ಪುತ್ತೂರು ತಾ|ಕಾರ್ಯನಿರತ ಪತ್ರಕರ್ತರ ಸಂಘದ ಪದಗ್ರಹಣ

0

ಕಾನ್‌ಸ್ಟಿಟ್ಯೂಷನಲ್ ಇನ್ವಾಲ್ವ್‌ಮೆಂಟ್ ಈಸ್ ನಾಟ್ ಕರೆಕ್ಟ್-ಅಶೋಕ್ ಕುಮಾರ್ ರೈ


ಪುತ್ತೂರು:ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮುಂದಿನ ಮೂರು ವರ್ಷಗಳ ಅವಽಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜ.24ರಂದು ಸರಕಾರಿ ನೌಕರರ ಸಂಘದ ಸಭಾ ಭವನದಲ್ಲಿ ನಡೆಯಿತು.


ಕಾನ್‌ಸ್ಟಿಟ್ಯೂಷನಲ್ ಇನ್ವಾಲ್ವ್‌ಮೆಂಟ್ ಈಸ್ ನಾಟ್ ಕರೆಕ್ಟ್-ಅಶೋಕ್ ಕುಮಾರ್ ರೈ:
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ನಮ್ಮ ಸಂವಿಧಾನದ ನಾಲ್ಕನೇ ಅಂಗವಾಗಿ ಪತ್ರಿಕಾ ರಂಗವನ್ನು ನಾವು ಒಪ್ಪಿಕೊಂಡಿದ್ದೇವೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಈ ಮೂರು ರಂಗದಲ್ಲಾಗುವ ತಪ್ಪನ್ನು ಎತ್ತಿಹಿಡಿದು, ಅದನ್ನು ತಿದ್ದುವ ಕೆಲಸವನ್ನು ಪತ್ರಿಕಾ ರಂಗ ಮಾಡುತ್ತಿದೆ.ಸಂವಿಧಾನದಲ್ಲಿ ಯಾರಿಗೂ ಅಽಕಾರ ಚಲಾಯಿಸುವ ಹಕ್ಕಿಲ್ಲ.ಈ ನಿಟ್ಟಿನಲ್ಲಿ ಕಾನ್‌ಸ್ಟಿಟ್ಯೂಷನಲ್ ಇನ್ವಾಲ್ವ್‌ಮೆಂಟ್ ಈಸ್ ನಾಟ್ ಕರೆಕ್ಟ್.ಇದು ನನ್ನ ವೈಯಕ್ತಿಕ ಅನಿಸಿಕೆ ಎಂದು ಹೇಳಿದರು.ನ್ಯಾಯಾಂಗ ದುರ್ಬಳಕೆಯಾದರೆ ಯಾರಿಗೂ ನ್ಯಾಯ ದೊರೆಯಲು ಸಾಧ್ಯವಿಲ್ಲ.ನ್ಯಾಯಾಂಗದಲ್ಲಿ ಕೂರಿಸುವಾಗಲೇ ರಾಜಕೀಯ ಮಾಡಿದರೆ ಅವರಿಂದ ನಿರೀಕ್ಷಿತ ನ್ಯಾಯ ದೊರೆಯಲು ಸಾಧ್ಯವಿಲ್ಲ.ಸಿಬಿಐ,ಇಡಿಯಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿದರೆ ದೇಶದಲ್ಲಿ ಯಾರಿಗೂ ನ್ಯಾಯ ಕೊಡಲು ಸಾಧ್ಯವಿಲ್ಲ.ಸಂವಿಧಾನದ ಅಂಗಗಳನ್ನು ದುರ್ಬಳಕೆ ಮಾಡಿದರೆ ದೇಶದ ಅವನತಿಗೆ ಕಾರಣವಾಗಬಹುದು.ಸಂವಿಧಾನಾತ್ಮಕ ಹಸ್ತಕ್ಷೇಪವಿಲ್ಲದೆ ಆಡಳಿತ ನಡೆಸಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದ ಶಾಸಕರು, ಮಾದಕ ದ್ರವ್ಯ, ಸೈಬರ್ ಕ್ರೈಂ, ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ವಿದ್ಯಾರ್ಥಿಗಳು ಸದಾ ಜಾಗರೂಕರಾಗಿರಬೇಕು ಎಂದು ಹೇಳಿದರು.


