







ಬೆಳ್ಳಾರೆ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ ಮಾಡಿರುವ ಬಿಲ್ಲವ ಸಂದೇಶ್ ಎಂಬಾತನ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಸುಳ್ಯ ಮಂಡಲ ಎಸ್.ಟಿ.ಮೋರ್ಚಾ ದೂರು ದಾಖಲಿಸಿದೆ.


ಈ ಸಂದರ್ಭದಲ್ಲಿ ಸುಳ್ಯ ಮಂಡಲ ಎಸ್.ಟಿ.ಮೋರ್ಚಾ ಅಧ್ಯಕ್ಷರಾದ ಗಂಗಾಧರ ಪೆರಿಯಡ್ಕ ಪ್ರಧಾನ ಕಾರ್ಯದರ್ಶಿಗಳಾದ ಬಾಲಕೃಷ್ಣ ಅಳಂಗಪ್ಪೆ, ಬಾಲಕೃಷ್ಣ ಊಜಿರಡ್ಕ ಮತ್ತು ಜಿಲ್ಲಾ ಎಸ್.ಟಿ ಮೋರ್ಚಾದ ಉಪಾಧ್ಯಕ್ಷ , ಸುಳ್ಯ ನ.ಪಂ.ಉಪಾಧ್ಯಕ್ಷ ಬುದ್ಧ ನಾಯ್ಕ, ಸುಳ್ಯ ಲ್ಯಾಂಪ್ಸ್ ನಿರ್ದೇಶಕರಾದ ಮಿಥುನ್ ಕುಮಾರ್ ಹಾಗೂ ಗಣೇಶ್ ಕೆಡೆಂಜಿ ಉಪಸ್ಥಿತರಿದ್ದರು.













