






ಪುತ್ತೂರು: ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಒಟ್ಟು ಎಂಟು ಜಿಲ್ಲೆಗಳನ್ನು ಒಳಗೊಂಡ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಮತ್ತು ಸಸ್ಯ ಜಾತ್ರೆಯ ಸಂಭ್ರಮ ಜ.10ರಿಂದ 12ರ ತನಕ ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಗದ್ದೆಯಲ್ಲಿ ನಡೆಯಲಿದ್ದು ಇದಕ್ಕಾಗಿ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿದೆ.


ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್, ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಅರಿವು ಕೇಂದ್ರ, ರೈತ ಕುಡ್ಲ ಪ್ರತಿಷ್ಠಾನ ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವಳದ ಸಹಯೋಗದಲ್ಲಿ ಕೃಷಿ ಮೇಳ ಮತ್ತು ಸಸ್ಯ ಜಾತ್ರೆ ಮೂರು ದಿನಗಳ ಕಾಲ ನಡೆಯಲಿದೆ. ಸುಮಾರು 200ಕ್ಕೂ ಮಿಕ್ಕಿ ಕೃಷಿ, ಇನ್ನಿತರ ಚಟುವಟಿಕೆಗಳ ಪ್ರದರ್ಶನ ಮತ್ತು ವ್ಯಾಪಾರ ಮಳಿಗೆಗಳು ಮೇಳದಲ್ಲಿ ಇರಲಿದೆ. ಅಲ್ಲದೆ ಸಮಗ್ರ ಕೃಷಿ ವಿಚಾರಗಳಿಗೆ ಸಂಬಂಧಿಸಿ ಕೃಷಿ ತಜ್ಞರು, ಪ್ರಗತಿಪರ ಕೃಷಿಕರು ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳಿಂದ ಕೃಷಿ ಸಂಬಂಧಿತ ಮಾಹಿತಿ ಗೋಷ್ಠಿಗಳು, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಸುಮಾರು 2 ಲಕ್ಷಕ್ಕೂ ಮಿಕ್ಕಿ ಕೃಷಿಕರು, ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ.



ಕೃಷಿಮೇಳ, ಸಸ್ಯಜಾತ್ರೆ ಉದ್ಘಾಟನೆ:
ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ರವರ ಉಪಸ್ಥಿತಿಯಲ್ಲಿ,ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷರೂ ಆಗಿರುವ ಕೃಷಿ ಸಚಿವ ಚೆಲುವರಾಯ ಸ್ವಾಮಿ ಕೃಷಿಮೇಳ ಮತ್ತು ಸಸ್ಯಜಾತ್ರೆಯನ್ನು ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ.ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ಮಹದೇವಪ್ಪ ಕೃಷಿ ಧ್ವಜಾರೋಹಣ ಮಾಡಲಿದ್ದಾರೆ.ಮೆರವಣಿಗೆ, ದ್ವಾರ ಉದ್ಘಾಟನೆಯೂ ನಡೆಯಲಿದೆ.ಮುಖ್ಯ ಅತಿಥಿಗಳಾಗಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಕೃಷಿ ಸಾಧಕರಿಗೆ, ಕಾರ್ಮಿಕರಿಗೆ, ಕೃಷಿ ಸಲಕರಣೆ ಉದ್ಯಮಿಗಳಿಗೆ ಸನ್ಮಾನ:
ವಿವಿಧ ತಾಲೂಕುಗಳಿಂದ ಆಯ್ಕೆ ಮಾಡಲಾಗಿರುವ ಅತ್ಯುತ್ತಮ ಕೃಷಿ ಸಾಧಕರು, ಕೃಷಿ ಕೂಲಿಕಾರ್ಮಿಕರು ಮತ್ತು ಕೃಷಿ ಸಲಕರಣೆ ಉದ್ಯಮಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಮಾಹಿತಿ ಗೋಷ್ಠಿ:
ವಿವಿಧ ಕೃಷಿ ಚಟುವಟಿಕೆಗಳಿಗೆ ಸಂಬಂಽಸಿ ವಿವಿಧ ಮಾಹಿತಿ ವಿಚಾರಸಂಕಿರಣಗಳು ನಡೆಯಲಿದೆ.ಜ.10ರಂದು ಮಧ್ಯಾಹ್ನ 2.30ರಿಂದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ‘ಗೇರುಕೃಷಿ-ತಾಂತ್ರಿಕತೆಗಳು’ ಕುರಿತು ಡಿ.ಸಿ.ಆರ್ ವಿಜ್ಞಾನಿ ಮತ್ತು ಪ್ರಶಸ್ತಿ ಪುರಸ್ಕೃತ ಗೇರುಕೃಷಿಕ ಕಡಮಜಲು ಸುಭಾಷ್ ರೈ ಮಾಹಿತಿ ನೀಡಲಿದ್ದಾರೆ.ಜ.11ರಂದು ಬೆಳಿಗ್ಗೆ 10ರಿಂದ ‘ಅಡಿಕೆ ಮತ್ತು ಕಾಳುಮೆಣಸಿನ ಬೆಳೆಗಳಲ್ಲಿ ನೂತನ ತಾಂತ್ರಿಕತೆಗಳು’ ಮತ್ತು ‘ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆ’ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಸಿಪಿಸಿಆರ್ಐ ವಿಟ್ಲದ ವಿಜ್ಞಾನಿ, ಕಾಳುಮೆಣಸು ಕೃಷಿಕ ಸಾಧಕರೂ ಆಗಿರುವ ಸುರೇಶ್ ಭಟ್ ಬಲ್ನಾಡು ಹಾಗೂ ಪಲ್ಲತ್ತಡ್ಕ ಅನಂತರಾಮಕೃಷ್ಣ ಮಾಹಿತಿ ನೀಡಲಿದ್ದಾರೆ. ಮಧ್ಯಾಹ್ನ 2.30ರಿಂದ ಕಾಫಿ, ಹಣ್ಣು ಹಾಗು ಇನ್ನಿತರ ಪರ್ಯಾಯ ಬೆಳೆಗಳ ಕುರಿತು ಚಟ್ಟಳ್ಳಿ ಕಾಫಿಬೋರ್ಡ್ನ ವಿಜ್ಞಾನಿ, ಕಾಫಿ ಬೆಳೆ, ಕಾಳುಮೆಣಸು ಕೃಷಿಕ ಅಜಿತ್ ಪ್ರಸಾದ್ ರೈ, ಚಂದ್ರಶೇಖರ ತಾಳ್ತಜೆ, ಹಣ್ಣಿನ ಬೆಳೆಗಳ ಕೃಷಿಕ ಕೆ.ಪಿ.ಮಹಮ್ಮದ್ ಸಾದಿಕ್ ಮಾಹಿತಿ ನೀಡಲಿದ್ದಾರೆ. ಜ.12ರಂದು ಬೆಳಗ್ಗೆ 10ರಿಂದ ಭತ್ತದ ಕೃಷಿ ಮತ್ತು ಮಣ್ಣು ಪರೀಕ್ಷೆಯ ಮಹತ್ವದ ಕುರಿತು ಮಂಗಳೂರು ಕೆವಿಕೆ ವಿಜ್ಞಾನಿ, ಸಾವಯವ ಭತ್ತದ ಕೃಷಿಕ ಎ.ಪಿ.ಸದಾಶಿವ ಮರಿಕೆ ಮಾಹಿತಿ ನೀಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ:
ಜಯದೀಪ್ ರೈ ಕೋರಂಗ ಸಾರಥ್ಯದ ಟೀಂ ಮಂಜುಶ್ರೀ ತಂಡದಿಂದ ಗಾನ ವೈಭವ, ಸಂಜೆ ಗಂಟೆ 5.30ರಿಂದ ನೃತ್ಯ ಸಂಗಮ ಮತ್ತು ಮಂಗಳೂರು ಗಾನ ನೃತ್ಯ ಅಕಾಡೆಮಿಯಿಂದ ನೃತ್ಯರೂಪಕ ‘ಸತ್ಯಮೇವ ಜಯತೇ’ ನಡೆಯಲಿದೆ. ಜ.11ರಂದು ಸಂಜೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಗುರುಪ್ರಿಯಾ ಶಿವಾನಂದ ಕಾಮತ್ ನಿರ್ದೇಶನದಲ್ಲಿ ಗಾಯಕ, ನಿರೂಪಕರ ಸಮ್ಮಿಲನ ಮತ್ತು ಗುರುಕುಲ ಕಲಾಕೇಂದ್ರ ಪುರುಷರಕಟ್ಟೆ ಇದರ ವಿದ್ಯಾರ್ಥಿಗಳಿಂದ ಗಾನ ನೃತ್ಯ ಸಂಭ್ರಮ ನಡೆಯಲಿದೆ.
