






ಪುಣಚ: ಹಿಂದು ಸಂಗಮ ಆಯೋಜನಾ ಸಮಿತಿ ವಿಟ್ಲ ತಾ, ಪುಣಚ ಮಂಡಲ ವತಿಯಿಂದ ಪುಣಚ ಹಾಗೂ ಕೇಪು ಗ್ರಾಮಗಳನ್ನೊಳಗೊಂಡ ಹಿಂದು ಮಹಾಸಂಗಮ ಜ.25ರಂದು ಪುಣಚದ ಗರಡಿ ಬಳಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಜ.11ರಂದು ಬೆಳಿಗ್ಗೆ ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರು ಪ್ರಾರ್ಥನೆ ನೆರವೇರಿಸಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.



ಈ ಸಂದರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಗೋಸೇವಾ ಗತಿವಿಧಿಯ ಸಂಯೋಜಕ ಪ್ರವೀಣ ಸರಳಾಯ, ವಿಟ್ಲ ತಾಲೂಕು ಹಿಂದು ಸಂಗಮ ಸಮಿತಿ ಉಪಾಧ್ಯಕ್ಷೆ ಗಂಗಮ್ಮ, ಹಿಂದು ಸಂಗಮ ಸಮಿತಿ ಪುಣಚ ಮಂಡಲದ ಸಂಯೋಜಕ ಬಾಲಚಂದ್ರ ಕಟ್ಟೆ, ಪುಣಚ ದೇವಾಲಯದ ಆಡಳಿತ ಸಮಿತಿ ಗೌರವಾಧ್ಯಕ್ಷ ಎಸ್. ಆರ್ ರಂಗಮೂರ್ತಿ ಸೇರಿದಂತೆ ವಿಟ್ಲ ತಾಲೂಕು ಹಿಂದು ಸಂಗಮ ಸಮಿತಿ ಸದಸ್ಯರುಗಳು, ಪುಣಚ ಮಂಡಲ ಸಮಿತಿ ಸದಸ್ಯರುಗಳು, ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರುಗಳು, ವಿವಿಧ ಭಜನಾ ಮಂಡಳಿಗಳ ಪ್ರಮುಖರು, ಊರವರು ಉಪಸ್ಥಿತರಿದ್ದರು.