ಶಾಸಕರಂತೆ ಪತ್ರಕರ್ತರೂ ಒಗ್ಗಟ್ಟಿನಲ್ಲಿರಬೇಕು-ಡಾ.ಯು.ಪಿ.ಶಿವಾನಂದ:
ಮುಖ್ಯ ಅತಿಥಿಯಾಗಿದ್ದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ,ಹಿರಿಯ ಪತ್ರಕರ್ತರೂ ಆಗಿರುವ ಡಾ.ಯು.ಪಿ.ಶಿವಾನಂದ ಅವರು ಮಾತನಾಡಿ,ಪತ್ರಕರ್ತರನ್ನು ನೋಡಿ ಹೆದರುವ ಪರಿಸ್ಥಿತಿ ಬರಬಾರದು.ಹೆದರಿಸುವ ಪ್ರವೃತ್ತಿಯೂ ಪತ್ರಕರ್ತರಲ್ಲಿ ಇರಬಾರದು.ಸದನದಲ್ಲಿ ವಿರೋಧ ಮಾಡಿದರೂ ಹೊರಗೆ ಬಂದಾಗ ಎಲ್ಲಾ ಶಾಸಕರು ಒಂದಾಗುತ್ತಾರೆ.ಅದೇ ರೀತಿ ಪತ್ರಕರ್ತರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.ಪತ್ರಕರ್ತರೂ ಈ ರೀತಿ ಒಗ್ಗಟ್ಟಾಗುವುದನ್ನು ಶಾಸಕರಿಂದ ತಿಳಿಯಬೇಕು.ರಾಜ್ಯದ 224 ಶಾಸಕರು ಒಗ್ಗಟ್ಟಾಗುವಂತೆ ಪುತ್ತೂರಿನಲ್ಲಿ 42 ಪತ್ರಕರ್ತರೂ ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.ಪತ್ರಕರ್ತರು ಎಲ್ಲವನ್ನು ತಿದ್ದುವವರು.ಪತ್ರಕರ್ತರನ್ನು ಪತ್ರಿಕೆಯವರೇ ಗುರುತಿಸದಿದ್ದರೆ,ಪತ್ರಕರ್ತರ ಬಗ್ಗೆ ನಮಗೇ ಹೆಮ್ಮೆಯಾಗದಿದ್ದರೆ ಸಮಾಜ ಹೇಗೆ ಗುರುತಿಸಲು ಸಾಧ್ಯ.ಈ ನಿಟ್ಟಿನಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿರುವ ನಮ್ಮೂರಿನ ಪತ್ರಕರ್ತರನ್ನು ಗುರುತಿಸುವ ಮೂಲಕ ಪತ್ರಕರ್ತರ ಗೌರವವನ್ನು ಹೆಚ್ಚಿಸುವ ಕೆಲಸವನ್ನು ಕಳೆದ 40 ವರ್ಷಗಳಿಂದ ಸುದ್ದಿ ಬಿಡುಗಡೆ ಪತ್ರಿಕೆ ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿಯಲ್ಲಿ ನಿರಂತರವಾಗಿ ಮಾಡುತ್ತಿದೆ ಎಂದರು.


