ಬೊಳುವಾರು ಕ್ಷೇತ್ರದಲ್ಲಿ 1.50 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ

0


ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು 1.50 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಜ.10ರಂದು ಚಾಲನೆ ನೀಡಲಾಯಿತು.


ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಮುಖ್ಯ ಅತಿಥಿಯಾಗಿ ಆಗಮಿಸಿ, ಕಾಮಗಾರಿಗೆ ಚಾಲನೆ ನೀಡಿದರು. ಕ್ಷೇತ್ರದ ಕಾಮಗಾರಿಗೆ ರೂ.5 ಲಕ್ಷದ ಅನುದಾನ ನೀಡುವ ಕುರಿತು ಹೇಳಿದರು. 1.50 ಕೋಟಿ ರೂ. ಕಾಮಗಾರಿಯ ಅನುದಾನದ ವಿವರವನ್ನು ಪ್ರಧಾನ ಕಾರ್ಯದರ್ಶಿ ಪ್ರಸನ್ನ ಬಲ್ಲಾಳ ವಿವರಿಸಿದರು.

ನಗರಸಭಾ ಸದಸ್ಯ ಸಂತೋಷ್‌ಕುಮಾರ್ ಬೊಳುವಾರು ಸ್ವಾಗತಿಸಿ, ಆಡಳಿತ ಮಂಡಳಿ ಅಧ್ಯಕ್ಷ ಪ್ರವೀಣ್ ನಾಯಕ್ ಬೊಳುವಾರು ವಂದಿಸಿದರು. ಈ ಸಂದರ್ಭದಲ್ಲಿ ಮಹಾದಾನಿಗಳಾಗಿ ಸಹಕರಿಸಿದ ಸುಧೀಂದ್ರ ಪ್ರಭು, ಹರಿಪ್ರಸಾದ್ ಹೊಟೇಲ್‌ನ ಹರಿನಾರಾಯಣ ಹೊಳ್ಳ, ಡಾ. ಅಜೇಯ್ ಸಹಿತ ಹಲವಾರು ದಾನಿಗಳನ್ನು ದೇವರ ಸನ್ನಿಧಿಯಲ್ಲಿ ಫಲಪುಷ್ಪ ನೀಡಿ ಗೌರವಿಸಲಾಯಿತು.


