






ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ನೇತೃತ್ವದಲ್ಲಿ ಬಂಟ್ಸ್ ಲೆಜೆಂಡ್ ಕಪ್ ಫೆ.7 ಮತ್ತು 8ಕ್ಕೆ ಕೊಂಬೆಟ್ಟಿನಲ್ಲಿರುವ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ಯುವ ಬಂಟರ ವಿಭಾಗ ಸಾರಥ್ಯದಲ್ಲಿ ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಮಹಿಳಾ ಬಂಟರ ವಿಭಾಗ, ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ನಡೆಯಲಿದೆ ಎಂದು ಬಂಟರ ಸಂಘ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಪತ್ರಿಕಾಗೊಷ್ಟಿಯಲ್ಲಿ ಹೇಳಿದ್ದಾರೆ.


ಬೆಳಿಗ್ಗೆ 7.30ಕ್ಕೆ ನಡೆಯುವ ಪಂದ್ಯಾಟದ ಉದ್ಘಾಟನಾ ಸಮಾರಂಭವನ್ನು ಬಂಟರ ಸಂಘದ ನಿರ್ದೇಶಕ ಸಹಕಾರಿ ರತ್ನ ದಂಬೆಕಾನ ಸದಾಶಿವ ರೈ ಅವರು ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಲಿದ್ಧಾರೆ. ಬಂಟ್ವಾಳ ತಾಲೂಕಿನ ವಿಶ್ರಾಂತ ಶಿಕ್ಷಣ ಸಂಯೋಜಕ ಪದ್ಮನಾಭ ಆಳ್ವ ಗುತ್ತಿಮಾರು ಉದ್ಘಾಟಿಸಲಿದ್ದಾರೆ. ಸಂಘದ ನಿರ್ದೇಶಕ ಸುಧೀರ್ ಶೆಟ್ಟಿ ತೆಂಕಿಲ, ಮಾಜಿ ಉಪಾಧ್ಯಕ್ಷ ಜಗಜೀವನ್ದಾಸ್ ರೈ ಚಿಲ್ಮೆತ್ತಾರು, ಎಂ.ಆರ್ ಜಯಕುಮಾರ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ ಗಂಟೆ 10.30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಬಂಟರ ಯಾನೆ ನಾಡವರ ಮಾತೃತ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಸಮಾಜದ ಜಿಲ್ಲಾ ಮತ್ತು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಿದ್ದಾರೆ. ಅನೇಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.



ಸನ್ಮಾನ:
ಜಿಲಾ ರಾಜ್ಯೋತ್ಸವ ಪುರಸ್ಕೃತರಾಗಿರುವ ಮೋಹನ್ ರೈ ನಂದಾದೀಪ ನರಿಮೊಗರು, ವಿಶ್ವನಾಥ ಶೆಟ್ಟಿ ಉಪಾಧ್ಯಕ್ಷರು, ಬಾಲಕೃಷ್ಣ ಪೊರ್ದಾಲ್ ಕಬಡ್ಡಿ ತರಬೇತುದಾರ, ಸುಂದರ ರೈ ಮಂದಾರ ಕಲಾವಿದರು ಮತ್ತು ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಜೆಸಿಐ ಸಂಘಟನೆಯ ಭಾಗ್ಯೇಶ್ ರೈ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಮನಾಥ ಶೆಟ್ಟಿ ಕಾವು ಹೇಳಿದರು.
ಫೆ.8ಕ್ಕೆ ಸಮಾರೋಪ:
ಫೆ. 8ರಂದು ಪಂದ್ಯಾಟದ ಸಮಾರೋಪ ಸಮಾರಂಭ ನಡೆಯಲಿದೆ. ಕ್ರಿಕೆಟ್ ಪಂದ್ಯಾಟದ ಪ್ರಧಾನ ಪ್ರಾಯೋಜಕಿ ಡಾ. ಆಶಾ ಶಂಕರ್ ಭಂಡಾರಿ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ. ಅನೇಕ ಮಂದಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದ ಹೇಮನಾಥ ಶೆಟ್ಟಿಯವರು ಬಂಟ್ಸ್ ಲೆಜೆಂಡ್ ಟೀಮ್ ಮತ್ತು ಬಂಟ್ಸ್ ಪ್ರೀಮಿಯರ್ ಲೀಗ್ ಪಂದ್ಯಾಟ ತಂಡದ ಮಾಲಕತ್ವದ ಮೂಲಕ ನಡೆಯಲಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಯುವ ಬಂಟರ ಸಂಘದ ಅಧ್ಯಕ್ಷ ಭಾಗ್ಯೇಶ್ ರೈ, ಬಂಟರ್ಸ್ ಕ್ರಿಕೆಟ್ನ ಸಿಇಒ ದಯಾನಂದ ರೈ ಕೋರ್ಮಂಡ, ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕ್ರಿಕೆಟ್ ಟೂರ್ನಮೆಂಟ್ನ ಸಂಚಾಲಕ ಕಾರ್ತಿಕ್ ರೈ, ಬಂಟರ ಸಂಘದ ನಿರ್ದೇಶಕ ರವಿ ಪ್ರಸಾದ್ ಶೆಟ್ಟಿ ಉಪಸ್ಥಿತದ್ದರು.
ತಂಡದ ಮಾಲಕರ ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಬಂಟ್ಸ್ ಲೆಜೆಂಡ್ ಟೀಮ್ನಲ್ಲಿ ಕೃಷ್ಣಪ್ರಸಾದ್ ಆಳ್ವ ಅವರ ನೇತೃತ್ವದಲ್ಲಿ ಅರಮನೆ ಬಂಟ್ ಚಾಲೆಂಜರ್ಸ್, ಸೂರ್ಯನಾಥ್ ಆಳ್ವ ಅವರ ನೇತೃತ್ವದಲ್ಲಿ ಬಂಟ್ ಮಿತ್ತಳಿಕೆ ಸ್ಟ್ರೈಕರ್ಸ್, ಪುರಂದರ ರೈ ಅವರ ನೇತೃತ್ವದಲ್ಲಿ ಬಂಟ್ ಪಂಚಮಿ ಎಟೆಕರ್ಸ್ ತಂಡ ಸಿದ್ದಗೊಂಡಿದೆ. ಮತ್ತೊಂದೆಡೆ ಬಂಟ್ಸ್ ಪ್ರೀಮಿಯರ್ ಲೀಗ್ನಲ್ಲಿ ಬಂಟ್ಸ್ ಬೆಳಿಯೂರುಕಟ್ಟೆ, ಕೊಂಡೋಡಿ ಸ್ಟ್ರೈಕರ್ಸ್ ಕಡಬ, ಸಿಝ್ಲರ್ಸ್, ಟೀಮ್ ರತ್ನಶ್ರೀ ಪುತ್ತೂರು, ಶ್ರೀ ಶಕ್ತಿ, ನಿರ್ವಿ ಚಿಟ್ಸ್ ಪ್ರೈ ಲಿ, ಬಂಟ್ಸ್ 11 ಪಾಪೆಮಜಲು ತಂಡ ಸಿದ್ದಗೊಂಡಿದೆ.