ಸಮಾರೋಪ:
ಜ.12ರಂದು ಮಧ್ಯಾಹ್ನ ಗಂಟೆ 2.30ರಿಂದ ಸಮಾರೋಪ ಸಮಾರಂಭ ನಡೆಯಲಿದೆ.
ವಿವಿಧ ಪ್ರದರ್ಶನಗಳು- ಸ್ಪರ್ಧೆಗಳು
ಕೃಷಿ ಮೇಳ ಮತ್ತು ಸಸ್ಯ ಜಾತ್ರೆಯಲ್ಲಿ ಕೃಷಿಗೆ ಸಂಬಂಽಸಿದ ಹಲವು ಪ್ರದರ್ಶನಗಳು, ಸ್ಪರ್ಧೆಗಳು,ಇದೆ. ಸುಮಾರು 40 ಮಳಿಗೆಗಳಲ್ಲಿ ವಿವಿಧ ಇಲಾಖೆಗಳ ಮಾಹಿತಿ ಪ್ರದರ್ಶನ ಇರಲಿದೆ. ಯಂತ್ರೋಪಕರಣ, ಸಸಿಗಳ ವಿವಿಧ ತಳಿಯ ಬೀಜಗಳು, ರಸಗೊಬ್ಬರಗಳ ಮಳಿಗೆ, ಉತ್ಪನ್ನಗಳ ಸಂತೆ, ವಿಷಮುಕ್ತ ಆಹಾರಕ್ಕಾಗಿ ತರಕಾರಿ ಗಿಡಗಳು, ಹಣ್ಣಿನ ಗಿಡಗಳು, ಸೌಂದರ್ಯಕ್ಕಾಗಿ ಅಲಂಕಾರಿಕ ಗಿಡಗಳು, ಫಲ-ಪುಷ್ಪ ಗಿಡಗಳ ಮಾರಾಟ ಮಳಿಗೆಗಳು, ಕೃಷಿ, ಆರೋಗ್ಯಕರ ವಾತಾವರಣಕ್ಕಾಗಿ ಮನೆ ಗಾರ್ಡನ್ ವಿಶೇಷಗಳು, ಆಹಾರ ಮೇಳದ ಮಳಿಗೆಗಳು ಇರಲಿದೆ. ಮಡಿಕೆ ತಯಾರಿಕೆ, ಬೆಲ್ಲ ತಯಾರಿ, ಕೃಷಿ ಉಪಕರಣಕ್ಕೆ ಬೇಕಾದ ಕತ್ತಿ ತಯಾರಿಕೆಯ ಪ್ರಾತ್ಯಕ್ಷಿಕೆ ನಡೆಯಲಿದೆ. ಹೈನು ಉದ್ಯಮದಾರರಿಗೆ ಜಾನುವಾರು ಪ್ರದರ್ಶನ ಆಯೋಜಿಸಲಾಗಿದೆ. ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದ್ದು ಆರಂಭದ ದಿನ ಚಿತ್ರಕಲಾ ಸ್ಪರ್ಧೆ, ಹಾಲು ಕರೆಯುವ ಸ್ಪರ್ಧೆಗಳು ನಡೆಯಲಿದೆ.