ಪ್ರಸಾದ್ ಇಂಡಸ್ಟ್ರೀಸ್‌ನ ಶಿವಪ್ರಸಾದ್ ಶೆಟ್ಟಿ, ಪಡೀಲು ವಿಘ್ನೇಶ್ವರ ಕಾಂಪ್ಲೆಕ್ಸ್‌ನ ಮಾಲಕ ಸುಧೀರ್ ಶೆಟ್ಟಿ ತೆಂಕಿಲ, ಬೊಳುವಾರು ಐಶ್ವರ್ಯ ಬ್ಯೂಟಿಪಾರ್ಲರ್‌ನ ಐಶ್ವರ್ಯ ಚಂದ್ರಶೇಖರ್, ನೀಕ್ಷಾ ಆರ್ಕೇಡ್‌ನ ಮಾಲಕ ಶರತ್, ಬೊಳುವಾರು ವಿನಾಯಕ ಟ್ರೇಡರ‍್ಸ್‌ನ ನವೀನ್ ರೈ, ಗಣೇಶ್ ಪ್ರಸಾದ್ ಹೊಟೇಲ್‌ನ ಗೋಪಾಲಕೃಷ್ಣ ಹೇರಳೆ, ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಧರ್ ಭಟ್ ಕಬಕ, ಅರ್ಚಕ ಮನಮೋಹನ್ ಭಟ್, ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್, ಉತ್ಸವ ಸಮಿತಿ ಅಧ್ಯಕ್ಷ ಧನಂಜಯ ರೈ ನಾಲ, ಜತೆ ಕಾರ್ಯದರ್ಶಿಗಳಾದ ಸುಂದರ ನಾಯ್ಕ, ಕಿರಣ್ ಉರ್ಲಾಂಡಿ, ಕೋಶಾಧಿಕಾರಿ ಜಲಜಾಕ್ಷಿ ಎನ್ ಹೆಗ್ಡೆ, ಟ್ರಸ್ಟಿಗಳಾದ ಮನೋಹರ್ ರೈ, ಕಿರಣ ಶಂಕರ ಮಲ್ಯ, ಪುಷ್ಪಲತಾ ಬಿ. ಪೂಜಾರಿ, ಕ್ಷೇತ್ರ ಯಕ್ಷ ಕಲಾ ಪ್ರತಿಷ್ಠಾನದ ಗೋವಿಂದ ನಾಯಕ್ ಪಾಲೆಚ್ಚರ್, ಸ್ಥಳೀಯರಾದ ಪುಟ್ಟಣ್ಣ ನಾಯ್ಕ್‌, ಬೇಬಿ, ಪೂಜಾರಿ, ದಿನೇಶ್ ಕರ್ಮಲ, ನಿತಿನ್ ಪ್ರಸಾದ್, ರೋಹಿತ್, ಶರತ್, ಜಗದೀಶ್ ರೈ ದರ್ಬೆ, ಜಯಂತಿ ಜನಾರ್ದನ, ಕವಿತಾ ಬೊಳುವಾರುಬೈಲು, ನಂದನ ರೈ, ಇಂದಿರಾ, ಜಯಶ್ರೀ, ಜಯಂತಿ ನಾಯ್ಕ ಸಹಿತ ಹಲವಾರು ಭಾಗವಹಿಸಿದ್ದರು. ಬಳಿಕ ಶ್ರೀ ದುರ್ಗಾ ಉಳ್ಳಾಳ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನ (ರಿ.) ಇದರ ವಾರ್ಷಿಕೋತ್ಸವ ಪ್ರಯುಕ್ತ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಮತ್ತು ಹಿರಿಯ ಯಕ್ಷಗಾನ ಕಲಾವಿದರಿಗೆ ಗೌರವಾರ್ಪಣೆ ಕಾರ್ಯಕ್ರಮ, ಯಕ್ಷಗಾನ ಪ್ರದರ್ಶನ ನಡೆಯಿತು.

ಚಿತ್ರ: ಸೀಮಂತ್‌ಕುಮಾರ್ ಬೊಳುವಾರು

ಶಾಸಕ ಅಶೋಕ್ ಕುಮಾರ್ ರೈ ಭೇಟಿ, ಕಾಮಗಾರಿ ವೀಕ್ಷಣೆ:
ಕ್ಷೇತ್ರಕ್ಕೆ ಜ.10ರಂದು ಶಾಸಕ ಅಶೋಕ್‌ಕುಮಾರ್ ರೈ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ, ಅನುದಾನ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯವಾಗಿ ನಡೆದುಕೊಂಡು ಬರುತ್ತಿದ್ದ ಆಂಜನೇಯ ಮಂತ್ರಾಲಯದ ಬಳಿಯ ಮಹಾಲಿಂಗೇಶ್ವರ ದೇವರ ಸವಾರಿಯ ಸಂದರ್ಭದಲ್ಲಿ ಬೊಳುವಾರಿನ ಕಟ್ಟೆ ಪೂಜೆ ಮತ್ತು ಸಾರ್ವಜನಿಕ ಸತ್ಯನಾರಾಯಣ ಪೂಜೆಯನ್ನು ಯಥಾಪ್ರಕಾರ ನಡೆದುಕೊಂಡು ಬರಲು ಅನುಕೂಲ ಮಾಡಿಕೊಡಬೇಕಾಗಿ ನಗರಸಭಾ ಸದಸ್ಯ ಸಂತೋಷ್‌ಕುಮಾರ್ ಬೊಳುವಾರುರವರು ವಿನಂತಿಸಿಕೊಂಡಾಗ ಶಾಸಕರ ಸಕಾರಾತ್ಮಕವಾಗಿ ಸ್ಪಂದಿಸಿದರು. ಬಳಿಕ ದೇವರ ಸನ್ನಿಧಿಯಲ್ಲಿ ಶಾಸಕರಿಗೆ ಶಾಲು ಹಾಕಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸಹಿತ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here