ಪತ್ರಕರ್ತರಿಗೆ ಜಿಲ್ಲೆ, ತಾಲೂಕಿನಲ್ಲಿ ಪ್ರತ್ಯೇಕ ಕ್ಷೇಮ ನಿಧಿ-ಪುಷ್ಪರಾಜ್ ಬಿ.ಎನ್:
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪುಷ್ಪರಾಜ ಬಿ.ಎನ್ ಮಾತನಾಡಿ, ದ.ಕ ಜಿಲ್ಲೆಯಲ್ಲಿ ಪ್ರತಿವರ್ಷ ಸಹಸ್ರಾರು ವಿದ್ಯಾರ್ಥಿಗಳು ಪದವಿ ಪಡೆದು ಹೊರಹೋಗುತ್ತಿದ್ದು ಮುಂದೆ ಅವರನ್ನು ಹುಡುಕಬೇಕಾಗಿದೆ.ಶಾಸಕರ ಯೋಚನೆಯಂತೆ ದ.ಕ ಜಿಲ್ಲೆಯ ಮಂಗಳೂರು ಎಜ್ಯುಕೇಶನ್ ಹಬ್ ಆಗುವಂತೆ ಉದ್ಯೋಗಕ್ಕೂ ಹಬ್ ಆಗಬೇಕು. ಕೆಪಿಟಿ ಮಂಗಳೂರಿನಲ್ಲಿದ್ದರೂ ಉದ್ಯೋಗವಿಲ್ಲದಿರುವುದು ಜಿಲ್ಲೆಯ ದುರಂತ. ಉದ್ಯೋಗಕ್ಕಾಗಿ ಹೊರ ರಾಜ್ಯ, ಹೊರ ದೇಶಕ್ಕೆ ಹೋಗಬೇಕಾದ ಅನಿವಾರ್ಯತೆಯಿದೆ.ಜಿಲ್ಲೆಯವರೇ ಜಿಲ್ಲೆಯಲ್ಲಿ ಕೆಲಸ ಮಾಡುವಂತಾಗಬೇಕು.ಈ ವಿಚಾರದಲ್ಲಿ ಮಾಧ್ಯಮಗಳೂ ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.ಪತ್ರಕರ್ತರಿಗೆ ಅಪಘಾತ ವಿಮೆಯಿದೆ.ಅದರಂತೆ ಆರೋಗ್ಯ ವಿಮೆಯ ಅಗತ್ಯವಿದೆ.ಜಿಲ್ಲೆ, ತಾಲೂಕಿನಲ್ಲಿ ಪ್ರತ್ಯೇಕ ಕ್ಷೇಮ ನಿಽ ಮಾಡುವ ಯೋಚನೆಯಿದೆ. ಉತ್ತಮ ಗುರಿ, ಉದ್ದೇಶ ಇಟ್ಟುಕೊಂಡು ಸಂಘಟನೆ ಬೆಳೆಯಬೇಕು. ಪುತ್ತೂರಿನ ಸಂಘದ ಜೊತೆಗೆ ಜಿಲ್ಲಾ ಸಂಘವಿದೆ ಎಂದವರು ಭರವಸೆ ನೀಡಿ,ನೂತನ ತಂಡಕ್ಕೆ ಶುಭಹಾರೈಸಿದರು.


ಸಾಮಾಜಿಕ ಜಾಗೃತಿಯ ಮೂಲಕ ಮಾತ್ರ ಡ್ರಗ್ಸ್ ನಿಯಂತ್ರಣ ಸಾಧ್ಯ-ಅನಿಲ್ ಕುಮಾರ್ ಭೂಮಾರೆಡ್ಡಿ:
ಸೈಬರ್ ಅಪರಾಧದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಅನಿಲ್ ಕುಮಾರ್ ಎಸ್. ಭೂಮಾರೆಡ್ಡಿ ಮಾತನಾಡಿ, ತಂತ್ರಜ್ಞಾನದಲ್ಲಿ ಬಹಳಷ್ಟು ಬೆಳೆದಿದೆ.ಎಲ್ಲಾ ರಂಗದಲ್ಲಿಯೂ ಮುಂಚೂಣಿಯಲ್ಲಿದೆ.ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ವ್ಯಕ್ತಿತ್ವ ವಿಕಸನಕ್ಕಾಗಿ ಬಳಸಬೇಕು.ಅದರಲ್ಲಿಯೇ ಮುಳುಗಬಾರದು. ಖಾಸಗಿ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು.ಅವಶ್ಯಕ ವಿಚಾರಗಳನ್ನು ಮಾತ್ರ ಹಂಚಿಕೊಳ್ಳಬೇಕು.ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಶಿಸ್ತು ಮೀರಿದರೆ ಆಪತ್ತು ಖಂಡಿತ ಬರಲಿದೆ ಎಂದರು.ಡಿಜಿಟಲ್ ಅರೆಸ್ಟ್, ಉದ್ಯೋಗ ವಂಚನೆ, ಲೈಂಗಿಕ ಶೋಷಣೆಗಳು ನಡೆಯುತ್ತಿದೆ.ಮಾದಕ ದ್ರವ್ಯಗಳ ನಿಯಂತ್ರಣದಲ್ಲಿ ಪೊಲೀಸ್ ಇಲಾಖೆ ಮಾತ್ರವಲ್ಲ ೪೨ ಇಲಾಖೆಗಳು ಸೇರಿಕೊಂಡಿದೆ. ಇದರ ಬಗ್ಗೆ ಜಾಗೃತಿ ಅವಶ್ಯಕ. ಸಾಮಾಜಿಕ ಜಾಗೃತಿಯ ಮೂಲಕ ಮಾತ್ರ ನಿಯಂತ್ರಣ ಸಾಧ್ಯ ಎಂದು ಹೇಳಿದ ಎಡಿಷನಲ್ ಎಸ್ಪಿಯವರು, ಡಿಜಿಟಲ್ ಅರೆಸ್ಟ್ ಅನ್ನುವ ವಿಷಯವೇ ಕಾನೂನಿನಲ್ಲಿ ಇಲ್ಲ.ಜನರು ಈ ವಿಚಾರದಲ್ಲಿ ಜಾಗೃತರಾಗಿರಬೇಕು ಎಂದು ಕರೆ ನೀಡಿದರು.


