್ಟರ್ ಮಟ್ಟದ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ “ಮಂಥನ” ಕಲಿಕಾ ಹಬ್ಬ 2025-26 ಕಾರ್ಯಕ್ರಮವು ಜ.2ರಂದು ಕೖೊಲ ಬಡಗನ್ನೂರು ಸ.ಹಿ.ಪ್ರಾ ಶಾಲಾ ವಠಾರದಲ್ಲಿ ನಡೆಯಿತು.





ಕಾರ್ಯಕ್ರಮವನ್ನು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲುರವರು ಉದ್ಘಾಟಿಸಿ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ವಿವಿಧ ಚಟುವಟಿಕೆ ಮೂಲಕ ಕಲಿಕೆಗೆ ಉತ್ತೇಜನ ನೀಡುವ ಒಳ್ಳೇಯ ಕಾರ್ಯಕ್ರಮ ಇದು ಅವರ ಜೀವನದಲ್ಲಿ ದಾರಿದೀಪವಾಗಲಿ, ಮುಂದೆ ದೇಶದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿಬರಲಿ ಎಂದು ಶುಭಹಾರೖೆಸಿದರು.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಶಿಕ್ಷಣಾ ಸಂಯೋಜಕಿ ಮಾತನಾಡಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 11 ವಿವಿಧ ಚಟುವಟಿಕೆಗಳನ್ನು 6 ಕೊಠಡಿಗಳಲ್ಲಿ ಆಯೋಜಿಸಿ ಅವರ ಪ್ರತಿಭೆಯನ್ನು ಗಟ್ಟಿಗೊಳಿಸುವ ಮೂಲಕ ಕಲಿಕೆ ಪ್ರೋತ್ಸಾಹ ನೀಡುವ ವೇದಿಕೆ ಇದಾಗಿದೆ. ಇಲಾಖೆಯ ಒತ್ತಡದ ಕೆಲಸದಲ್ಲೂ ಈ ಉತ್ತಮ ಕಾರ್ಯಕ್ರಮ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಪುತ್ತೂರು ತಾ.ಪಂ.ಮಾಜಿ ಅಧ್ಯಕ್ಷೆ ರೇಖಾ ನಾಗರಾಜ್ ಮಾತನಾಡಿ, ಕೖೊಲ ಬಡಗನ್ನೂರು ಶಾಲೆ ಮಕ್ಕಳ ಕಲಿಕೆ ಜೊತೆಗೆ ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಪ್ರತಿಭಾವಂತ ಶಾಲೆಯಾಗಿ ತಾಲೂಕಿಗೆ ಮಾದರಿಯಾಗಿ ಮೂಡಿಬರುತ್ತಿದೆ ಎಂದರು.
ಕ. ರಾ. ಪ್ರಾ. ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಮಣ್ಣ ರೖೆ ಕೖೆಕಾರ ಮಾತನಾಡಿ, ಕಲಿಕೆಯಲ್ಲಿ ಮಕ್ಕಳು ಹಿಂದೆ ಮಂದೆ ಎಂದು ಇಲ್ಲ ಅವರಲ್ಲಿರುವ ಪರಿಕಲ್ಪನೆ ಬಗ್ಗೆ ಆರಿವು ಮೂಡಿಸಬೇಕು. ಎಂದರು.
ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ಪುತ್ತೂರು ಘಟಕದ ಅಧ್ಯಕ್ಷೆ ಶಾಂತಿ ಮೊರಸ್ ಸಂಧರ್ಭೊಚಿತ ಮಾತನಾಡಿದರು. ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಕಾ ಮಂಥನ ಕಾರ್ಯಕ್ರಮ ಮಕ್ಕಳ ಕಲಿಕೆಗೆ ಉತ್ತಮ ಮೖೆಲುಗಲ್ಲು. ಮುಂದೆ ಜೀವನದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿಬರಲಿ ಎಂದು ಹೇಳಿ ಶುಭ ಹಾರೖೆಸಿದರು.

