







ಪುತ್ತೂರು: ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ-ಚಿನ್ನದ ಪದಕ ವಿಜೇತ ಕೃಷಿಕ ಕಡಮಜಲು ಸುಭಾಸ್ ರೈಯವರ 76ನೇ ಹುಟ್ಟುಹಬ್ಬ ಮತ್ತು ಸುಭಾಸ್ ರೈ ಹಾಗೂ ಪ್ರೀತಿ ಎಸ್ ರೈ ದಂಪತಿಯ ದಾಂಪತ್ಯ 46ರ ಸಂಭ್ರಮ ಫೆ.6 ರಂದು ನಡೆಯಲಿದೆ.


ಪ್ರತೀ ವರ್ಷದಂತೆ ತನ್ನ ಹುಟ್ಟುಹಬ್ಬ ಹಾಗೂ ದಾಂಪತ್ಯ ಸಂಭ್ರಮವನ್ನು ಭಾರತೀಯ ಜನತಾ ಪಾರ್ಟಿಯ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ದಂಪತಿ ಹುಟ್ಟುಹಬ್ಬದ ಜೊತೆಗೆ ಮೂಡಬಿದ್ರೆ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಆಚರಿಸಲಿದ್ದಾರೆ.



ಕಳೆದ ವರ್ಷ ತನ್ನ 75ರ ಹುಟ್ಟುಹಬ್ಬ ಸಂಭ್ರಮವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕಾದಶ ರುದ್ರಾಭಿಷೇಕ ನಡೆಸಿ, ತನ್ನ ‘ಪ್ರೀತಿಯಿಂದ ಪ್ರೀತಿಗೆ’ ಕೃತಿ ಬಿಡುಗಡೆಗೊಳಿಸಿ ಸರಳವಾಗಿ ಆಚರಿಸಿಕೊಂಡಿದ್ದ ರೈಯವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ, ಸಾಹಿತ್ಯಿಕವಾಗಿ ತನ್ನನ್ನು ತಾನು ತೊಡಗಿಸಿಕೊಂಡ ಸಂತೃಪ್ತ ಕೃಷಿಕರಾಗಿದ್ದಾರೆ.