ಸರಕಾರಿ ನೌಕರರ ಸಂಘದ ಹೋರಾಟಗಳಿಗೆ ಪತ್ರಕರ್ತರಿಂದ ಉತ್ತಮ ಸಹಕಾರ-ಶಿವಾನಂದ ಆಚಾರ್ಯ:
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಆಚಾರ್ಯ ಮಾತನಾಡಿ, ಸರಕಾರಿ ನೌಕರರ ಸಂಘಕ್ಕೂ ಪತ್ರಕರ್ತರ ಸಂಘಕ್ಕೂ ಅವಿನಾಭಾವ ಸಂಬಂಧವಿದೆ.ಸರಕಾರಿ ನೌಕರರ ಸಂಘದ ಬೇಡಿಕೆಗಳನ್ನು ಪತ್ರಕರ್ತರ ಮೂಲಕ ಸರಕಾರ ಹಾಗೂ ಸಮಾಜದ ಮುಂದೆ ಇಟ್ಟಾಗ ನಮ್ಮ ಹೋರಾಟಗಳಿಗೆ ಪತ್ರಕರ್ತರಿಂದ ಉತ್ತಮ ಸಹಕಾರ ದೊರೆತಿದೆ. ಪತ್ರಕರ್ತರ ಲೇಖನಿ ಹರಿತವಾದ ಕತ್ತಿಗಿಂತಲೂ ಶಕ್ತಿಯುತವಾಗಿದ್ದು ಎಂಬ ಮಾತಿದೆ.ಆದರೆ ಟಿಆರ್‌ಪಿ, ಬ್ರೇಕಿಂಗ್ ನ್ಯೂಸ್‌ಗಾಗಿ ಸತ್ಯಾಸತ್ಯತೆ ಮರೆಯಬಾರದು. ಭಾರತದಲ್ಲಿ ಪತ್ರಕರ್ತರು ಜವಾಬ್ದಾರಿಯುತವಾಗಿ ಕೆಲಸ ಮಾಡುವುದರಿಂದ ದೇಶ ಸುಭದ್ರವಾಗಿದೆ ಎಂದರು.


ಪುತ್ತೂರು ಸಂಘ ರಾಜ್ಯಕ್ಕೆ ಮಾದರಿ-ಶ್ರೀನಿವಾಸ ನಾಯಕ್:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಪುತ್ತೂರು ತಾಲೂಕು ಸಂಘದ ಮೂಲಕ ಉತ್ತಮ ಮಾಹಿತಿ ನೀಡುವ ಕಾರ್ಯಕ್ರಮವಾಗಿದ್ದು ಎಲ್ಲಾ ವಿಷಯದಲ್ಲಿ ಪುತ್ತೂರು ಸಂಘ ರಾಜ್ಯದ ಗಮನ ಸೆಳೆದಿದೆ.ಇಲ್ಲಿನ ಉತ್ತಮ ಸಂಘಟನೆ ರಾಜ್ಯಕ್ಕೆ ಮಾದರಿಯಾಗಿದೆ.ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡದಾಗ ನಾವು ಪಡೆಯಬೇಕಾದ ಸವಲತ್ತುಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದರು.


