ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬಜತ್ತೂರು ಗ್ರಾಮ ಸಮಿತಿ ರಚನೆ

0

ಪುತ್ತೂರು: ಪುತ್ತೂರು:ಹನುಮಗಿರಿ ಶ್ರೀಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ 2026ರ ಎಪ್ರಿಲ್‌ನಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಿರುವ ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಹಾಗೂ ಶ್ರೀರಾಮ ತಾರಕ ಜಪ ದೀಕ್ಷೆಯ ಸಲುವಾಗಿ ಬಜತ್ತೂರು ಗ್ರಾಮದ ಭಕ್ತಾದಿಗಳ ಸಭೆ ಹಾಗೂ ಗ್ರಾಮ ಸಮಿತಿ ರಚನೆ ಮುದ್ಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜ.8ರಂದು ನಡೆಸಿದರು.

ನಗರ ಗ್ರಾಮ ರಚನಾ ಸಮಿತಿಯ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಹನುಮಗಿರಿ ಕ್ಷೇತ್ರದ ಧರ್ಮದರ್ಶಿಗಳಾದ ಶಿವರಾಂ ಪಿ, ಪ್ರಧಾನ ಕಾರ್ಯದರ್ಶಿ ಆರ್ ಸಿ ನಾರಾಯಣ್, ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಸೀತಾರಾಮ ರೈ, ಪದಾಧಿಕಾರಿಗಳಾದ ನಹುಷ , ಮುದ್ಯ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ವೇಣುಗೋಪಾಲ, ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ಶ್ರೀಧರ ಗೌಡ, ಪಂಚಲಿಂಗೇಶ್ವರ ದೇವಸ್ಥಾನ ಅರ್ಚಕರಾದ ಈಶ್ವರ ಪ್ರಸಾದ್, ಬಜತ್ತೂರು ಪಂಚಾಯತ್ ಅಧ್ಯಕ್ಷರಾದ ಗಂಗಾಧರ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಮುಕುಂದ ಹಾಗೂ ಗ್ರಾಮದ ಭಕ್ತರ ಸಮ್ಮುಖದಲ್ಲಿ ತಂಡವನ್ನು ರಚಿಸಲಾಯಿತು.

ಬಜತ್ತೂರು ಗ್ರಾಮ ಸಮಿತಿ ಅಧ್ಯಕ್ಷರಾಗಿ ಶಿವರಾಮ ಕಾರಂತ, ಪ್ರಧಾನ ಕಾರ್ಯದರ್ಶಿಯಾಗಿ ವಸಂತ ಪಿಜಕ್ಕಳ,ಜಪ ಯಜ್ಞ ಸಮಿತಿ ಗ್ರಾಮ ಸಂಚಾಲಕರಾಗಿ ಸಂತೋಷ್ ಕುಮಾರ್ ಪರ್ದಾಂಜೆ,ಸಹ ಸಂಚಾಲಕರಾಗಿ ಸಚಿನ್ ಮುದ್ಯ,ಪ್ರವೀಣ್ ಮುಡಂಬಡಿತ್ತಾಯ,ದೇರಣ್ಣ ಓಮಂದೂರು,ರಾಜೇಶ್ ಪಿಜಕ್ಕಳ,ರಥಯಾತ್ರೆ ಗ್ರಾಮ ಸಂಚಾಲಕರಾಗಿ ನಾರಾಯಣ ಪೂಜಾರಿ,ಸಹ ಸಂಚಾಲಕರಾಗಿ ಗೋಪಾಲ ಬಾರಿಕೆ,ಲಕ್ಷೋತ್ತರ ನಾರಿಕೇಳ ಗ್ರಾಮ ಸಂಚಾಲಕರಾಗಿ ವಾಸು ಗೌಡ ದಡ್ಡು,ಸಹ ಸಂಚಾಲಕರಾಗಿ ಮುಕುಂದ,ಉಮೇಶ್ ಕೋಡಿಜಾಲು,ಕುಶಾಲಪ್ಪ ಗೌಡ ಸುಳ್ಯ,ಮಾಧವ ಓರ್ಬೊಂಡಿ,ಭಜನಾ ಸಂಕೀರ್ತನಾ ಗ್ರಾಮ ಸಂಚಾಲಕರಾಗಿ ಗಂಗಾಧರ ಪರ್ದಾಂಜೆ,ಸಹ ಸಂಚಾಲಕರಾಗಿ ಉಮೇಶ್ ನೆಕ್ಕರೆ,ಕೇಶವ ಅಗರ್ತಿಮಾರು,ಗೋಪಾಲ ದಡ್ಡು,ಮಹಿಳಾ ಸಮಿತಿ ಗ್ರಾಮ ಸಂಚಾಲಕಿಯಾಗಿ ಸುಜಾತ ನೆಕ್ಕರೆ,ಸಹ ಸಂಚಾಲಕಿಯಾಗಿ ಸ್ಮಿತಾ ಪುಯಿಲ,ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಶರತ್ ಮುದ್ಯ ಅವರನ್ನು ನೇಮಿಸಲಲಾಯಿತು.

ಈ ಸಂದರ್ಭದಲ್ಲಿ ಶಿವರಾಮ ಕಾರಂತ, ಶ್ರೀಧರ ಗೌಡ, ಸಂತೋಷ್ ಕುಮಾರ್ ಪಿ, ಪದ್ಮಯ್ಯ ಗೌಡ, ಹರಿಶ್ಚಂದ್ರ ಗೌಡ , ದಾಮೋದರ ಗೌಡ ಶೇಡಿ, ಆನಂದ, ಜನಾರ್ಧನ, ರುಕ್ಮಯ ಗೌಡ, ಚಂದ್ರಶೇಖರ ಗೌಡ, ಗಂಗಾಧರ, ವಾಸು, ಉಮೇಶ, ಗಂಗಾಧರ, ವಸಂತ ಗೌಡ, ನಾರಾಯಣ ಪೂಜಾರಿ, ವೇಣುಗೋಪಾಲ, ಈಶ್ವರ ಪ್ರಸಾದ್, ಮುಕುಂದ ಬಜತ್ತೂರು, ಭದ್ರಪ್ಪ ಗೌಡ, ದುಗ್ಗಪ್ಪ ಗೌಡ, ಗೋಪಾಲ ಮತ್ತು ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here