- ಕೃಷಿಮೇಳ-ಸಸ್ಯಜಾತ್ರೆಯಲ್ಲಿ ವಿವಿಧ ಸ್ಟಾಲ್ಗಳು
- ರೇಷ್ಮೆ ಇಲಾಖೆ
- ತೋಟಗಾರಿಕೆ ಇಲಾಖೆ
- ಕೃಷಿ ಇಲಾಖೆ
- ಪಶುಸಂಗೋಪನಾ ಇಲಾಖೆ
- ಮೀನುಗಾರಿಕೆ ಇಲಾಖೆ
- ಶ್ರೀ ಕ್ಷೇ.ಧ.ಗ್ರಾ ಯೋಜನೆ
- ಸುದ್ದಿ ಮಾಹಿತಿ ಟ್ರಸ್ಟ್
- ಸುದ್ದಿ ಅರಿವು ಕೇಂದ್ರ
- ಸಂಜೀವಿನಿ ಒಕ್ಕೂಟ ಹೋಂ ಪ್ರೊಡಕ್ಟ್
- ನೇತ್ರಾವತಿ ನರ್ಸರಿ
- ಅಕ್ಷಯ ಗೊಬ್ಬರ
- ಸೂರ್ಯ ಸೀಡ್ಸ್
- ಮೂಲ್ಕಿ ಪ್ರೊ ಟ್ರೈ
- ರೈತ ಆಟಿಕೆ
- ಸ್ಕ್ಯಾಡ್ಸ್ ಮೆಷಿನ್
- ಗ್ರಾಮಜನ್ಯ
- ರಾಧಾ ಸುರಭಿ
- ಗೋದ್ರೇಜ್ ಫೀಡ್ಸ್
- ಸಾಯ ಎಂಟರ್ಪ್ರೈಸಸ್
- ಮೈಸೂರು ಘೀ
- ಫೈಬರ್ ದೋಂಟಿ
- ವಸಂತ್ ಕಡಿ
- ಸುರಭಿ ಬುಕ್
- ಪವರ್ ಟೂಲ್ಸ್
- ವಿಷ್ಣು ಆರ್ಗಾನಿಕ್ಸ್
- ಮಿನ್ ಶಕ್ತಿ
- ಅರಣ್ಯ ಹರ್ಬಲ್
- ಪ್ರಭಾಕರ್
- ತರಿ ಬೆಲ್ಲ
- ಬಾಡಿ ಮಸಾಜರ್
- ಪ್ರಥಮ್ ಸೀಡ್ಸ್
- ಲಕ್ಷ್ಮಿ ಸ್ಕೇಲ್
- ದ್ವಾರಕಾ
- ವಿಜಯ ಸೋಲಾರ್
- ಕುಲ್ದೀಪ್ ಅಗರ್ಬತ್ತಿ
- ರೈತ ಹೋಮ್ ಪ್ರಾಡಕ್ಟ್
- ಸುಹಾಸ್ ಮರಿಕೆ
- ಮೋಹನ್ ಜೀರ್ಣಕಾಂತಿ
- ಅಕ್ಷ ಕಾಟೇಜ್
- ಸ್ಟ್ರೈನ್ ರಿಮೂವರ್
- ಶ್ರಮ ಹೋಮ್ ಪ್ರಾಡಕ್ಟ್
- ಆರ್ಗಾನಿಕ್ ರೈತ
- ಫೋಟೊ ಫ್ರೆಮ್
- ಗ್ರೀನ್ ಕೈರೊ
- ವೆಂಕಟೇಶ್ ಕಾಂಡಿಮೆಂಟ್ಸ್
- ಅಲೋವೆರಾ ಪ್ರಾಡಕ್ಟ್
- ನಿಸರ್ಗ ಪ್ರಾಡಕ್ಟ್
- ಪಿನಾಯಿಲ್ ಪ್ರಾಡಕ್ಟ್
- ಇಸೀ ಸ್ಕೇಲ್
- ಸ್ಟ್ರೈನ್ ರಿಮೂವರ್ ದೀಪಕ್
- ಜೈನ್ ಇರಿಗೇಷನ್
- ಬೀ ಭಾರತ್
- ಚೇತನ ಕಡಿ
- ಅಮೃತ್ ಕ್ರಿಯೇಶನ್
- ಯೋಗಿನಿ ಟಾಯ್ಸ್
- ಉಷಾ ಲೇಡೀಸ್ ಡ್ರೆಸ್
