






ವಿಟ್ಲ: ಪಾಣೆಮಂಗಳೂರು ಸಮೀಪ ಕಂಚಿಕಾರಪೇಟೆ ಬಳಿ ನೇತ್ರಾವತಿ ನದಿಯಲ್ಲಿ ಫೆ.5ರಂದು ಸಾಯಂಕಾಲ ಮೃತದೇಹವೊಂದು ಪತ್ತೆಯಾಗಿದೆ.


ವೀರಕಂಭ ಗ್ರಾಮದ ಬಾಯಿಲ ನಿವಾಸಿ ಪ್ರಕಾಶ್ (35 ವ.)ರವರ ಮೃತದೇಹ ಇದು ಎಂದು ಗುರುತಿಸಲಾಗಿದೆ.



ಕಂಚಿಕಾರಪೇಟೆ ಸೇತುವೆ ಬಳಿ ನದಿ ಮಧ್ಯೆ ಮೃತದೇಹವೊಂದು ತೇಲಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ದೋಣಿಯ ಸಹಾಯದಿಂದ ಸ್ಥಳೀಯರ ನೆರವಿನಿಂದ ದಡಕ್ಕೆ ತರಲಾಯಿತು. ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.