ವೇದಿಕೆಯಲ್ಲಿ ಬಡಗನ್ನೂರು ಗ್ರಾ.ಪಂ ಉಪಾಧ್ಯಕ್ಷೆ ಸುಶೀಲ ಪಕ್ಯೊಡ್, ಸದಸ್ಯ ಸಂತೋಷ ಆಳ್ವ ಗಿರಿಮನೆ, ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷ ವಸಂತ ಗೌಡ ಪಕ್ಯೊಡ್ ಉಪಸ್ಥಿತರಿದ್ದರು.
ಕುಂಬ್ರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ದೇವಪ್ಪ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ ವಂದಿಸಿದರು. ಸಹ ಶಿಕ್ಷಕ ಗಿರೀಶ್ ಕೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕುಂಬ್ರ ಕ್ಲಸ್ಟರ್ ವ್ಯಾಪ್ತಿಯ ಸುಮಾರು 10 ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಎಸ್.ಡಿ.ಎಮ್.ಸಿ.ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಇಲಾಖೆಯ ಸುಮಾರು 10ಕ್ಕೂ ಹೆಚ್ಚು ತೀರ್ಪುಗಾರರು ಹಾಗೂ ರಾಜಕೀಯ ಪ್ರಮುಖರು, ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಟ್ಟೆ ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ನಿವೖತ ಮುಖ್ಯ ಶಿಕ್ಷಕಿ ಶಂಕರಿ ಪಟ್ಟೆ, ಪಡುಮಲೆ ಸ. ಹಿ. ಪ್ರಾ. ಶಾಲಾ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಪಟ್ಟೆ ಹಾಗೂ ಶಾಲಾಭಿವೃದ್ದಿ ಸದಸ್ಯರು ಹಿರಿಯ ವಿದ್ಯಾರ್ಥಿಗಳು, ಮಕ್ಕಳ ಪೋಷಕರು ಅಕ್ಷರ ದಾಸೋಹ ಸಿಬ್ಬಂದಿಗಳು, ಶಿಕ್ಣಣಾಭಿಮಾನಿಗಳು ಭಾಗವಹಿಸಿದ್ದರು.

ವಿವಿಧ ಚಟುವಟಿಕೆಗಳ ಉದ್ಘಾಟನೆ
ಪಾತ್ತಾಭಿನಯವನ್ನು ಶ್ರೀನಿವಾಸ್ ಭಟ್ ಚಂದುಕೂಡ್ಲು ಉದ್ಘಾಟನೆ ಮಾಡಿ, ರಸ ಪ್ರಶ್ನಾ ಕೊಠಡಿಯನ್ನು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಇವರಿಂದ ಉದ್ಘಾಟನೆಗೊಂಡಿತು. ಕೖೆ ಬರಣಿಗೆ ಕೊಠಡಿಯನ್ನು ಪಂ.ಉಪಾಧ್ಯಕ್ಷೆ ಸುಶೀಲ ಪಕ್ಯೊಡು ಉದ್ಘಾಟಿಸಿದರೆ, ಗಟ್ಟಿ ಓದು ಕೊಠಡಿಯನ್ನು ಸಂತೋಷ ಆಳ್ವ, ಸಂತೋಷ ದಾಯಕ ಗಣಿತ ಕೊಠಡಿ, ಆರೋಗ್ಯ ಮತ್ತು ಪೌಷ್ಟಿಕಾಂಶ ಕೊಠಡಿಯನ್ನು ರೇಖಾನಾಗರಾಜ್, ನೆನಪಿನ ಶಕ್ತಿ ಕೊಠಡಿಯನ್ನು ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷ ರಾಮಣ್ಣ ರೖೆ ಉದ್ಘಾಟನೆ ಮಾಡಿದರು.

ಬಹುಮಾನ ವಿತರಣೆ
ಸಮರೋಪ ಸಮಾರಂಭ ಕಾರ್ಯಕ್ರಮದಲ್ಲಿ ಕಲಿಕಾ ಹಬ್ಬದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಹಕಾರಿಸಿದ ಸಂಪನ್ಮೂಲ ಶಿಕ್ಷಕರನ್ನು ಈ ಸಂದರ್ಭದಲ್ಲಿ ಶಾಲುಹಾಕಿ ಕಿರೀಟ ಧರಿಸಿ ಗೌರವಾರ್ಪಣೆ ಮಾಡಲಾಯಿತು.










