ತಾತ್ಕಾಲಿಕ ಪರವಾನಿಗೆ ಅವಧಿ ಮುಗಿದರೂ ನೋಂದಾವಣೆಯಾಗದ ವಾಹನ : ಸಂಪ್ಯ ಪೊಲೀಸರಿಂದ ಕಾರ್ಯಾಚರಣೆ-ವಾಹನ ವಶಕ್ಕೆ

0

ಪುತ್ತೂರು: ಹೊಸ ವಾಹನದ ತಾತ್ಕಾಲಿಕ ಪರವಾನಿಗೆಯ ಅವಧಿ ಮುಗಿದರೂ ನೋಂದಾವಣಿ ಮಾಡಿಕೊಳ್ಳದೇ ಇದ್ದ ವಾಹನವೊಂದನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಪುತ್ತೂರು ಗ್ರಾಮಾಂತರ ಠಾಣಾ ಉಪನಿರೀಕ್ಷಕರ ನೇತೃತ್ವದಲ್ಲಿ ವಾಹನ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಕುಂಬ್ರದಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ವೇಳೆ ನಂಬರ್ ಪ್ಲೇಟ್ ಇಲ್ಲದೇ ಚಲಾಯಿಸಿಕೊಂಡು ಬರುತ್ತಿದ್ದ ಥಾರ್ ವಾಹನವನ್ನು ತಡೆದು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಆ ವಾಹನದ ನೋಂದಾವಣೆಯಾಗದೇ ಇರುವುದು ಕಂಡು ಬಂದಿರುವುದಲ್ಲದೇ ವಾಹನದ ತಾತ್ಕಾಲಿಕ ಪರವಾನಿಗೆ ಅವಧಿ ಮುಗಿದಿರುವುದು ಕಂಡು ಬಂದಿದೆ. ಕೂಡಲೇ ಆ ವಾಹನವನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ.

ಮುಂದಿನ ದಿನಗಳಲ್ಲಿ ಇಂತಹ ವಾಹನಗಳು ಕಂಡು ಬಂದಲ್ಲಿ ಅವುಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮಕೈಗೊಳ್ಳಲಾಗವುದು ಸಂಪ್ಯ ಠಾಣಾ ಉಪ ನಿರೀಕ್ಷಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here