ನಾಳೆ(ಜ.15 ) ಆಗಳಿಯಲ್ಲಿ ಸಂಸಾರ ಕಲಾವಿದೆರ್ ಪುತ್ತೂರು ಅಭಿನಯದ” ನಂಬಿಕೆ ದಾಯೆ ” ನಾಟಕ

0

ಪುತ್ತೂರು: ಕಳೆದ 21 ವರ್ಷಗಳಿಂದ ತುಳು ರಂಗಭೂಮಿ ಯಲ್ಲಿ ಕಲಾಸೇವೆ ಮಾಡುತ್ತಿರುವ ಪ್ರತಿಷ್ಠಿತ . ಕೆ ಟಿ ಆನಂದ ಪೂಜಾರಿ ವಿಟ್ಲ ಸಾರಥ್ಯದ ಸಂಸಾರ ಕಲಾವಿದೆರ್ ಪುತ್ತೂರು ಅಭಿನಯದ ಸೂಪರ್ ಹಿಟ್ ಭಕ್ತಿ ಪ್ರಧಾನ ಹಾಸ್ಯ ನಾಟಕ ನಂಬಿಕೆದಾಯೆ ಇದರ 19 ನೇ ಪ್ರದರ್ಶನವು ಆಗಳಿ ಶ್ರೀ ಸದಾಶಿವ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಜ.15ರಂದು ರಾತ್ರಿ ಗಂಟೆ 8 ರಿಂದ ಪ್ರದರ್ಶನಗೊಳ್ಳಲಿದೆ.

ರಂಗ ಚಾಣಕ್ಯ ರಾಘವೇಂದ್ರ ಕಾರಂತ್ ಮೋಗರ್ನಾಡು ಇವರ ಸಂಭಾಷಣೆ ಸಾಹಿತ್ಯ ಮತ್ತು ಪ್ರಧಾನ ನಿರ್ದೇಶನ ಹಾಗೂ ಕಥೆ ,ಶೀರ್ಷಿಕೆ ಮತ್ತು ನಿರ್ದೇಶನ ನಾಗೇಶ್ ಬಲ್ನಾಡು ಇವರು ಮಾಡಿದ್ದಾರೆ. ಕಲಾವಿದರಾಗಿ ಬಾಲಕೃಷ್ಣ ಗೌಡ ಪೊಳ್ಯ, ಕೆ ಟಿ ಆನಂದ ಪೂಜಾರಿ ವಿಟ್ಲ, ಕಲಾ ರತ್ನ ಬಿ ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು, ಶ್ರೀಧರ ಪೂಜಾರಿ , ಕಲ್ಲೇಗ,ಕೃಷ್ಣ ಪ್ರಸಾದ್ ಬೆಟ್ಟಂಪಾಡಿ, ಹರೀಶ್ ಶೆಟ್ಟಿ ಗೋಳಿತೊಟ್ಟು , ಗಂಗಾಧರ ನಾಯ್ಕ ಕೌಡಿಕಚ್ಚಾರು , ನಿಖಿತ್ ಅರ್ಕ, ಅಣ್ಣಿ ಪೂಜಾರಿ ಅನಂತಿಮಾರ್, ಪ್ರಜ್ವಲ್ ಕೆರೆಮಾರು, ಅಖಿಲೇಶ್ ಶೆಟ್ಟಿ ಊರಮಾಲು ,ಕುಮಾರಿ ಸುನಿತಾ ವಿಟ್ಲ, ಕುಮಾರಿ ಕಾವ್ಯ ಬನ್ನೂರು ಕುಮಾರಿ ರಮ್ಯ ಬನ್ನೂರು ಮತ್ತು ಪ್ರಮುಖ ಪಾತ್ರದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ವೈರಲ್ ಸ್ಟಾರ್ ಗಣರಾಜ್ ಭಂಡಾರಿ ಅಭಿನಯಿಸಲಿದ್ದಾರೆ.


ಕೀರ್ತನ್ ಮಚ್ಚಿಮಲೆ ಸಂಗೀತ ನೀಡಲಿದ್ದು,ರಂಗಾಲಂಕಾರ ಸಂಸಾರ ಆರ್ಟ್ಸ್ ಪುತ್ತೂರು ,ವರ್ಣಾಲಂಕಾರ ಭಾಸ್ಕರ ಆಚಾರ್ಯ ಕಡೇಶಿವಾಲಯ, ಧ್ವನಿ ಮತ್ತು ಬೆಳಕು ಧನರಾಜ್ ಕುದ್ರೆಡ್ಕ ಇವರುಗಳು ಸಹಕರಿಸಲಿದ್ದು ಕಲಾಭಿಮಾನಿಗಳ ಕಲಾಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳವಂತೆ ತಂಡದ ಸಮಗ್ರ ನಿರ್ವಹಣೆ ಮಾಡುತ್ತಿರುವ ಕಲಾ ರತ್ನ ಬಿ ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಮುಂದಿನ ಪ್ರದರ್ಶನವು ಜ.17ರಂದು ರಾತ್ರಿ ಬನ್ನೂರು ದೇಂತಡ್ಕ ಶ್ರೀ ವನಶಾಸ್ಥಾರ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಪ್ರದರ್ಶನ ಗೊಳ್ಳಲಿದೆ.

LEAVE A REPLY

Please enter your comment!
Please enter your name here