ಕಡಬ: ಪತ್ನಿ,ಮಗು ನಾಪತ್ತೆ : ಕೊಯ್ಲ ಜನತಾ ಕಾಲನಿಯ ಮುನೀರ್ ಆತ್ಮಹತ್ಯೆಗೆ ಯತ್ನ

0

ಪುತ್ತೂರು: ಮಹಿಳೆ ತನ್ನ ಮಗುವಿನೊಂದಿಗೆ ನಾಪತ್ತೆಯಾಗಿರುವ ಮತ್ತು ಮಹಿಳೆಯ ಪತಿ ಆತ್ಮಹತ್ಯೆ ಗೆ ಯತ್ನಿಸಿರುವ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ ತಾಲೂಕು ಕೊಯ್ಲ ಗ್ರಾಮ ಜನತಾ ಕಾಲೋನಿ ನಿವಾಸಿ, ಮುನೀರ್ ಎಂಬವರ ಪತ್ನಿ ನೇಹಾ (26 ವ.), ಪುತ್ರ ಮಹಮ್ಮದ್ ನಿಯಾಲ್ ಪ್ರಾಯ ( 3.5 ವ) ನಾಪತ್ತೆಯಾದವರು. ಘಟನೆ ಕುರಿತು ಮುನೀರ್ ಅವರ ಅಕ್ಕ ರಾಮಕುಂಜ ಗ್ರಾಮ ನೀರಾಜೆಯ ಹಾಜಿರಾಬಿ ಎಂಬವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ: 04/2026 .ಕಲಂ:00 MP (ಹೆಂಗಸು ಮತ್ತು ಮಗು ಕಾಣೆ) BNS-2023 ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿದೆ?
ತನ್ನ 2ನೇ ತಮ್ಮನಾದ ಮುನೀರ್ ಮೂಡಿಗೆರೆಯಿಂದ ನೇಹಾ ಎಂಬ ಯುವತಿಯನ್ನು 8 ವರ್ಷದ ಹಿಂದೆ ಮದುವೆಯಾಗಿದ್ದು, ಅವರಿಗೆ ಒಂದು ಹೆಣ್ಣು ಮತ್ತು ಇನ್ನೊಂದು ಗಂಡು ಮಕ್ಕಳಿರುತ್ತಾರೆ. ಮುನೀರ್ ಹಾಗೂ ಆತನ ಪತ್ನಿ 2 ವರ್ಷಗಳ ಕಾಲ ಕೊಯಿಲಾದ ತಂದೆ ಮನೆಯಲ್ಲಿದ್ದು, ಬಳಿಕ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು , ಇತ್ತೀಚೆಗೆ 3 ತಿಂಗಳ ಹಿಂದೆ ಕೆಲಸಕ್ಕೆಂದು ಮುನೀರ್ ಮತ್ತು ಆತನ ಪತ್ನಿ, ಸಣ್ಣ ಮಗನನ್ನು ಜೊತೆಯಲ್ಲಿ ಕರೆದುಕೊಂಡು ಬೆಂಗಳೂರಿಗೆ ಹೋಗಿರುತ್ತಾರೆ. ದೊಡ್ಡ ಮಗಳನ್ನು ನನ್ನ ತಂದೆಯ ಮನೆಯಲ್ಲಿ ಬಿಟ್ಟು ಹೋಗಿರುತ್ತಾರೆ. 07-11-2025 ರಂದು ಅವರ ಮಗಳ ಹುಟ್ಟು ಹಬ್ಬಕ್ಕೆಂದು ಬಂದು ಆ ದಿನವೇ ವಾಪಾಸು ಹೋಗಿರುತ್ತಾರೆ. 25-12-2025 ರಂದು ಮುನೀರ್ ಒಬ್ಬನೇ ಬೆಂಗಳೂರಿನಿಂದ ಬಂದು ತಂದೆಯ ಮನೆಯಲ್ಲಿದ್ದು ರಾತ್ರಿ ಸಮಯ ನನ್ನ ಮನೆಯಲ್ಲಿ ಇದ್ದನು. ಹೆಂಡತಿ ಹಾಗೂ ಮಗುವಿನ ಬಗ್ಗೆ ನಾನು ಆತನಲ್ಲಿ ಕೇಳಿದಾಗ ಇನ್ನೆರಡು ದಿನದಲ್ಲಿ ಬರುತ್ತಾರೆ ಎಂದು ತಿಳಿಸಿರುತ್ತಾನೆ. ಅಲ್ಲದೇ ಪತ್ನಿ ಮತ್ತು ಮಗನೊಂದಿಗೆ ಆತ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದ.30-12-2025 ರಂದು ಮುನೀರ್ ಹಗ್ಗ ತೆಗೆದುಕೊಂಡು ಮರ ಏರಿ ಆತ್ಮ ಹತ್ಯೆಗೆ ಪ್ರಯತ್ನಿಸಿದ್ದು, ಆತನನ್ನು ಸ್ಥಳೀಯರು ಸೇರಿ ಮರದಿಂದ ಇಳಿಸಿರುತ್ತಾರೆ. 03-01-2026 ರಂದು ರಾತ್ರಿ ಮುನೀರ್ ರಾಮಕುಂಜ ಗ್ರಾಮದ ನೀರಾಜೆ ಶಾಲೆಯ ಬಳಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಆತನನ್ನು ಹಗ್ಗದಿಂದ ಕೆಳಗಿಳಿಸಿ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಸ್ತುತ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಾತನಾಡುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಈ ಬಗ್ಗೆ ಆತನ ಪತ್ನಿ ನೇಹಾಗೆ ವಿಷಯ ತಿಳಿಸುವುದಕ್ಕಾಗಿ ಕರೆ ಮಾಡಿದಾಗ ದೂರವಾಣಿ ನಂಬರ್ ಸ್ವಿಚ್ ಆಫ್ ಆಗಿರುತ್ತದೆ. ಕೊನೆಯದಾಗಿ ಮುನೀರ್ 28-12-2025 ರಂದು ತಂದೆಯ ಮೊಬೈಲ್ ನಿಂದ ಆತನ ಪತ್ನಿಯ ಮೊಬೈಲ್ ಗೆ ಕರೆ ಮಾಡಿರುತ್ತಾನೆ. ಮುನೀರ್ ಪತ್ನಿ ನೇಹಾ (26) ತನ್ನ ಮಗ ಮಹಮ್ಮದ್ ನಿಯಾಲ್ (4) ನೊಂದಿಗೆ ದೂರವಾಣಿ ಕರೆ ಸ್ವೀಕರಿಸದೇ ಕಾಣೆಯಾಗಿರುತ್ತಾಳೆ ಎಂದು ಹಾಜಿರಾಬಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here