ಪುತ್ತೂರು ಲಯನ್ಸ್ ಕ್ಲಬ್ ಗೆ ಜಿಲ್ಲಾ ರಾಜ್ಯಪಾಲರ ಅಧೀಕೃತ ಭೇಟಿ – ಹಲವು ಸೇವಾ ಚಟುವಟಿಕೆ ವಿತರಣೆ, ಸಾಧಕರಿಗೆ ಸನ್ಮಾನ

0

ಉತ್ತಮ ಯೋಜನೆಯ ಘೋಷಣೆಗೆ ಜೀವ ತುಂಬುವ ಕೆಲಸ ಆಗಿದೆ – ಅರವಿಂದ ಶೆಣೈ
ಹೊಸ ಯೋಜನೆ, ಯೋಚನೆ ನಿರಂತರ -ವೇದಾವತಿ

ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರುದ ಮುತ್ತು, ಆಲಂಗಾರು ದುರ್ಗಾಂಬ, ಲಿಯೊ ಕ್ಲಬ್ ಪುತ್ತೂರುದ ಮುತ್ತು, ಲಿಯೋ ಕ್ಲಬ್ ನಿಯೋಸ್ ಅಕ್ಷಯಾನ್ಸ್ ಪುತ್ತೂರು ಕ್ಲಬ್ ಗೆ ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲ ಕುಡುಪಿ ಅರವಿಂದ ಶೆಣೈ ಮತ್ತು ಡಿಸ್ಟ್ರಿಕ್ ಪಸ್ಟ್ ಲೇಡಿ ಮಮತಾ ಶೆಣೈ ಅವರ ಅಧೀಕೃತ ಭೇಟಿ ಜ.27ರಂದು ನಡೆಯಿತು.ಪುತ್ತೂರು ರೋಟರಿ ಮನೀಷಾ ಸಭಾಂಗಣದಲ್ಲಿ ಕ್ಲಬ್ ಮೂಲಕ ಹಲವು ಸೇವಾ ಚಟುವಟಿಕೆ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.


ಉತ್ತಮ ಯೋಜನೆಯ ಘೋಷಣೆಗೆ ಜೀವ ತುಂಬುವ ಕೆಲಸ ಆಗಿದೆ:
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ರಾಜ್ಯಪಾಲ ಕುಡುಪಿ ಅರವಿಂದ ಶೆಣೈ ಅವರು ಮಾತನಾಡಿ, ನಾನು ಜಿಲ್ಲೆಯ 45 ಕ್ಲಬ್‌ಗೆ ಭೇಟಿ ನೀಡಿದ್ದೆ. ಆದರೆ ಇಂತಹ ಸುಂದರ ಅರ್ಥಪೂರ್ಣವಾದ ಸ್ವಾಗತ ಎಲ್ಲಿಯೂ ಆಗಿಲ್ಲ. ಈ ವರ್ಷ ಸುಂದರ ಜಿಲ್ಲಾ ಕಾರ್ಯಕ್ರಮ ಘೋಷಣೆ ಮಾಡಿದ್ದೆ. ಆದರೆ ನಿಮ್ಮಂತ ಕ್ಲಬ್ ಆ ಘೋಷಣೆಗೆ ಜೀವ ತುಂಬುವ ಕೆಲಸ ಮಾಡಿದ್ದೀರಿ. ಇದನ್ನು ರಾಷ್ಟ್ರೀಯ ಕಾರ್ಯಕರಮ ಬ್ಯಾನರ್ ಅಗಿ ಮಾಡಿಕೊಳ್ಳಬೇಕು. ಇದರ ಜೊತೆಗೆ ಹಲವು ಕ್ಲಬ್ ಹುಟ್ಟು ಹಾಕಿದ ರಾಜಕೀಯ ಮುಂದಾಳು ಹೊಸ ಪ್ರಾಂತ್ಯದ ಜನಕ ಹೇಮನಾಥ ಶೆಟ್ಟಿ ಕಾವು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನೂ ಅವರಿಂದ ಹಲವು ಕ್ಲಬ್ ಮೂಡಿ ಬರಲಿ ಎಂದ ಅವರು ನಾಯಕತ್ವ ಮತ್ತು ಸೇವೆಯಲ್ಲಿ ಮುಂದೆ ಇರುವ ಲಯನ್ಸ್ ಕ್ಲಬ್ ಪುತ್ತೂರುದ ಮುತ್ತು ಇದರ ಅಧ್ಯಕ್ಷೆ ವೇದಾವತಿ ಯಶಸ್ವಿ ಅಧ್ಯಕ್ಷೆಯಾಗಿದ್ದಾರೆ. ನಾಯಕತ್ವದಲ್ಲಿ ಆಸಕ್ತಿ ಇದ್ದರೆ ಎಲ್ಲಾ ಗುಣ ಇರುತ್ತದೆ. ಅದನ್ನು ವೇದಾವತಿ ಅವರು ಕಂಡಿದ್ದಾರೆ ಎಂದರು.

