ಡಾ.ಎಂ.ಕೆ.ಅಬ್ದುಲ್ ಆರಿಸ್‌ರವರಿಗೆ ಯುಎಇ ರಾಷ್ಟ್ರೀಯ ಪ್ರಶಸ್ತಿ-2025

0

ಪುತ್ತೂರು: ವೈದ್ಯರು ಮತ್ತು ಸಮಾಜ ಸೇವಕರಾದ ಡಾ.ಎಂ.ಕೆ.ಅಬ್ದುಲ್ ಆರಿಸ್‌ರವರಿಗೆ ವೆಸ್ಟ್ ವರ್ಲ್ಡ್ ಯುಕೆ ಲಿ.ನ ಸಂಯುಕ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ(Co-CEO) ಮತ್ತು ಯುಎಇ ಆಡಳಿತ ಪ್ರಾಧಿಕಾರ ಜಂಟಿಯಾಗಿ ನೀಡುವ ಪ್ರತಿಷ್ಠಿತ ಯುಎಇ ರಾಷ್ಟ್ರೀಯ ಪ್ರಶಸ್ತಿ-2025 ನೀಡಿ ಗೌರವಿಸಲಾಯಿತು. ದುಬೈನ ಡಬಲ್ ಟ್ರೀ ಬೈ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಡಾ.ಎಂ.ಕೆ.ಅಬ್ದುಲ್ ಆರಿಸ್ ಈ ಪ್ರಶಸ್ತಿ ನೀಡಿ ಗೌರವಿಸಿದರು. ಡಾ.ಎಂ.ಕೆ.ಅಬ್ದುಲ್ ಆರಿಸ್ ಅವರು ಯುಎಇಯಲ್ಲಿ ಕಳೆದ 15 ವರ್ಷಗಳಿಗೂ ಹೆಚ್ಚು ಕಾಲ ಸಲ್ಲಿಸಿದ ವಿಶಿಷ್ಟ ವೈದ್ಯಕೀಯ ಮತ್ತು ಸಮಾಜ ಸೇವೆಯನ್ನೊಳಗೊಂಡ ಮಾನವೀಯ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಮೂಲತಃ ಬೆಳ್ತಂಗಡಿ ತಾಲೂಕಿನ ಗ್ರಾಮದ ಕುಂದಡ್ಕ ಮನೆ ನಿವಾಸಿಯಾಗಿರುವ ಡಾ.ಎಂ.ಕೆ.ಅಬ್ದುಲ್ ಆರಿಸ್‌ರವರು ರೋಗಿ ಕೇಂದ್ರಿತ ಚಿಕಿತ್ಸೆಯ ಮೂಲಕ ಅನೇಕ ಜನರಿಗೆ ವಿಶೇಷವಾಗಿ ಅನಿವಾಸಿ ಭಾರತೀಯರು (NRIಗಳು) ಮತ್ತು ದುರ್ಬಲ ಸಮುದಾಯಗಳಿಗೆ ವೈದ್ಯಕೀಯ, ಆರ್ಥಿಕ ಹಾಗೂ ವೈಯಕ್ತಿಕ ಸಂಕಷ್ಟಗಳ ಸಮಯದಲ್ಲಿ ನಿಸ್ವಾರ್ಥವಾಗಿ ನೆರವಾಗಿದ್ದಾರೆ. ವೈಯಕ್ತಿಕ ಚಿಕಿತ್ಸೆಯ ಹೊರತಾಗಿಯೂ, ರಾಜಕೀಯ ನಿರ್ದೇಶನಗಳ ಅಡಿಯಲ್ಲಿ ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆಯನ್ನು ಸಂಯೋಜಿಸುವಲ್ಲಿ ಡಾ. ಆರಿಸ್ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.

LEAVE A REPLY

Please enter your comment!
Please enter your name here