







ಪುತ್ತೂರು ವಲಯ, ಬನ್ನೂರು ವಲಯದ ಕ್ರೀಡಾಪಟುಗಳಿಗೆ ಜೆರ್ಸಿ ಹಸ್ತಾಂತರ


ಪುತ್ತೂರು: ಉಪ್ಪಿನಂಗಡಿ ಪೆರಿಯಡ್ಕದ ಸರ್ವೋದಯ ಶಾಲಾ ಮೈದಾನದಲ್ಲಿ ಫೆ.15ರಂದು ನಡೆಯಲಿರುವ ಪುತ್ತೂರು ತಾಲೂಕು ಮಟ್ಟದ ಗೌಡರ ಯುವ ಕ್ರೀಡಾ ಸಂಭ್ರಮದ ಅಂಗವಾಗಿ ಪುತ್ತೂರು ಮತ್ತು ಬನ್ನೂರು ವಲಯದ ಕ್ರೀಡಾಪಟುಗಳಿಗೆ ಜೆರ್ಸಿ ಟೀ ಶರ್ಟ್ ಅನಾವರಣ ಕಾರ್ಯಕ್ರಮ ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.



ಪುತ್ತೂರು ವಲಯಕ್ಕೆ ನಾರ್ಟಾನ್ ಸೋಲಾರ್ ಯತೀಶ್ ಕೊಯಿಲ, ಬನ್ನೂರು ವಲಯಕ್ಕೆ ಆರ್.ಕೆ. ಫ್ಯಾಮಿಲಿ ಇದರ ಸದಸ್ಯ ವಸಂತ ಗೌಡ ನೆಕ್ಕಾರಾಜೆ ಇವರು ಟೀ ಶರ್ಟ್ ನೀಡಿದರು. ಕಾರ್ಯಕ್ರಮದಲ್ಲಿ ನಮ್ಮ ಮಾತೃ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.










