







ಪುತ್ತೂರು : ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ಸಮೃದ್ದಿ ಇಕೋ ಕ್ಲಬ್ ವತಿಯಿಂದ ಗಿಡಗಳಿಗೆ ಕಸಿಕಟ್ಟುವ ಬಗ್ಗೆ ತರಬೇತಿಯನ್ನು ಪ್ರಾತ್ಯಕ್ಷಿಕೆಯೊಂದಿಗೆ ನೀಡಲಾಯಿತು.


ಕಸಿಕಟ್ಟುವ ವಿಷಯದಲ್ಲಿ ಸ್ವತಃ ಪಳಗಿರುವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಗಣೇಶ್ ಶರ್ಮ ಕಸಿಕಟ್ಟುವ ವಿಧಾನಗಳ ಬಗ್ಗೆ ತರಬೇತಿ ನೀಡಿದರು. ಕಸಿಕಟ್ಟುವಿಕೆಯ ವಿಧಗಳು, ಪ್ರಯೋಜನಗಳು, ಆರ್ಥಿಕ ಲಾಭಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ತರಬೇತಿಯನ್ನು ಕಾಲೇಜಿನ ಪ್ರಾಂಶುಪಾಲ ಗೋಪಾಲ ಗೌಡ ಉದ್ಘಾಟಿಸಿ ಪರಿಸರಕ್ಕೆ ಪೂರಕವಾದ, ಆರ್ಥಿಕವಾಗಿ ಲಾಭದಾಯಕವಾದ, ಯಾವುದೇ ಹಾನಿಯಿಲ್ಲದ ಕೌಶಲ್ಯ ಈ ಕಸಿಕಟ್ಟುವಿಕೆಯಾಗಿದ್ದು ವಿದ್ಯಾರ್ಥಿಗಳು ಇಂತಹ ಪರಿಸರಜನ್ಯ ಚಟುವಟಿಕೆಗಳನ್ನು ಕಲಿಯಲು ಉತ್ಸುಕರಾಗಬೇಕು ಎಂದು ಕರೆ ನೀಡಿದರು.



ಹಿರಿಯ ಉಪನ್ಯಾಸಕ ಧರಣಪ್ಪ ಗೌಡ ಶುಭ ಹಾರೈಸಿದರು. ಇಕೋ ಕ್ಲಬ್ ಸಂಚಾಲಕ ಅಬ್ದುಲ್ ರಝಾಕ್ ಪ್ರಸ್ತಾವನೆಗೈದರು. ಉಪನ್ಯಾಸಕಿಯರಾದ ಲತಾ ಕುಮಾರಿ, ಪ್ರತಿಭಾ ರೈ, ಶಾಲಿನಿ, ಸ್ವಾತಿ, ವಿಜೇತಕುಮಾರಿ ಉಪಸ್ಥಿತರಿದ್ದರು. ಇಕೋ ಕ್ಲಬ್ ಸದಸ್ಯೆ ರಕ್ಷಾ ಸ್ವಾಗತಿಸಿ, ವಿದ್ಯಾರ್ಥಿನಿ ಅನುಶ್ರೀ ವಂದಿಸಿದರು.










