ಶಾರ್ಟ್ ಸರ್ಕ್ಯೂಟ್ ನಿಂದ ಸಂಪ್ಯದಮೂಲೆ ಜಮೀನಿಗೆ ಬೆಂಕಿ

0

ಪುತ್ತೂರು:ವಿದ್ಯುತ್ ಕಂಬದಲ್ಲಿನ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಂಪ್ಯದಮೂಲೆ ರೇಖನಾಥ್ ರೈಯವರ ಜಮೀನಿಗೆ ಬೆಂಕಿ ಬಿದ್ದ ಘಟನೆ ಜ.8 ರಂದು ನಡೆದಿದೆ.


ಘಟನೆಗೆ ಸಂಬಂಧಿಸಿದಂತೆ ಮೊಟ್ಟೆತ್ತಡ್ಕ ಅಗ್ನಿಶಾಮಕ ಠಾಣೆಗೆ ಸ್ಥಳೀಯರು ವಿಷಯ ಮುಟ್ಟಿಸಿದಾಗ ಅಗ್ನಿಶಾಮಕ ಠಾಣೆಯ ವಾಹನವು ಬೇರೆ ಕಡೆ ಕರ್ತವ್ಯಕ್ಕೆ ತೆರಳಿದ್ದು ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಕ್ಕಿಳಿದಿತ್ತು.

ಘಟನಾ ಸ್ಥಳಕ್ಕೆ ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ, ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವಜಿತ್ ಪೂಜಾರಿ ಅಮ್ಮುಂಜ, ಸಂತೋಷ್ ರೈ ಸಂಪ್ಯದಮೂಲೆ ಸಹಿತ ಗ್ರಾಮಸ್ಥರು ಅಗ್ನಿಶಾಮಕ ಠಾಣೆಯವರೊಂದಿಗೆ ಬೆಂಕಿ ನಂದಿಸುವ ಕಾರ್ಯಕ್ಕೆ ಕೈಜೋಡಿಸಿರುತ್ತಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here