ನಿವೃತ್ತ ಶಿಕ್ಷಕಿ ಮಾಲಿನಿ ಪಿ.ರವರಿಗೆ ನುಡಿನಮನ

0

ಪುತ್ತೂರು: ಬಂಗಾರಡ್ಕ, ಕಬಕ, ಬೊಳ್ವಾರು ಹಾಗೂ ಪುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕಿಯಾಗಿ 37 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು ಇತ್ತೀಚೆಗೆ ಅನಾರೋಗ್ಯದಿಂದ ಅಗಲಿದ ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ವಾಣಿಜ್ಯ ತೆರಿಗೆ ನಿರೀಕ್ಷಕ ಶೇಷಪ್ಪ ಬಂಗೇರರವರ ಪತ್ನಿ, ಪಾಂಗ್ಲಾಯಿ ನಿವಾಸಿ ಮಾಲಿನಿ ಪಿ.ರವರಿಗೆ ನುಡಿನಮನ ಕಾರ್ಯಕ್ರಮ ಜ.13 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ಮಧ್ಯಾಹ್ನ ಜರಗಿತು.

ನಿವೃತ್ತ ಪ್ರಾಧ್ಯಾಪಕರಾದ ಪ್ರೊ|ಕೃಷ್ಣಪ್ಪರವರು ಮಾತನಾಡಿ, ಜನನ ಹಾಗೂ ಮರಣ ಇವೆರಡರ ನಡುವೆ ಇರುವುದೇ ಜೀವನ. ಆ ಜೀವನವನ್ನು ಸಮಾಜದಲ್ಲಿ ಹೇಗೆ ನಡೆದುಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ. ವೃತ್ತಿ ಜೀವನದಲ್ಲಿ ಸಾಧಕರಾಗಿ, ಕೌಟುಂಬಿಕ ಜೀವನದಲ್ಲಿ ಆದರ್ಶಪ್ರಾಯರಾಗಿ ಗುರುತಿಸಿಕೊಂಡವರು ಶಿಕ್ಷಕಿ ಮಾಲಿನಿರವರು. ಪತಿಗೆ ಒಳ್ಳೆಯ ಪತ್ನಿಯಾಗಿ, ಮಕ್ಕಳಿಗೆ ಒಳ್ಳೆಯ ತಾಯಿಯಾಗಿ, ಮೊಮ್ಮಕ್ಕಳಿಗೆ ಪ್ರೀತಿಯ ಅಜ್ಜಿಯಾಗಿ, ಸಹೋದರ, ಸಹೋದರಿಯರಿಗೆ ಪ್ರೀತಿಯ ಸಹೋದರಿಯಾಗಿ, ಸಾವಿರಾರು ಮಕ್ಕಳಿಗೆ ಪ್ರೀತಿಯ ಶಿಕ್ಷಕಿಯಾಗಿ ಮಾಲಿನಿ ಪಿ.ರವರು ಗುರುತಿಸಿಕೊಂಡಿದ್ದು ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಅಗಲಿದ ಶ್ರೀಮತಿ ಮಾಲಿನಿ ಪಿ.ರವರ ಪತಿ ನಿವೃತ್ತ ವಾಣಿಜ್ಯ ತೆರಿಗೆ ನಿರೀಕ್ಷಕ ಹಾಗೂ ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಶೇಷಪ್ಪ ಬಂಗೇರ, ಪುತ್ರ ನವನೀತ್ ಪ್ರಸಾದ್, ಪುತ್ರಿ ನಮಿತಾ, ಅಳಿಯ ರಾಜೇಶ್, ಸೊಸೆ ನಮಿತಾ ಮಂಗಳೂರು, ಮೊಮ್ಮಕ್ಕಳಾದ ಆರ್ನವ್ ರಾಜೇಶ್, ರೇಯಾ ನವನೀತ್, ಶೌರ್ಯ ನವನೀತ್, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಮಾಜಿ ಅಧ್ಯಕ್ಷರಾದ ಕೆ.ಪಿ ದಿವಾಕರ್, ಜಯಂತ್ ನಡುಬೈಲು, ಆದರ್ಶ ಆಸ್ಪತ್ರೆಯ ವೈದ್ಯ ಡಾ.ಪ್ರಸಾದ್ ಭಂಡಾರಿ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ದಂಪತಿ, ಪ್ರಮುಖರಾದ ಡಾ.ರಾಜಾರಾಂ ಕೆ.ಬಿ, ಉಲ್ಲಾಸ್ ಕೋಟ್ಯಾನ್, ನಿತೀಶ್ ಶಾಂತಿವನ, ವೇದನಾಥ ಸುವರ್ಣ, ಮಾಧವ ಸಾಲಿಯಾನ್, ಆರ್.ಸಿ ನಾರಾಯಣ್ ಸಹಿತ ಹಲವರು ಉಪಸ್ಥಿತರಿದ್ದರು.

ಮೌನ ಪ್ರಾರ್ಥನೆ..ಪುಷ್ಪಾರ್ಚನೆ..
ಈ ಸಂದರ್ಭದಲ್ಲಿ ಅಗಲಿದ ನಿವೃತ್ತ ಶಿಕ್ಷಕಿ ಮಾಲಿನಿ ಪಿ.ರವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಆಗಮಿಸಿದ ಬಂಧು ಮಿತ್ರರು, ಹಿತೈಷಿಗಳು ಅಗಲಿದ ಮಾಲಿನಿ ಪಿ.ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

LEAVE A REPLY

Please enter your comment!
Please enter your name here