ಒಂದೇ ಕುಟುಂಬದವರಂತೆ ಕೆಲಸ ಮಾಡುವ-ಸಿದ್ದೀಕ್ ನೀರಾಜೆ:
ಸಂಘದ ನಿರ್ಗಮಿತ ಅಧ್ಯಕ್ಷ,ಜಿಲ್ಲಾ ಸಂಘದ ಕಾರ್ಯದರ್ಶಿ ಸಿದ್ದಿಕ್ ನೀರಾಜೆ ಮಾತನಾಡಿ, ಮಾಧ್ಯಮ ಕ್ಷೇತ್ರದ ತನ್ನ ಸುದೀರ್ಘ ಇಪ್ಪತ್ತೇಳು ವರ್ಷಗಳಲ್ಲಿ ತಾನು ಬೆಳೆದು ಬಂದಿರುವುದು ಸುದ್ದಿ ಬಿಡುಗಡೆ ಪತ್ರಿಕೆಯ ಮೂಲಕ.ಕಳೆದ ಅವಧಿಯಲ್ಲಿ ಸಂಘದ ಮೂಲಕ ಉತ್ತಮ ಕೆಲಸ ಕಾರ್ಯಗಳನ್ನು ನಡೆಸಲಾಗಿದೆ.ನೂತನ ತಂಡವು ಇನ್ನಷ್ಟು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಮೂಲಕ ಸಂಘವನ್ನು ಮುನ್ನಡೆಸಬೇಕು. ಪ್ರತಿಯೊಬ್ಬರೂ ಒಂದೇ ಕುಟುಂಬದವರಂತೆ ಕೆಲಸ ಮಾಡೋಣ ಎಂದು ಹೇಳಿದರು.


ಜನಪ್ರತಿನಿಧಿಗಳಂತೆ ಪತ್ರಕರ್ತರೂ ತಂಡವಾಗಿ ಕೆಲಸ-ಸುಧಾಕರ ಸುವರ್ಣ:
ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ೧೯೯೬ರಲ್ಲಿ ಪ್ರಾರಂಭಗೊಂಡಿರುವ ಪುತ್ತೂರಿನ ಪತ್ರಕರ್ತರ ಸಂಘವು ಮೂರುದಶಕಗಳನ್ನು ಸಾಗಿದೆ.೨೦೨೨ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜೊತೆ ಸಂಯೋಜನೆಗೊಂಡು ಇದೀಗ ಎರಡನೇ ಅವಽಗೆ ಸಂಘದ ಪದಾಽಕಾರಿಗಳ ತಂಡ ಬಂದಿದೆ.ಪತ್ರಕರ್ತರು ಒಂದೇ ಮನೆಯವರಂತೆ ಸಂಘದಲ್ಲಿ ಮನೆಯ ಚೌಕಟ್ಟು ನಿರ್ಮಾಣದ ಉದ್ದೇಶದಿಂದ ಸಂಘಕ್ಕೆ ಸೌಹಾರ್ದಯುತವಾಗಿ ಪದಾಽಕಾರಿಗಳ ಆಯ್ಕೆ ಅವಿರೋಧವಾಗಿ ನಡೆದಿದೆ. ಸಮಾಜದ ಅಂಕುಡೊಂಕು ತೋರಿಸುವ ಪ್ರಯತ್ನದ ಹಾದಿಯಲ್ಲಿ ಸಾಗಲು ಉತ್ತಮ ತಂಡ ರಚನೆಯಾಗಿದೆ. ಜನಪ್ರತಿನಿಧಿಗಳಂತೆ ಪತ್ರಕರ್ತರೂ ತಂಡವಾಗಿ ಕೆಲಸ ಮಾಡಲಿರುವುದಾಗಿ ಹೇಳಿದರು.


ಕನ್ನಡ ಸಾಹಿತ್ಯ ಪರಿಷತ್‌ನಿಂದ ಅಭಿನಂದನೆ:
ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಪತ್ರಕರ್ತರ ಸಂಘದ ನೂತನ ಪದಾಽಕಾರಿಗಳನ್ನು ಕನ್ನಡದ ಶಾಲು ಹಾಗೂ ಪುಸ್ತಕ ನೀಡಿ ಅಭಿನಂದಿಸಿದರು.ಸಾಹಿತಿಗಳಾದ ಸುಲೋಚನಾ ಪಿ.ಕೆ., ನಾರಾಯಣ ರೈ ಕುಕ್ಕುವಳ್ಳಿ ಉಪಸ್ಥಿತರಿದ್ದರು.


ಡಾ.ಯು.ಪಿ ಶಿವಾನಂದರಿಂದ ಅಭಿನಂದನೆ:
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಸುಧಾಕರ ಸುವರ್ಣ ತಿಂಗಳಾಡಿಯವರನ್ನು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ ಅವರು ಪತ್ರಿಕೆ, ಕ್ಯಾಲೆಂಡರ್ ನೀಡಿ ಅಭಿನಂದಿಸಿದರು.


