






ಉಪ್ಪಿನಂಗಡಿ: ಜನರ ಸೇವೆಯಲ್ಲಿ ದೇವರನ್ನು ಕಾಣುವ ಭಾರತೀಯ ಜೀವನ ಪದ್ಧತಿಯ ಶ್ರೇಷ್ಠತೆಯ ನೆಲೆಗಟ್ಟಿನಲ್ಲಿ ಆರೋಗ್ಯ ಶಿಬಿರಗಳನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಆಯೋಜಿಸುತ್ತಿದೆ. ಈ ಬಾರಿ 29 ನೇ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು, ಜನರು ಧನ ಸಂಪತ್ತಿಗಿಂತಲೂ ಆರೋಗ್ಯ ಸಂಪತ್ತಿನ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗಿದೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.


ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ), ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಈಶ್ವರಾಂಬಾ ಟ್ರಸ್ಟ್ , ನಮ್ಮೂರು ನಮ್ಮವರು ಮೈಂದಡ್ಕ, ರಾಜಶ್ರೀ ಅಂಬೆಲ, ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಯೇನಪೋಯ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದೊಂದಿಗೆ 34 ನೇ ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಸಭಾ ಭವನದಲ್ಲಿ ಜ.11ರಂದು ನಡೆದ ಉಚಿತ ವೈದ್ಯಕೀಯ, ದಂತ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.




ಶಿಬಿರವನ್ನು ವೇದಮೂರ್ತಿ ಕೆ. ಹರೀಶ್ ಉಪಾಧ್ಯಾಯ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಗಡಿರಕ್ಷಣಾ ಪಡೆಯ ಡೆಪ್ಯೂಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷ ಶ್ರೀ ರಾಮ ಭಟ್ ಪಾತಾಳ, ಅಯುರ್ ಗ್ರಾಮದ ಡಾ. ಸುಪ್ರಿತ್ ಲೋಬೋ, ಶ್ರೀ ರಾಮ ಶಾಲಾ ಸಂಚಾಲಕ ಯು.ಜಿ. ರಾಧಾ, ಶೀ ಗುರು ರಾಘವೇಂದ್ರ ಮಠದ ಅಧ್ಯಕ್ಷ ಕೆ. ಉದಯ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್. ಗೋಪಾಲ ಹೆಗ್ಡೆ, ರಾಜಶ್ರೀ ಅಂಬೆಲದ ಅಧ್ಯಕ್ಷ ರತ್ನಾಕರ ಇಪ್ಪನೊಟ್ಟು, ನಮ್ಮೂರು ನಮ್ಮವರು ಮೈಂದಡ್ಕ ಸಂಘಟನೆಯ ಅಧ್ಯಕ್ಷ ಪುರುಷೋತ್ತಮ ನಾಯ್ಕ, ನಿವೃತ್ತ ಶಿಕ್ಷಕಿ ಜಯಶ್ರೀ ದಿವಾಕರ, ಏನಪೋಯ ದಂತ ವೈದ್ಯಕೀಯ ಸಂಸ್ಥೆಯ ಡಾ ಸುಪ್ರಿಯ, ಡಾ. ರವಿ, ಸತ್ಯ ಸಾಯಿ ಸೇವಾ ಟ್ರಸ್ಟ್ ನ ಆನಂದ ರೈ , ಡಾ ಕೆ.ಜಿ. ಭಟ್ ಮೊದಲಾದವರು ಭಾಗವಹಿಸಿದ್ದರು.
310 ಮಂದಿ ಶಿಬಿರಾರ್ಥಿಗಳು ಈ ಆರೋಗ್ಯ ಶಿಬಿರದ ಪ್ರಯೋಜನವನ್ನು ಪಡೆದುಕೊಂಡಿದ್ದು, ಅವಶ್ಯಕತೆಯುಳ್ಳವರಿಗೆ ಉಚಿತ ಕನ್ನಡಕವನ್ನೂ ವಿತರಿಸಲಾಯಿತು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಇದರ ಮುಂದಾಳುವಾಗಿರುವ ಪ್ರಶಾಂತ್ ಶಿವಾಜಿನಗರ ಸ್ವಾಗತಿಸಿದರು. ರಮೇಶ್ ವಂದಿಸಿದರು. ನಿಕ್ಷಿತ್ ಹಾಗೂ ರಾಜೇಶ್ ಮುಖಾರಿ ಕಾರ್ಯಕ್ರಮ ನಿರೂಪಿಸಿದರು.










