






ಪುತ್ತೂರು: ಅಶೋಕ್ ರೈ ಡೈನಾಮಿಕ್ ಎಂ ಎಲ್ ಎ , ಅವರ ಕಾಲದಲ್ಲಿ ಪುತ್ತೂರಿನ ಚಿತ್ರಣವೇ ಬದಲಾಗಿಬಿಡ್ತದೆ ಎಂದು ಸುಪ್ರಿಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ , ಆಂಧ್ರ ಪ್ರದೇಶದ ರಾಜ್ಯಪಾಲರಾದ ಅಬ್ದುಲ್ ನಝೀರ್ ರವರು ಹೇಳಿದರು.


ಇಂದು(ಜ.31) ಪುತ್ತೂರಿನ ಆನೆಮಜಲಿನಲ್ಲಿ ನೂತನ ಕೋರ್ಟು ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.



ಮುಂದಿನ ದಿನಗಳಲ್ಲಿ ಕೋರ್ಟು ಕಟ್ಟಡ ಏನಾದರು ಬೇಕಾದರೆ ಕೇಳಿ ಉಸ್ತುವಾರಿ ಸಚಿವರಿದ್ದಾರೆ ಕೊಡುತ್ತಾರೆ. ಆ ಪ್ರಕಾರ ಪುತ್ತೂರು ಶಾಸಕ ಅಶೋಕ್ ರೈ ಅವರು ಡೈನಾಮಿಕ್ ಎಂಎಲ್ಎ ಎಂದು ಹೇಳಿದ ರಾಜ್ಯಪಾಲರು ನಿಮ್ಮ ಅವಧಿಯಲ್ಲಿ ಪುತ್ತೂರಿನ ಚಿತ್ರಣವೇ ಬದಲಾಗಿಬಿಡ್ತದೆ ಎಂದರು. ಈ ವೇಳೆ ಎದ್ದು ನಿಂತ ಶಾಸಕರು ನನ್ನ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಕೈ ಮುಗಿದು ಕೃತಜ್ಞತೆ ಸಲ್ಲಿಸಿದರು.