ಇದೇ ಸಂದರ್ಭ ಅವರು ಕ್ಲಬ್ ಮೂಲಕ ನಡೆಯುವ ಕಾರ್ಯಚಟುವಟಿಕೆಗಳಿಗೆ ದೇಣಿಗೆ ನೀಡಲು ಸದಸ್ಯರ ಸಹಕಾರ ಯಾಚಿಸಿದರು. ಎಲ್ಲರು ತಮ್ಮ ಇಚ್ಚಾನುಸಾರ ಎಲ್‌ಸಿಐಎಫ್‌ಗೆ ದೇಣಿಗೆ ನೀಡಿ ಎಂದು ಮನವಿ ಮಾಡಿದರಲ್ಲದೆ ಕ್ಲಬ್‌ನ ಸದಸ್ಯನವೂ ಹೆಚ್ಚಾಗಬೇಕೆಂದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಕುಡುಪಿ ಅರವಿಂದ ಶೆಣೈ ದಂಪತಿಯನ್ನು ಸನ್ಮಾನಿಸಲಾಯಿತು. ಚಂದ್ರಶೇಖರ್ ಸನ್ಮಾನ ಪತ್ರ ವಾಚಿಸಿದರು.


ಹೊಸ ಯೋಜನೆ, ಯೋಚನೆ ನಿರಂತರ:
ಲಯನ್ಸ್ ಕ್ಲಬ್ ಪುತ್ತೂರುದ ಮುತ್ತು ಅಧ್ಯಕ್ಷೆ ವೇದಾವತಿ ಅವರು ಮಾತನಾಡಿ ಕ್ಲಬ್‌ನ ಅಧ್ಯಕ್ಷರಾದ ಸಂದರ್ಭ 30 ಮಂದಿ ಹೊಸ ಸದಸ್ಯರನ್ನು ಕ್ಲಬ್‌ಗೆ ಸೇರಿಸುವ ಭರವಸೆ ನೀಡಿದ್ದೆ. ಆ ಮಾತನ್ನು ಉಳಿಸಿಕೊಂಡಿದ್ದೇನೆ. ಸುಂದರ ಜಗತ್ತಿನಲ್ಲಿ ಹೊಸ ಆಸೆಯೊಂದಿಗೆ ಹೊಸ ಯೋಜನೆ, ಯೋಚನೆ ನಿರಂತರ ಇರಲಿದೆ ಎಂದರು.