ಕೈಕಾರ ಶಾಲಾ ಶತಮಾನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ:
ಕೈಕಾರ ಹಿ.ಪ್ರಾ ಶಾಲೆಯಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಶಾಲಾ ಶತಮಾನೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಅತಿಥಿಗಳು ಬಿಡುಗಡೆಗೊಳಿಸಿದರು. ಶಾಲಾ ಶತಮಾನೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಸಂಜೀವ ಮಠಂದೂರು ಭೇಟಿ:
ಕಾರ್ಯುಕ್ರಮದ ಕೊನೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಸಂಘದ ನೂತನ ಪದಾಽಕಾರಿಗಳನ್ನು ಅಭಿನಂದಿಸಿದರು.


ಪದಗ್ರಹಣ:
ನಿರ್ಗಮಿತ ಅಧ್ಯಕ್ಷ ಸಿದ್ದೀಕ್ ನೀರಾಜೆ ಅವರು ನೂತನ ಅಧ್ಯಕ್ಷ ಸುಧಾಕರ ಸುವರ್ಣ ಅವರಿಗೆ ದಾಖಲೆ ಪತ್ರ ನೀಡುವ ಮೂಲಕ ಪದಗ್ರಹಣ ನೆರವೇರಿತು.ನೂತನ ಪದಾಧಿಕಾರಿಗಳಿಗೆ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪುಷ್ಪರಾಜ್ ಬಿ.ಎನ್ ಪ್ರತಿಜ್ಞಾ ವಿಧಿ ಬೋಧಿಸಿದರು.ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ,ಉಪಾಧ್ಯಕ್ಷರಾದ ಕರುಣಾಕರ ರೈ ಸಿಎಚ್.,ಎಂ.ಎಸ್.ಭಟ್, ಪ್ರಧಾನ ಕಾರ್ಯದರ್ಶಿ ಶೇಷಪ್ಪ ಕಜೆಮಾರ್,ಕಾರ್ಯದರ್ಶಿಗಳಾದ ಅಜಿತ್ ಕುಮಾರ್, ನಝೀರ್ ಕೊಯಿಲ,ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಶೇಖ್ ಜೈನುದ್ದೀನ್,ಲೋಕೇಶ್ ಬನ್ನೂರು,ಮೇಘ ಪಾಲೆತ್ತಾಡಿ,ಶಶಿಧರ್ ರೈ ಕುತ್ಯಾಳ,ಉಮಾಶಂಕರ್,ಶರತ್ ಕುಮಾರ್ ಜಿ.,ರಾಜೇಶ್ ಪಟ್ಟೆ ಪ್ರಮಾಣ ವಚನ ಸ್ವೀಕರಿಸಿದರು.


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಘದ ಸದಸ್ಯೆ ವಿದ್ಯಾಶ್ರೀ ಪ್ರಾರ್ಥಿಸಿದರು.ಕೋಶಾಽಕಾರಿ ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಸಿ.ಶೇ ಕಜೆಮಾರ್ ವಂದಿಸಿದರು.ಸಂಘದ ವ್ಯವಸ್ಥಾಪಕ ಪ್ರವೀಣ್ ಬೊಳುವಾರು, ಜತೆ ಕಾರ್ಯದರ್ಶಿ ಅಜಿತ್ ಉಚ್ಚಿಲ್, ಕಾರ್ಯಕಾರಿ ಸಮಿತಿ ಸದಸ್ಯರಾದ ಶರತ್ ಕುಮಾರ್, ಮೇಘ ಪಾಲೆತ್ತಡಿ, ಶಶಿಧರ ರೈ ಕುತ್ಯಾಳ ಅತಿಥಿಗಳನ್ನು ಶಾಲು ಹಾಕಿ, ಹೂ ನೀಡಿ ಸ್ವಾಗತಿಸಿದರು.


ವಕೀಲ ಪುರಂದರ ಭಟ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ,ಪುತ್ತೂರು ಸರ್ಕಾರಿ ಆಸ್ಪತ್ರೆಯ ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್, ವಿವೇಕಾನಂದ ಪದವಿ ಕಾಲೇಜು, ಹೆಚ್‌ಪಿಆರ್ ಪ್ಯಾರಮೆಡಿಕಲ್ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸಭಾ ಕಾರ್ಯಕ್ರಮದ ಬಳಿಕ ಭೋಜನ ನೆರವೇರಿತು.

