ಪುತ್ತೂರು ಅಕ್ವಾಟಿಕ್ ಕ್ಲಬ್ ಈಜುಗಾರರ ಅದ್ಭುತ ಸಾಧನೆ – ಮಂಗಳೂರು ಸ್ಪರ್ಧೆಗಳಲ್ಲಿ ಚಿನ್ನ–ಬೆಳ್ಳಿ–ಕಂಚಿನ ಪದಕಗಳ ಕಿರೀಟ

0

ಮಂಗಳೂರು: ಜ.25 ಮತ್ತು 26 ರಂದು ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಗಳಲ್ಲಿ ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಈಜುಗಾರರು ಅತ್ಯುತ್ತಮ ಸಾಧನೆ ಮಾಡಿ ಪುತ್ತೂರಿಗೆ ಹೆಮ್ಮೆ ತಂದಿದ್ದಾರೆ.

ಜ.25 ರಂದು ಅಲೋಯ್ಸಿಯಸ್ ಈಜುಕೊಳ ದಲ್ಲಿ ನಡೆದ ಆಕ್ವಾ ಕಾರ್ನಿವಲ್ ಸ್ಪರ್ಧೆಯಲ್ಲಿ ಆದಿತ್ಯ 50 ಮೀಟರ್ ಬಟರ್‌ಫ್ಲೈ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ಗಮನ ಸೆಳೆದರು. ಇಶಾನಿ ರೈ ಅವರು 50 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದರು.

ಜ. 26 ರಂದು ತಣ್ಣೀರ್ಭಾವಿ ಕಡಲತೀರದಲ್ಲಿ ನಡೆದ ಡೆನ್ ಡೆನ್ ಓಪನ್ ವಾಟರ್ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಈಜುಗಾರ ಲಿಖಿತ್ ರಾಮಚಂದ್ರ ಅವರು 2 ಕಿಲೋಮೀಟರ್ ವಿಭಾಗದಲ್ಲಿ ಪ್ರಥಮ ಸ್ಥಾನ (ಚಿನ್ನದ ಪದಕ) , ಲಾಸ್ಯ ಕಿಶನ್ ಅವರು 500 ಮೀಟರ್ ವಿಭಾಗದಲ್ಲಿ ಪ್ರಥಮ ಸ್ಥಾನ (ಚಿನ್ನದ ಪದಕ) ಪಡೆದರು.

ಈ ಎಲ್ಲಾ ಈಜುಗಾರರು ಪುತ್ತೂರು ಅಕ್ವಾಟಿಕ್ ಕ್ಲಬ್ ಅನ್ನು ಪ್ರತಿನಿಧಿಸುತ್ತಿದ್ದು, ಪುತ್ತೂರಿನ ಡಾ. ಶಿವರಾಮ ಕಾರಂತ ಈಜುಕೊಳದಲ್ಲಿ ನಿರಂತರ ತರಬೇತಿ ಪಡೆಯುತ್ತಿದ್ದಾರೆ. ಇವರ ಸಾಧನೆಯ ಹಿಂದೆ ತರಬೇತುದಾರರಾದ ಪಾರ್ಥ ವಾರಣಾಶಿ, ಕ್ರತಿ ತೇಜ, ತ್ರಿಶೂಲ್ ಗೌಡ, ವಿಕಾಸ್ ಹಾಗೂ ಶಿಶಿಲ್ ಗೌಡ ಅವರು ಮಾರ್ಗದರ್ಶನ ನೀಡಿದ್ದಾರೆ

LEAVE A REPLY

Please enter your comment!
Please enter your name here