ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ

0

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಶ್ರೀ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಗ್ರಾಮ ದೇವರಾದ ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರೆ ಫೆ.12 ಮತ್ತು 13ರಂದು ನಡೆಯಿತು.

ಫೆ.12ರಂದು ಬೆಳಗ್ಗೆ ಗೊನೆ ಮುಹೂರ್ತ, ಬಜತ್ತೂರು, ಕಾಂಚನ, ಪದಕ ದೈವಗಳಿಗೆ ತಂಬಿಲ, ಬಜತ್ತೂರು ಗುತ್ತಿನ ನಾಗತಂಬಿಲ, ತೋರಣ ಮುಹೂರ್ತ ನಡೆಯಿತು. ರಾತ್ರಿ ಚಕ್ರವರ್ತಿ ಕೊಡಮಣಿತ್ತಾಯ ಮತ್ತು ಗ್ರಾಮ ದೈವವಾದ ಶಿರಾಡಿ ದೈವಗಳ ಭಂಡಾರ ಆಗಮನ, ಶ್ರೀ ದೇವರಿಗೆ ರಂಗಪೂಜೆ, ಪಂಜುರ್ಲಿ ಮತ್ತು ಗ್ರಾಮ ದೈವಗಳಿಗೆ ಕೊಡಿನಾಡಿನಲ್ಲಿ ತಂಬಿಲ, ಪ್ರಸಾದ ವಿತರಣೆ, ಶ್ರೀ ದೇವರ ಬಲಿ ಉತ್ಸವ, ಅಶ್ವತ್ಥ ಕಟ್ಟೆಪೂಜೆ, ಉತ್ಸವ, ವಸಂತ ಕಟ್ಟೆಪೂಜೆ, ನೃತ್ಯ ಬಲಿ, ಅನ್ನಸಂತರ್ಪಣೆ ನಡೆಯಿತು.


ಫೆ.13ರಂದು ಬೆಳಗ್ಗೆ ಗಣಪತಿ ಹೋಮ, ಕಲಶಾಭಿಷೇಕ, ಅಪ್ಪಸೇವೆ (ಗಣಪತಿ ದೇವರಿಗೆ), ಶ್ರೀ ದೇವರ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪಂಜುರ್ಲಿ ದೈವಕ್ಕೆ ತಂಬಿಲ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಅರ್ಚಕರಾದ ನಾರಾಯಣ ಬಡೆಕ್ಕಿಲ್ಲಾಯ ಪೂಜಾ ವಿಧಿವಿಧಾನ ನೇರವೇರಿಸಿದರು.


ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಕಾಂಚನ ರೋಹಿಣಿ ಸುಬ್ಬರತ್ನಂ, ಗೌರವಾಧ್ಯಕ್ಷರಾದ ಎ.ಸುಂದರ ಗೌಡ ಸಚಿನ್, ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀಧರ ಗೌಡ ಶ್ರೀಹರಿ ನಡ್ಪ, ಉಪಾಧ್ಯಕ್ಷರಾದ ಶಿವರಾಮ ಕಾರಂತ ಉರಾಬೆ, ಕಾರ್ಯದರ್ಶಿ ಸುಧಾಕೃಷ್ಣ ಪಿ.ಎನ್.ನೆಕ್ಕರಾಜೆ, ಜೊತೆ ಕಾರ್ಯದರ್ಶಿ ಕುಶಾಲಪ್ಪ ಗೌಡ ಬಜತ್ತೂರುಗುತ್ತು, ಕೋಶಾಧಿಕಾರಿ ಜಗದೀಶ ರಾವ್ ಮಣಿಕ್ಕಳ, ಲೆಕ್ಕಪರಿಶೋಧಕರಾದ ಸುರೇಶ್ ಗೌಡ ಗುರುಮನೆ ಬಿದಿರಾಡಿ, ಟ್ರಸ್ಟಿಗಳಾದ ಪುಷ್ಪರಾಜ ನಡ್ಪ, ಎಲ್ಯಣ್ಣ ಗೌಡ ಶಿವಪುರ, ದುಗ್ಗಪ್ಪ ಗೌಡ ಅಗರ್ತಿಮಾರು, ಸುಮನ ಬಡೆಕ್ಕಿಲಾಯ, ಗೌರವ ಟ್ರಸ್ಟಿಗಳಾದ ಕೆ.ವಿ.ಕಾರಂತ ಪ್ರಸನ್ನ ನಿಲಯ ಉರಾಬೆ, ಶಿವಣ್ಣ ಗೌಡ ಗುರುಮನೆ ಬಿದಿರಾಡಿ, ಲೋಕೇಶ ಗೌಡ ಬಜತ್ತೂರು, ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮುಕುಂದ ಗೌಡ ಬಜತ್ತೂರು, ಶ್ರೀ ವಿಷ್ಣುಮೂರ್ತಿ ಭಜನಾ ಸಂಘದ ಪದಾಧಿಕಾರಿಗಳು, ಸದಸ್ಯರು, ಧನು ಪೂಜಾ ಸಮಿತಿ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು, ಗ್ರಾಮಸ್ಥರು, ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here