ಬಜತ್ತೂರು ಗ್ರಾಮ ಪಂಚಾಯತ್ ನಲ್ಲಿ ಕಸೂತಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ

0

ಪುತ್ತೂರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಗ್ರಾಮ ಪಂಚಾಯತ್ ಬಜತ್ತೂರು ಹಾಗೂ ಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಬಜತ್ತೂರು ಇದರ ಜಂಟಿ ಆಶ್ರಯದಲ್ಲಿ ಕಸೂತಿ ತರಬೇತಿ ಸಮಾರೋಪ ಸಮಾರಂಭ ಬಜತ್ತೂರು ಸಾವಿತ್ರಿಬಾಯಿ ಪುಲೆ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಫೆ.3ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಜತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ್ ವಿ ಎನ್ , ಮಂಗಳೂರು ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ವಿಜಯ ಮಹಿಳೆಯರು ತರಬೇತಿ ಪಡೆದು ಸ್ವ ಉದ್ಯೋಗ ಮಾಡುವಲ್ಲಿ ಗಮನ ಹರಿಸಿ, ಬ್ಯಾಂಕ್ ಸಾಲ ಸೌಲಭ್ಯ ಪಡೆದು ಯಶಸ್ವಿ ಮಹಿಳಾ ಉದ್ಯಮಿದಾರರಾಗಲು ಕರೆ ನೀಡಿದರು.

ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಸ್ವಉದ್ಯೋಗದ ನಿಯಮಗಳ ಕುರಿತಾಗಿ ತಿಳಿಸಿ ಮಹಿಳೆಯರು ತಮ್ಮ ಮಾರುಕಟ್ಟೆ ಕೌಶಲ್ಯ ಹೆಚ್ಚಿಸಲು ಹೆಚ್ಚಿನ ಗಮನ ಹರಿಸಲು ತಿಳಿಸಿದರು.

ವೇದಿಕೆಯಲ್ಲಿ ಬಜತ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಿತ್ರಾವತಿ, ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ ತರಬೇತಿಯ ಉಪಯೋಗದ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಬಜತ್ತೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಕೊರಗಪ್ಪ , ಪುತ್ತೂರು ತಾಲೂಕು ಕೃಷಿಯೇತರ ಚಟುವಟಿಕೆ ಅಭಿಯಾನ ನಿರ್ವಹಣೆ ಘಟಕದ ವ್ಯವಸ್ಥಾಪಕಿ ನಳಿನಾಕ್ಷಿ, ತರಬೇತುದಾರೆ ಶ್ವೇತಾ ಕೋಡಿಂಬಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮರಿಯಮ್ಮ ಸ್ವಾಗತಿಸಿದರು, ಮಲ್ಲಿಕಾ ವಂದಿಸಿದರು. ಅರ್ಪಿತ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸಂಜೀವಿನಿ ಸದಸ್ಯರು, ಸಂಜೀವಿನಿ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here