ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ : ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಉತ್ತಮ ಎಸ್.ಡಿ. ಎಂ. ಸಿ ರಾಜ್ಯ ಪ್ರಶಸ್ತಿ

0

ಪುತ್ತೂರು: ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ವತಿಯಿಂದ ಕೊಡ ಮಾಡುವ ಉತ್ತಮ ಎಸ್‌.ಡಿ.ಎಂ.ಸಿ ರಾಜ್ಯ ಪ್ರಶಸ್ತಿಯನ್ನು ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪಡೆದುಕೊಂಡಿದೆ.

ಕಳೆದ ಮೂರು ವರ್ಷಗಳಿಂದ ಕೆಮ್ಮಾರ ಶಾಲೆಯ ಅಧ್ಯಕ್ಷರಾಗಿ ಮರು ಆಯ್ಕೆಯಾದ ಅಝೀಝ್ ಬಿ.ಕೆ ಮತ್ತು ಶಾಲಾಭಿವೃದ್ಧಿ ಸಮಿತಿಯ ಸದಸ್ಯರನ್ನೊಳಗೊಂಡ ತಂಡವು ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ್ದು, ಆರಂಭದಿಂದಲೇ ಕಾರ್ಯಪ್ರವೃತ್ತಗೊಂಡ ಸದಸ್ಯರು ರೋಟರಿ ಕ್ಲಬ್ ಉಪ್ಪಿನಂಗಡಿ ವತಿಯಿಂದ ಶಾಲೆಯ ಗೋಡೆಗೆ ಬಣ್ಣ, ಮಾಜಿ ಶಾಸಕರ ವಿಶೇಷ ಅನುದಾನದ ಮೂಲಕ ಶಾಲೆಗೆ ಪ್ರೊಜೆಕ್ಟರ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಮಳೆಹಾನಿ ದುರಸ್ಥಿ ಅನುದಾನದ ಮೂಲಕ ಸಭಾಂಗಣಕ್ಕೆ ಹೊಸ ಕಬ್ಬಿಣದ ಮಾಡು ನಿರ್ಮಾಣ, ಹಿರಿಯ ವಿದ್ಯಾರ್ಥಿಗಳ ವತಿಯಿಂದ ಕೈ ತೊಳಿಯುವ ಬೇಸಿನ್, ಬೆಂಚ್ ಡೆಸ್ಕ್, ಪ್ರತಿಭಾ ಕಾರಂಜಿ, ವಾರ್ಷಿಕೋತ್ಸವ, ಇತರ ಅಭಿವೃದ್ಧಿ ಕೆಲಸಗಳು, ದ್ವಾರಕ ಪ್ರತಿಷ್ಠಾನ ಸಂಸ್ಥೆ ಮೂಲಕ ಸುಸಜ್ಜಿತ ಶಾಲಾ ಆಟದ ಮೈದಾನ ನಿರ್ಮಾಣ, ಮುಖ್ಯಗುರುಗಳಾದ ಜಯಶ್ರೀ ಎಂ ಮತ್ತು ಶಾಲಾಭಿವೃದ್ದಿ ಸಮಿತಿ ಜಂಟಿಯಾಗಿ ಆಕರ್ಷಕ ಗೋಡೆ ಬರಹ, ಬಸ್ಸಿನ ಚಿತ್ರ, ಎಲ್ ಕೆ ಜಿ ಪ್ರಾರಂಭ ಮತ್ತು , ಶಿಕ್ಷಣ ಇಲಾಖೆ ಮತ್ತು ಗ್ರಾಮ ಪಂಚಾಯತ್ ವತಿಯಿಂದ ಸುಸಜ್ಜಿತ ಶೌಚಾಲಯ ನಿರ್ಮಾಣ, ಕ್ಯಾಪ್ ಫೌಂಡೇಶನ್ ವತಿಯಿಂದ ಶಾಲೆಗೆ ಕಂಪ್ಯೂಟರ್ ಮತ್ತು ಕಲಿಕೆಗೆ ಬೇಕಾದ ಸಾಮಗ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಊರ ದಾನಿಗಳ ಮೂಲಕ ರಂಗ ಮಂದಿರ ನಿರ್ಮಾಣ, ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿ ಹೀಗೆ ದಾನಿಗಳ ಮೂಲಕ 10 ಹಲವು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಹಿರಿಯ ವಿದ್ಯಾರ್ಥಿಗಳು ಮತ್ತು ಸರ್ವ ವಿದ್ಯಾಭಿಮಾನಿಗಳನ್ನು ಸೇರಿಸಿಕೊಂಡು ನಮ್ಮ ಕೆಮ್ಮಾರ ಶಾಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಸಫಲರಾಗಿದ್ದಾರೆ.

ಫೆ.11ರಂದು ಮಂಗಳೂರಿನ ಪುರಭವನದಲ್ಲಿ ನಡೆದ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯ ಸಮಾವೇಶದಲ್ಲಿ ಉತ್ತಮ ಎಸ್‌ ಡಿ ಎಂ ಸಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ಅಝೀಝ್ ಬಿ.ಕೆ, ಎಸ್‍.ಡಿ.ಎಂ.ಸಿ ಸದಸ್ಯರಾದ ಪದ್ಮನಾಭ ಶೆಟ್ಟಿ, ಹಿರಿಯ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರರಾದ ಅಡ್ವಕೇಟ್ ಕಬೀರ್ ಬಿಸಿರೋಡ್ ಪ್ರಶಸ್ತಿ ಪಡೆದುಕೊಂಡರು.

ಅಝೀಝ್ ಬಿ.ಕೆ ಅಧ್ಯಕ್ಷರು, ಎಸ್‌.ಡಿ.ಎಂ.ಸಿ ಕೆಮ್ಮಾರ

LEAVE A REPLY

Please enter your comment!
Please enter your name here