ಸೇವಾ ಕಾರ್ಯಚಟುವಟಿಕೆ ವಿತರಣೆ – ಸಾಧಕರಿಗೆ ಸನ್ಮಾನ:
ಕ್ಲಬ್ ಮೂಲಕ ಕಾರ್ಯಚಟುವಟಿಕೆ ವಿವಿಧ ಸವಲತ್ತು ವಿತರಣೆ ಮತ್ತು ಸಾಧಕರನ್ನು ಸನ್ಮಾನಿಸಲಾಯಿತು. ಆಲಂಗಾರು ದುರ್ಗಾಂಬ ಕ್ಲಬ್ ನಿಂದ ಪೆರಾಬೆ ಸುರುಳಿ ಅಂಗನವಾಡಿಗೆ ಫ್ಯಾನ್ ವಿತರಣೆ, ಪುತ್ತೂರು ಮುತ್ತು ಕ್ಲಬ್ ನಿಂದ ನಡೆದ ಸೇವಾ ಚಟುವಟಿಕೆಯಲ್ಲಿ 69 ಬಾರಿ ರಕ್ತದಾನ ಮಾಡಿದ ಮಹೇಶ್ಚಂದ್ರ ಸಾಲಿಯಾನ್, ಕೃಷಿಗೆ ಸಂಬಂಧಿಸಿ ಕೇಶವ ಸುವರ್ಣ ಅವರಿಗೆ ಆರ್ಥಿಕ ನೆರವಿನ ಚೆಕ್ ವಿತರಣೆ, ಪ್ರಜ್ಞಾ ಆಶ್ರಮಕ್ಕೆ ಫ್ಯಾನ್ ಕೊಡುಗೆ, ಬನ್ನೂರು ಶಾಲೆಯಲ್ಲಿ 200 ಹಣ್ಣಿನ ಗಿಡ ನಡುವ ಕಾರ್ಯಕ್ರಮ, ಗಡಿಪಿಲದಲ್ಲಿ ಕುಡಿಯುವ ನೀರಿನ ಕೊಡುಗೆ, ಕಬಡ್ಡಿಯಲ್ಲಿ ಸಾಧನೆ ಮಾಡಿದ ಲಿಟ್ಲ್ ಫ್ಲವರ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಮತ್ತು ಅವರ 6 ವಿದ್ಯಾರ್ಥಿಗಳು, ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ದಯಾನಂದ ಕೋರ್ಮಂಡ, ಕ್ರೀಡಾ ಸಾಧಕರಾದ ಪ್ರಥಮ್, ಧನ್ವಿತ್, ಲೀಡರ್ ಶಿಪ್ ಯೂತ್ ಮೂಲಕ ಸಾಧಕ ಗಂಗಾಧರ ಶೆಟ್ಟಿ ಅವರಿಗೆ ದೇಣಿಗೆ, ಪುಷ್ಪ ಎನ್ ಅವರಿಗೆ ಅರ್ಥಿಕ ನೆರವು, ರಸ್ತೆ ಸುರಕ್ಷೆ ಸಂಬಂದಿಸಿ ಸಂಚಾರ ಪೊಲೀಸ್ ಠಾಣೆಗೆ ಮಾಸ್ಕ್ ವಿತರಣೆ, ವಾರಂಟ್ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಇಲಾಖೆಯಿಂದ ಪ್ರಶಂಸೆಗೆ ಪಾತ್ರರಾದ ಪೊಲೀಸ್ ಹೆಡ್ ಕಾನ್ ಸ್ಟೇಬಲ್‌ರೊಬ್ಬರಿಗೆ, ನೆಕ್ಕಿಲಾಡಿ ಶಾಲೆಗೆ ಶುದ್ದ ಕುಡಿಯುವ ನೀರಿನ ಘಟಕ ವಿತರಣೆ, ಸಂಜಯ ನಗರ ಶಾಲೆಗೆ 10 ಬೇಬಿ ಚಯರ್ ವಿತರಣೆ, , ವಿದ್ಯಾರ್ಥಿನಿಯೊಬ್ಬರಿಗೆ ಸಮವಸ್ತ್ರ ವಿತರಣೆ, ಉದ್ಯಮಿ ಮಹಮ್ಮದ್ ಕುಕ್ಕುವಳ್ಳಿ ಅವರ ಮೂಲಕ ವಿಶೇಷ ಚೇತನ ಪ್ರಜ್ವಲ್ ಸುಳ್ಯ ಅವರಿಗೆ ಗಾಲಿಕುರ್ಚಿ ವಿತರಣೆ, ರೈತ ಪ್ರಶಸ್ತಿಗೆ ಪಾತ್ರರಾದ ವಿಜಯ ಕುಮಾರ್ ಸೊರಕೆ, ಕನ್ನಡ ಶಾಲೆ ಉಳಿಸಿ ಬೆಳೆಸುವಲ್ಲಿ ಪ್ರದಾನ ಪಾತ್ರ ವಹಿಸುತ್ತಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಹಮ್ಮದ್ ಕುಕ್ಕುವಳ್ಳಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.


