ಆಂಧ್ರಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕಬಡ್ಡಿಗೆ ಬೆಥನಿ ಶಾಲಾ ಬಾಲಕಿಯರ ತಂಡ – ತಾ|ಅಮೆಚೂರ್ ಅಸೋಸಿಯೇಷನ್ ನಿಂದ ಜೆರ್ಸಿ ಹಸ್ತಾಂತರ

0

ಪುತ್ತೂರು: ಆಂಧ್ರಪ್ರದೇಶದ ಗುಡ್ವಿಡ ಎಂಬಲ್ಲಿ ಜನವರಿ 18ರಿಂದ 23ರ ವರೆಗೆ 14ರ ವಯೋಮಿತಿಯ ಬಾಲಕಿಯರ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಪ್ರಥಮ ಸ್ಥಾನದೊಂದಿಗೆ ಸತತ ಮೂರನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬೆಥನಿ ಶಾಲಾ ಬಾಲಕಿಯರ ತಂಡಕ್ಕೆ ಪುತ್ತೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಆಶ್ರಯದಲ್ಲಿ ಹೊಳ್ಳ ಕ್ರ್ಯಾಕರ್ಸ್ ನ ಧರೇಶ್ ಹೊಳ್ಳ ಪ್ರಾಯೋಜಕತ್ವದಲ್ಲಿ ಜ.14 ರಂದು ದರ್ಬೆ ಲಿಟಲ್ ಫ್ಲವರ್ ಶಾಲೆಯಲ್ಲಿ ಜೆರ್ಸಿಯನ್ನು ಹಸ್ತಾಂತರಿಸಲಾಯಿತು.


ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನ ಗೌರವಾಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ನಮ್ಮ ಊರಿನ ಹೆಣ್ಮಕ್ಕಳು ರಾಷ್ಟ್ರಮಟ್ಟದ ಕಬಡ್ಡಿಗೆ ಆಯ್ಕೆಯಾಗಿರುವುದು ಊರಿಗೆ ಹಾಗೂ ಅಮೆಚೂರ್ ಅಸೋಸಿಯೇಷನ್ ಗೆ ಸಂತಸ ತಂದಿದೆ. ಇಂದಿನ ದಿನಗಳಲ್ಲಿ ಕಬಡ್ಡಿ ಅಂದಾಕ್ಷಣ ಲಿಟಲ್ ಫ್ಲವರ್ ಶಾಲೆ ನೆನಪಾಗುತ್ತದೆ. ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿಯಲ್ಲಿ ನಮ್ಮ ಬಾಲಕಿಯರು ಅದ್ವಿತೀಯ ಸಾಧನೆ ಮಾಡಿದ್ದರು. ನಾಡಿದ್ದು ನಡೆಯುವ ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಶಾಲೆಗೆ, ಜಿಲ್ಲೆಗೆ, ರಾಜ್ಯಕ್ಕೆ ಹೆಸರು ಗಳಿಸುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.


ಲಿಟಲ್ ಫ್ಲವರ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಐರಿನ್ ವೇಗಸ್, ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲುಗುತ್ತು, ಪಂದ್ಯಾಟ ಸಮಿತಿ ಅಧ್ಯಕ್ಷ ಶಿವರಾಮ ಆಳ್ವ, ಕೋಶಾಧಿಕಾರಿ ರಝಾಕ್ ಬಿ.ಎಚ್, ರೆಫ್ರೀ ಬೋರ್ಡ್ ಅಧ್ಯಕ್ಷ ಆಸಿಫ್ ತಂಬುತ್ತಡ್ಕ, ಸದಸ್ಯರಾದ ರಾಕೇಶ್ ರೈ ಬೋಳೋಡಿಗುತ್ತು, ರಫೀಕ್ ಎಂ.ಕೆ ಮುಕ್ರಂಪಾಡಿ, ವಿಜಿತ್ ನಿಡ್ಪಳ್ಳಿ, ಬೆಥನಿ ಶಾಲಾ ಬಾಲಕಿಯರ ತಂಡದ ನಾಯಕಿ ಜ್ಯುವಾನ್ನಾ ಡ್ಯಾಝಿಲಾ ಕುಟಿನ್ಹಾ, ಜೆನಿಟಾ ಸಿಂಧು ಪಸನ್ನ, ಹಾರ್ದಿಕಾ, ಶಾಲೆಯ ಶಿಕ್ಷಕಿ ವಿಲ್ಮಾ ಉಪಸ್ಥಿತರಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಲಕೃಷ್ಣ ರೈ ಪೊರ್ದಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವಿಜಯಶಾಲಿಗೆ ರೂ.25 ಸಾವಿರ..
ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಪ್ರತಿನಿಧಿಸುವ ಬೆಥನಿ ಶಾಲಾ ಬಾಲಕಿಯರ ತಂಡಕ್ಕೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ರೂ.5 ಸಾವಿರ ನಗದನ್ನು ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡರವರು ಘೋಷಿಸಿದರು. ಬೆಥನಿ ಶಾಲಾ ಬಾಲಕಿಯರು ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ವಿಜಯಶಾಲಿಯಾಗಿ ಬಂದರೆ ತಾಲೂಕು ಅಮೆಚೂರ್ ಅಸೋಸಿಯೇಷನ್ ನಿಂದ ರೂ.25 ಸಾವಿರ ಬಹುಮಾನ ನೀಡಲಿದ್ದೇವೆ ಎಂದು ತಾಲೂಕು ಅಮೆಚೂರ್ ಅಸೋಸಿಯೇಷನ್ ಪ್ರಕಟಣೆ ತಿಳಿಸಿದೆ.

ಶೀರ್ಘದಲ್ಲಿ ಪ್ರಾಥಮಿಕ, ಪ್ರೌಢ,ಮುಕ್ತ ಕಬಡ್ಡಿ…
ಪುತ್ತೂರಿನಲ್ಲಿ ಬಾಲಕ-ಬಾಲಕಿಯರಿಗೆ ಕಬಡ್ಡಿ ಪಂದ್ಯಾಟ ಏರ್ಪಡಿಸಬೇಕು, ಆ ಮೂಲಕ ಕಬಡ್ಡಿ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಕೊಡುವಂತೆ ಕೂಗು ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಪ್ರಾಥಮಿಕ, ಪ್ರೌಢಶಾಲೆಯ 14ರ ಹಾಗೂ 17ರ ವಯೋಮಾನದ ಬಾಲಕ-ಬಾಲಕಿಯರ ಹಾಗೂ ಮುಕ್ತ ಪುತ್ತೂರು ತಾಲೂಕು ಚಾಂಪಿಯನ್ ಶಿಪ್ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟವನ್ನು ದರ್ಬೆ ನಿರೀಕ್ಷಣ ಮಂದಿರದ ಎದುರಿನ ಟರ್ಫ್ ಮೈದಾನದಲ್ಲಿ ನಡೆಸುವ ಯೋಜನೆಯನ್ನು ಸಭೆಯಲ್ಲಿ ಹಮ್ಮಿಕೊಳ್ಳಲಾಯಿತು.

LEAVE A REPLY

Please enter your comment!
Please enter your name here