ಕುಮಾರಮಂಗಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ಕೇಂದ್ರ ಮತ್ತು ಕಲಿಕಾ ಹಬ್ಬದ ಉದ್ಘಾಟನಾ ಸಮಾರಂಭ

0


ಪುತ್ತೂರು: ಸವಣೂರು ಗ್ರಾಮ ಪಂಚಾಯತ್‌ ನ ಅನುದಾನ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದಿಂದ ನಿರ್ಮಾಣವಾದ ಯೋಗಕೇಂದ್ರ ಹಾಗೂ ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಶಿಕ್ಷಣ ಸಂಪನ್ಮೂಲ ಕೇಂದ್ರ ಸವಣೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಮಾರಮಂಗಲ ಇದರ ಸಂಯುಕ್ತ ಆಶ್ರಯದಲ್ಲಿ ಸವಣೂರು ಕ್ಲಸ್ಟರ್‌ ಮಟ್ಟದ ಬುನಾದಿ ಸಾಕ್ಷರತೆ ಸಂಖ್ಯಾ ಜ್ಞಾನ ಕಲಿಕಾ ಹಬ್ಬ 2025 ಕಾರ್ಯಕ್ರಮವನ್ನು ಶಾಸಕಿ ಭಾಗೀರಥಿರವರು ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಸವಣೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಸುಂದರಿ ಬಿ ಎಸ್‌ ವಹಿಸಿದ್ದರು. ಸವಣೂರು ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ಜಯಂತ್‌ ವೈ, ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಗ್ರಾಮ ಪಂಚಾಯತ್‌ ಸದಸ್ಯರಾದ ಗಿರಿಶಂಕರ್‌ ಸುಲಾಯ, ಯಶೋಧ ನೂಜಾಜೆ, ಭರತ್‌ ರೈ ಪಾಲ್ತಾಡು, ಚೇತನ ಪಾಲ್ತಾಡು, ರಫೀಕ್‌ ಮಾಂತೂರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್‌ ಕೆ ಸವಣೂರು, ಎಸ್.ಡಿ.ಎಂ.ಸಿ ಯ ಅಧ್ಯಕ್ಷರಾದ ಹೇಮಲತಾ ಕುಮಾರಮಂಗಲ, ಉಪಾಧ್ಯಕ್ಷ ಗಂಗಾಧರ ಕನ್ಯಾಮಂಗಲ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಚೇತನ್‌ ಕೋಡಿಬೈಲು, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು, ಪಿಡ್ಲ್ಯೂಡಿ ಕಾಂಟ್ರಾಕ್ಟರ್ ಗಂಗಾಧರ ಪೆರಿಯಡ್ಕ‌, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇದರ ಮುಖ್ಯಗುರು ನಿಂಗರಾಜು ಕೆ ಪಿ, ಪಲ್ಲತ್ತಾರು ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರುಗಳು ಸೀತಾರಾಮ ಕೆ ಜಿ, ಬೆಳಂದೂರು ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ಜಾನಕಿ ಕೆ ಆರ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಸೋಮೇಶ್‌ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ ಸದಸ್ಯರಾದ ಗಿರಿಶಂಕರ್‌ ಸುಲಾಯ, ಯಶೋಧ ನೂಜಾಜೆ, ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾದ ಜಯಶ್ರೀ ಕುಚ್ಚೆಜಾಲು, ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸುಂದರಿ ಬಿ ಎಸ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಸೋಮೇಶ್‌, ಪಿಡ್ಲ್ಯೂಡಿ ಕಾಂಟ್ರಾಕ್ಟರ್ ಗಂಗಾಧರ ಪೆರಿಯಡ್ಕ‌, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು ಎಸ್‌ ಡಿ ಎಂ ಸಿ ಯ ಮಾಜಿ ಸದಸ್ಯರಾದ ರಮೇಶ್‌ ಕುಮಾರಮಂಗಲ, ವಿಶ್ವನಾಥ ಕುಮಾರಮಂಗಲ ರವರಿಗೆ ಶಾಲಾ ವತಿಯಿಂದ ಶಾಸಕರು ಸನ್ಮಾನಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ನಾಣಿಲ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುನಿಲ್‌, ದೋಲ್ಪಾಡಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಜಯರಾಜ್‌, ಇಡ್ಯಡ್ಕ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಛತ್ರಕುಮಾರ್‌, ಚಾರ್ವಾಕ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶೋಭಾ, ಕಾಣಿಯೂರು ಹಿರಿಯ ಪ್ರಾಥಮಿಕ ಶಿಕ್ಷಕಿ ಸರೋಜ ಪಿ ಕೆ, ನಾರ್ಯಾಬೈಲು ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಜಯುಸ್‌ ಹೇಮಲತಾ ಗಂಗೇರ, ಕೊಪ್ಪ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಜ್ಯೋತಿ ದೇವರಮನೆ ಭಾಗವಹಿಸಿದರು.


ಕಾರ್ಯಕ್ರಮದಲ್ಲಿ ಎಸ್‌ ಡಿ ಎಂ ಸಿ ಸದ್ಯಸರಾದ ಯಮುನಾ, ಜೀವಿತ್‌ ಕುಮಾರ್‌, ವೇದಾವತಿ, ಸುರೇಖ, ರೇಖಾ, ಸರಿತಾ, ಸ್ಮಿತಾ, ಜಯಂತಿ, ಮಮತಾ, ಶ್ಯಾಮಲ, ನಿಶಲತಾ, ತಾರಾಮಣಿ, ರಶ್ಮಿತಾ, ಮೋಹಿನಿ, ಸುನಂದ, ಲೀಲಾವತಿ, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರಾದ ರಮೇಶ, ವಿಶ್ವನಾಥ, ನಾಗೇಶ, ಯತಿನ್‌, ಪುಟ್ಟಣ್ಣ ಮಡಿವಾಳ, ಅಂಗನವಾಡಿ ಶಿಕ್ಷಕಿ ಜಾನಕಿ, ಅಡುಗೆ ಸಿಬ್ಬಂದಿ ಶೇಷಮ್ಮ, ಶ್ಯಾಮಲ, ಶಾಲಾ ಅತಿಥಿ ಶಿಕ್ಷಕರಾದ ಸುಪ್ರಿಯ ಸಹಕರಿಸಿದರು. ಶಾಲಾ ಮುಖ್ಯಗುರುಗಳಾದ ಸಂತೋಷ್‌ ಎನ್‌ ಟಿ ಸ್ವಾಗತಿಸಿದರು. ಅತಿಥಿ ಶಿಕ್ಷಕರಾದ ಶ್ಯಾಮ್‌ ವಂದಿಸಿದರು. ಅತಿಥಿ ಶಿಕ್ಷಕರಾದ ರಾಜೇಶ್ವರಿ ಕನ್ಯಾಮಂಗಲ ನಿರೂಪಿಸಿದರು.

LEAVE A REPLY

Please enter your comment!
Please enter your name here