






ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯೋಜನಾ ಸಮಿತಿಯ 13 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಡಬ ಮತ್ತು ವಿಟ್ಲ ಪಟ್ಟಣ ಪಂಚಾಯತ್ ಮೂವರು ಸದಸ್ಯರು ಸೇರಿ ಎಲ್ಲ 13 ಸ್ಥಾನಗಳಲ್ಲಿಯೂ ಬಿಜೆಪಿ ಜಯಭೇರಿ ಸಾಧಿಸಿದೆ.


ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಸಿ.ಎಚ್. ರಕ್ಷಿತಾ, ಕಡಬ ಪಟ್ಟಣ ಪಂಚಾಯತ್ ಸದಸ್ಯ ದಯಾನಂದ ಗೌಡ ಪಿಜಕ್ಕಳ ಸೇರಿದಂತೆ ಹದಿಮೂರು ಸ್ಥಾನಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಿದೆ. ಸೋಮೇಶ್ವರ ಪುರಸಭೆಯ ಸದಸ್ಯರಾದ ಹರೀಶ್ಚಂದ್ರ, ಮನೋಜ್ ಕುಮಾರ್, ಸೋನಾ ಸುಭಾಷಿಣಿ, ಕೋಟೆಕಾರ್ ಪಟ್ಟಣ ಪಂಚಾಯ್ತಿ ಸದಸ್ಯರಾದ ಜಗದೀಶ ಕೊಂಡಾಣ, ಭವಾನಿ ದೇವದಾಸ್, ಕಿನ್ನಿಗೋಳಿ ಪಟ್ಟಣ ಪಂಚಾಯ್ತಿ ಸದಸ್ಯರಾದ ದಯಾನಂದ ಪಿ.,ರಕ್ಷಿತಾ, ಹರೀಶ್ ಸಿ.ಹೆಚ್.,ಶೈಲೇಶ್ ಅಂಚನ್, ಧನುಷ್ ಎ.ಶೆಟ್ಟಿಗಾರ್, ಬಜಪೆ ಪಟ್ಟಣ ಪಂಚಾಯ್ತಿ ಸದಸ್ಯರಾದ ಯಶೋಧಾ, ರಿತೇಶ್ ಶೆಟ್ಟಿ ಹಾಗೂ ರಾಜೇಶ್ ಅಮೀನ್ ಆರ್.ಕೆ.ಗೆಲುವು ಸಾಧಿಸಿದ ಇತರ ಅಭ್ಯರ್ಥಿಗಳು.



ವಿಜೇತ ಅಭ್ಯರ್ಥಿಗಳಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಶಾಲು ಹಾಕಿ ಅಭಿನಂದಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್, ಪ್ರಮುಖರಾದ ದಯಾನಂದ ತೊಕ್ಕೊಟ್ಟು, ವಿಜಯ ಕುಮಾರ್ಬಟ್ಟೆ, ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು, ಕಾರ್ಯಕರ್ತರು ಇದ್ದರು.