- ನಾಗರಾಜ್ ಫ್ಯಾನ್ಸಿ
- ಅಮೂಲ್ಯ ಮಡಿಕೆ
- ಜಗದಂಬಾ ಎಂಟರ್ಪ್ರೈಸಸ್
- ಫ್ಲಾಕ್ಸ್ ಸೀಡ್ಸ್
- ರಶ್ಮಿ ಫುಡ್ ಪ್ರಾಡಕ್ಟ್
- ಪ್ರದೀಪ್ ರಾಗಿ ಭೋಟಿ
- ವರಾಹಿ ಹಲ್ವ
- ರಾಜಸ್ಥಾನಿ ಪಿಕೆಲ್
- ಮಂಜುನಾಥ್ ತರಕಾರಿ ಹಪ್ಪಳ
- ಆದ್ಯ ಸಾರಿ
- ಮಸಾಜರ್
- ಆದಿವಾಸಿ ಆಯಿಲ್
- ಇಸೀ ಚಯರ್
- ಜಿ.ಎನ್.ಭಟ್ ಪಿಕೆಲ್
- ಜೂಟ್ ಬ್ಯಾಗ್
- ಡ್ರೈ ಫ್ರೂಟ್ಸ್
- ಐಆರ್ಸಿಎಮ್ಡಿ
- ದೀಪಮ್ ಗೋಲ್ಡ್
- ಗಣೇಶ್ ಮೂಲ್ಕಿ ಹಪ್ಪಳ
- ಓಲ್ಡ್ ಸಾರೀ
- ಆತಿಮ್ಕ ಆಯುರ್ವೇದಿಕ್
- ಚಟ್ನಿ ಪುಡಿ ರೊಟ್ಟಿ
- ಮಸಾಜರ್ ಚಯರ್
- ಸೂರ್ಯ ಸೀಡ್ಸ್
- ಅಜಯ್ ಗೀಜರ್
- ಎಕ್ಕದ ಎಣ್ಣೆ
- ಸದ್ಗುರು ಆಯುರ್ವೇದ
- ಅವಲಕ್ಕಿ ಲಡ್ಡು
- ಎಲಿಮೆಂಟ್ಸ್ ಆಯುರ್ವೇದ
- ಕೀ ಚೈನ್
- ವೈಟ್ ಪ್ಯಾಲೇಸ್ ಡೆಕೋರ್
- ಶ್ರೀಗುರು ಮಡ್ ಬ್ಲಾಕ್
- ಉಪ್ಪಿನಂಗಡಿ ಮಡಿಕೆ
- ಜಯಚಂದ್ರ ಸೀಡ್ಸ್
- ಗುದ್ದುಪ್ಪ ಗೋ ಪ್ರಾಡಕ್ಟ್
- ಫುಡ್ ಸ್ಟಾಲ್
- ಕಟ್ಟಿ ಗೋಬಿ
- ರಾಕೇಶ್ ಲೆಮೆನ್ ಸೋಡಾ
- ಪೊನೋಸ್
- ರುಮಾಲಿ ರೋಟಿ
- ರಮೇಶ್ ಲೈಮ್ ಸೋಡಾ
- ಜಯಶ್ರೀ
- ಮರಿಕೆ ನೆನಪಿರಲಿ
- ಕೃಷ್ಣ ಚಾಟ್
- ಉದಯ್ ನಾಯ್ಕ ಹೋಳಿಗೆ
- ಮಶ್ರೂಮ್ ಬಿರಿಯಾನಿ
- ಜಾಕ್ ಫ್ರೂಟ್
- ಅವಿಲ್ ಮಿಲ್ಕ್
- ಹರ್ಷ ಚಾಟ್ಸ್
- ಕೆಎಂಎಫ್ ಚೀಸ್ ಫ್ರೈಸ್
- ಕಲ್ಪರಸ
- ಮೊಮೊಸ್ ಶೋಭ
- ಫ್ಲೇವರ್ಸ್ ಐಸ್ಕ್ರೀಂ
- ಪ್ರಭು ಚರುಂಬುರಿ
- ಮಹಾಲಿಂಗೇಶ್ವರ ಚಾಟ್ಸ್
- ಕಾವ್ಯ ಟ್ವಿಸ್ಟರ್
- ಕೈಲಾರ್ಸ್
- ಸಾನಿಧ್ಯ ಹೋಳಿಗೆ
- ನೆನಪಿರಲಿ
- ಹೊನ್ನಪ್ಪ ಪಾಪ್ಕಾರ್ನ್