ಹೊಸ ಸದಸ್ಯರ ಸೇರ್ಪಡೆ:
ಪ್ರತಿಮಾ ಯು ರೈ, ಶ್ರವಣ್ ಕುಮಾರ್, ಉಷಾ ಕಿರಣ್ ಅವರನ್ನು ಕ್ಲಬ್ ನ ಸದಸ್ಯರನ್ಮಾಗಿ ಸೇರ್ಪಡೆಗೊಳಿಸಲಾಯಿತು. ಯಶುಭಾ ರೈ ಮತ್ತು ವತ್ಸಲಾ ಕಾರ್ಯಕ್ರಮ ನಿರ್ವಹಿಸಿದರು. ನೂತನ ಸದಸ್ಯರಿಗೆ ಜಿಲ್ಲಾ ರಾಜ್ಯಾಪಾಲರು ಪ್ರಮಾಣ ವಚನ ಬೋಧಿಸಿದರು.


ಅಂತರಾಷ್ಟ್ರೀಯ ಪಿನ್ ನೀಡಿ ಗೌರವ:
ಪುತ್ತೂರುದ ಮುತ್ತು ಮತ್ತು ಆಲಂಗಾರು ದುರ್ಗಾಂಬ ಕ್ಲಬ್ ಮಾಡಿದ ಉತ್ತಮ ಸಾಧನೆಗೆ ಸಂಬಂಧಿಸಿ ಜಿಲ್ಲಾ ರಾಜ್ಯಪಾಲರು ವಿಶೇಷ ಪಿನ್ ಅನ್ನು ಪುತ್ತೂರುದ ಮುತ್ತು ಅಧ್ಯಕ್ಷೆ ವೇದಾವತಿ ಅವರಿಗೆ ನೀಡಿ ಗೌರವಿಸಿದರು. ಆಲಂಗಾರು ದುರ್ಗಾಂಬ ಕ್ಲಬ್‌ನ ಅಧ್ಯಕ್ಷರಿಗೂ ಮತ್ತು ಲಿಯೋ ಕ್ಲಬ್‌ನ ಅಧ್ಯಕ್ಷರು ಕಾರ್ಯದರ್ಶಿಯವರಿಗೂ ಪಿನ್ ನೀಡಿ ಗೌರವಿಸಿದರು.