ಪತ್ರಿಕೆಯಿಂದ ಸೌಲಭ್ಯ ಪಡೆದವರನ್ನು, ಪಡೆಯುವವರನ್ನು ಒಟ್ಟು ಸೇರಿಸುವಂಥ ಕಾರ್ಯಕ್ರಮ ಸಂಘದ ಮೂಲಕ ಆಗಬೇಕು.ಪತ್ರಕರ್ತರ ಜವಾಬ್ದಾರಿ, ಕೆಲಸ ಹಾಗೂ ನಮ್ಮ ತೊಂದರೆಗಳನ್ನೂ ತಿಳಿಸುವ ಕೆಲಸವಾಗಬೇಕು. ಉತ್ತಮ ವಿಚಾರಗಳನ್ನು ಪತ್ರಿಕೆ ಮೂಲಕ ಸಮಾಜದ ಮುಂದೆ ಇಟ್ಟಾಗ ಅದರಿಂದಾಗಬಹುದಾದ ತೊಂದರೆಗಳಿಗೆ,ಪತ್ರಕರ್ತರ ರಕ್ಷಣೆಗೆ ಸಮಾಜ ಬರಬೇಕು. ಆಗ ಪತ್ರಕರ್ತರ ವೃತ್ತಿಗೆ ಗೌರವ ದೊರೆಯಲಿದೆ.ಎಲ್ಲರಿಗೂ ಆತ್ಮ ಸಂತೋಷ ದೊರೆಯಲಿದೆ.ಸಂಘದ ಮೂಲಕ ಮುಂದೆ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಸುದ್ದಿ ಬಳಗ ಕೈ ಜೊಡಿಸುವ ಮೂಲಕ ಪುತ್ತೂರಿನ ಪತ್ರಕರ್ತರಿಗೆ ಗೌರವ ಕೊಡುವ ಕೆಲಸ ಮಾಡಲಾಗುವುದು
-ಡಾ.ಯು.ಪಿ ಶಿವಾನಂದ,
ಆಡಳಿತ ನಿರ್ದೇಶಕರು ಸುದ್ದಿ ಸಮೂಹ ಸಂಸ್ಥೆಗಳು


ಪತ್ರಕರ್ತರ ಕಾರ್ಯಕ್ರಮ ಸಂಘದ ಕಟ್ಟಡದ ಮೇಲೆಯೇ ನಡೆದರೆ ಉತ್ತಮ.ಹೀಗಾಗಿ ಸಂಘದ ಕಟ್ಟಡದ ಅಭಿವೃದ್ಧಿಗೆ ಈಗಾಗಲೇ ರೂ.5 ಲಕ್ಷ ಅನುದಾನ ನೀಡಲಾಗಿದೆ.30 ವರ್ಷಗಳಿಂದ ಸಂಘ ಕಾರ್ಯನಿರ್ವಹಿಸುತ್ತಿದ್ದು ಪತ್ರಕರ್ತರು ಮನಸ್ಸು ಮಾಡಿದರೆ ಏನನ್ನೂ ಮಾಡಬಹುದು.ನಿವೇಶನ ರಹಿತ ಪತ್ರಕರ್ತರಿಗೆ ಮನೆ ನಿವೇಶನ ನೀಡುವಂತೆ ಬೇಡಿಕೆಯಿದೆ.ಸರಕಾರದಿಂದ ಯಾವ ರೀತಿ ನೀಡಬಹುದು ಎಂಬ ಚಿಂತನೆ ಮಾಡಲಾಗುವುದು.ಶಾಸಕರ ನಿಽಯಿಂದ ಸಾಧ್ಯವಾದುದನ್ನು ನೀಡುವ ಕೆಲಸ ಮಾಡಲಾಗುವುದು. ಪತ್ರಕರ್ತರ ಸಂಘದ ಹೊಸ ತಂಡ ಉತ್ತಮ ಕೆಲಸ ಮಾಡುವ ಮೂಲಕ, ತಪ್ಪು ಮಾಡಿದಾಗ ತಿದ್ದುವ ಕೆಲಸ ಮಾಡಿ. ಉತ್ತಮ ಕೆಲಸದ ಮೂಲಕ ಸಮಾಜಕ್ಕೆ, ಪುತ್ತೂರಿನ ಅಭಿವೃದ್ಧಿಗೂ ಕೊಡುಗೆ ನೀಡಿ
-ಅಶೋಕ್ ಕುಮಾರ್ ರೈ ಶಾಸಕರು

LEAVE A REPLY

Please enter your comment!
Please enter your name here