






ಪುತ್ತೂರು: ಅತ್ಯುತ್ತಮ ಗುಣಮಟ್ಟದ, ವಿನೂತನ ವಿನ್ಯಾಸದ ಸ್ಟೈನ್ ಲೆಸ್ ಸ್ಟೀಲ್ ನಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಿಗೆ ಬೇಕಾದ ಯಾವುದೇ ವಿನ್ಯಾಸದ ಚೇರ್, ಟೇಬಲ್ ಗಳು , ಬರ್ನರ್ , ಚಿಮ್ನಿ ವುಡ್ ಸೆಟ್ಟಿಂಗ್ ಮತ್ತು ರೇಫ್ರಿಜರೇಟರ್ ತಯಾರಿಕಾ ಘಟಕವನ್ನು ಹೊಂದಿರುವ, ಕಳೆದ 9 ವರುಷಗಳಿಂದ ರಾಜಧಾನಿ ಬೆಂಗಳೂರಿನ ಕೆಂಗೇರಿಯಲ್ಲಿ ಎಸ್.ಆರ್. ಹೊಟೇಲ್ ಇಕ್ವಿಪ್ಮೆಂಟ್ಸ್ ಘಟಕ ಇದರ ಪ್ರಥಮ ಸಹಸಂಸ್ಥೆ , ರಾಜೇಶ್ ಶೆಟ್ಟಿ ಮಠಂತಬೆಟ್ಟು ಅವರ ಮಾಲೀಕತ್ವದ ಆಗಸ್ತ್ಯ ಹೋಟೆಲ್ ಕಿಚನ್ ಇಕ್ವಿಪ್ಮೆಂಟ್ಸ್ ತಯಾರಿಕಾ ಘಟಕ ಜ.5ರಂದು ಕೋಡಿಂಬಾಡಿಯಲ್ಲಿ ಶುಭಾರಂಭಗೊಂಡಿತು.


ಶಾಸಕ ಅಶೋಕ್ ಕುಮಾರ್ ರೈ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ ಶುಭ ಹಾರೈಸಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉತ್ಪಾದನಾ ಘಟಕದ ಉದ್ಘಾಟನೆ ನೆರವೇರಿಸಿದರು.




ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕೋಡಿಂಬಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎ. ಮುರಳೀಧರ ರೈ ಮಠಂತಬೆಟ್ಟು, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ. ನಿರಂಜನ ರೈ ಮಠಂತಬೆಟ್ಟು, ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಉದ್ಯಮಿ ಗಂಗಾಧರ ಶೆಟ್ಟಿ ಮಠಂತಬೆಟ್ಟು, ಶಿವಪ್ರಸಾದ್ ರೈ ಮಠಂತಬೆಟ್ಟು , ಯೋಗೀಶ್ ಸಾಮಾನಿ ಸಂಪಿಗೆದಡಿ, ಸಂತೋಷ್ ಕುಮಾರ್ ರೈ ಕೆದಿಕಂಡೆಗುತ್ತು, ವಿಕ್ರಂ ಶೆಟ್ಟಿ ಅಂತರ, ರೋಶನ್ ರೈ ಬನ್ನೂರು, ಮಾಲೀಕ ರಾಜೇಶ್ ಶೆಟ್ಟಿಯವರ ತಾಯಿ ಸರೋಜಾ ರೈ , ಅತ್ತೆ ವಸಂತಿ, ಮಾವ ಸುಂದರ ಆಳ್ವ ಗೋಳ್ತಮಜಲು, ಮಹಾಬಲ ಆಳ್ವ ಗೋಳ್ತಮಜಲು , ಕಳೆಂಜ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ರಾಜೀವ ಶೆಟ್ಟಿ ಕೇದಗೆ ಸಹಿತ ಹಲವರು ಹಾಜರಿದ್ದರು.

ಮಾಲೀಕ ರಾಜೇಶ್ ಶೆಟ್ಟಿ ಮಾತನಾಡಿ , 2016ರಲ್ಲಿ ಬೆಂಗಳೂರಿನ ಕೆಂಗೇರಿಯಲ್ಲಿ ಎಸ್. ಆರ್. ಹೋಟೆಲ್ ಕಿಚನ್ ಇಕ್ವಿಪ್ಮೆಂಟ್ ಘಟಕವನ್ನು ಪ್ರಾರಂಭಿಸಿದೆ. ಇದೀಗ ಕೋಡಿಂಬಾಡಿಯಲ್ಲೂ ತನ್ನ ಪ್ರಥಮ ಶಾಖೆಯನ್ನು ಆರಂಭಿಸಿದ್ದೇನೆ. ಎಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ಬಿಸಿಯಾಗಿ ಇಡುವಂಥ ಸಾಮಾಗ್ರಿಗಳ ಸಹಿತ ಚೇರ್ , ಟೇಬಲ್ , ನಾನಾ ಬಗೆಯ ಉತ್ಪನ್ನಗಳು ಜೊತೆಗೆ ಹಳೆಯ ಸಾಮಾಗ್ರಿಗಳೆಲ್ಲಾ ಇಲ್ಲಿ ಬೆಂಗಳೂರು ದರದಲ್ಲೇ ಸಿಗಲಿದೆ ಎಂದು ಹೇಳಿ ಸರ್ವರ ಸಹಕಾರ ಕೋರಿದರು. ಪತ್ನಿ ಶ್ವೇತಾ ರಾಜೇಶ್ ,ಮಕ್ಕಳಾದ ಅಗಸ್ತ್ಯ ಶೆಟ್ಟಿ ಮತ್ತು ಐಶಾನಿ ಶೆಟ್ಟಿ ಸಹಕಾರ ನೀಡಿದರು.