ಪಿ ಆರ್ ಒ ಸುದರ್ಶನ್ ಪಡಿಯಾರ್, ಮಾಜಿ ರಾಜ್ಯಪಾಲ ಡಾ ಗೀತಪ್ರಕಾಶ್, ಪಿಡಿಜಿ ಡಾ. ಮೆಲ್ವಿನ್ ಡಿ ಸೋಜ, ಅನಿಲ್, ವೆಂಕಟೇಶ್ ಹೆಬ್ಬಾರ್ ಶುಭ ಹಾರೈಸಿದರು. ಲಯನ್ಸ್ ಕ್ಲಬ್ ಪುತ್ತೂರುದ ಮುತ್ತು ಇದರ ಕಾರ್ಯದರ್ಶಿ ಅನುಸೂಯ ಬಾಯಿ, ಕೋಶಾಧಿಕಾರಿ ಸುಪ್ರಿತಾ, ಲಿಯೋ ಕ್ಲಬ್ ನ ಅಧ್ಯಕ್ಷ ಚಿಂತಕ್ ಸಾಲಿಯಾನ್, ಪ್ರಾಂತೀಯ ಅಧ್ಯಕ್ಷ ಆನಂದ, ಜೆಡ್ ಪಿ ಜೆಸಿಂತಾ, ಖಜಾಂಚಿ ಇಂದು ಶೇಖರ್, ಪುತ್ತೂರು ಕ್ಲಬ್ ನ ಖಜಾಂಚಿ ಸುಪ್ರಿತ್ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಪುತ್ತೂರುದ ಮುತ್ತು ಇದರ ಉಪಾಧ್ಯಕ್ಷ ರವಿಪ್ರಸಾದ್ ಅತಿಥಿಗಳನ್ನು ಪರಿಚಯಿಸಿದರು. ಯಶುಬಾ ರೈ ಪ್ರಾರ್ಥಿಸಿದರು. ಆಲಂಗಾರು ದುರ್ಗಾಂಬ ಕ್ಲಬ್ ಕಾರ್ಯದರ್ಶಿ ಲಿಂಗಪ್ಪ ಪೂಜಾರಿ ಧ್ವಜ ವಂದನೆ ಸಂದೇಶ ನೀಡಿದರು. ದಯಾನಂದ ರೈ ನೀತಿ ಸಂಹಿತೆ ಪಠಿಸಿದರು. ವಿಶ್ವಶಾಂತಿಗಾಗಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಲಯನ್ಸ್ ಕ್ಲಬ್ ಪುತ್ತೂರುದ ಕ್ಲಬ್ ಅಧ್ಯಕ್ಷೆ ವೇದಾವತಿ ಅವರು ಸ್ವಾಗತಿಸಿ, ಆಲಂಗಾರು ದುರ್ಗಾಂಬಾ ಕ್ಲಬ್ ಅಧ್ಯಕ್ಷ ಪದ್ಮಪ್ಪ ಗೌಡ ಕೆ ವಂದಿಸಿದರು. ಲಯನ್ಸ್ ಕ್ಲಬ್ ಪುತ್ತೂರುದ ಮುತ್ತು ಸ್ಥಾಪಕ ಕಾವು ಹೇಮನಾಥ ಶೆಟ್ಟಿ, ಪಿಡಿಜಿ ಡಾ.ದೀಪ್ ಪ್ರಕಾಶ್, ಡಾ. ಮೆಲ್ವಿನ್ ಡಿ ಸೋಜ, ಸ್ಮಿತಾ ಅನಿಲ್, ಗೀತಾ ರಾವ್, ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರೇಮಲತಾ ರಾವ್, ಸುಧಾಕರ್ ಕೆ.ಪಿ, ಇಬ್ರಾಹಿಂ ಹಾಜಿ, ಲಯನ್ಸ್ ಕ್ಲಬ್ ಪುತ್ತೂರು ಇದರ ಮಾಜಿ ಅಧ್ಯಕ್ಷ ಸದಾಶಿವ ನಾಕ್, ಮಾಜಿ ಆರ್ ಸಿ ಲ್ಯಾನ್ಸಿ ಮಸ್ಕರೇನಸ್, ಗಣೇಶ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ, ಡಾ ರಂಜಿತಾ ಶೆಟ್ಟಿ, ದಯಾನಂದ ರೈ ಮನವಳಿಕೆ, ಭಾಗ್ಯೇಶ್ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸೇವಾ ಕಾರ್ಯಕ್ಕೆ ಪುತ್ತೂರು ಕ್ಲಬ್‌ನಿಂದ ಚೆಕ್ ಹಸ್ತಾಂತರ ನಡೆಯಿತು.


ಜಾಗೃತಿ ಫಲಕ ಹಿಡಿದು ರಾಜ್ಯಪಾಲರಿಗೆ ಸ್ವಾಗತ
ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲರಾದ ಕುಡುಪಿ ಆನಂದ ಶೆಣೈ ಮತ್ತು ಮಮತಾ ಶೆಣೈ ದಂಪತಿಯನ್ನು ಲಯನ್ಸ್ ಕ್ಲಬ್ ಪುತ್ತೂರುದ ಮುತ್ತು ಮತ್ತು ಆಲಂಗಾರು ದುರ್ಗಾಂಬ ಕ್ಲಬ್‌ನಿಂದ ಪರಿಸರ ಸಂರಕ್ಷಣೆ, ರಸ್ತೆ ಸುರಕ್ಷತೆ, ಸಂಚಾರ ನಿಯಮ ಪಾಲನೆ, ಪಿಟ್ ನೆಸ್, ರಕ್ತದಾನ ಕುರಿತು ಜಾಗೃತಿ ಮೂಡಿಸುವ ಫಲಕ ಹಿಡಿದು ಸ್ವಾಗತಿಸಲಾಯಿತು.

LEAVE A REPLY

Please enter your comment!
Please enter your name here