






ಸಾರ್ವಜನಿಕ ಶಿಕ್ಷಣ ಇಲಾಖೆಯು ಅಕ್ಟೋಬರ್ 28 2026ರಂದು ಆಯೋಜಿಸಿದ್ದ, ಪುತ್ತೂರಿನ ಸುದಾನ ವಸತಿಯುತ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ. ಕ್ವಿಜ್ ಸ್ಪರ್ಧೆಯಲ್ಲಿ ಸುದಾನ ಪ್ರೌಢ ಶಾಲೆಯ ವಿನ್ಯಾಸ್ ಡಿವಿ (10ನೇ) (ಶ್ರೀ ವಿಶ್ವನಾಥ ಡಿ ಮತ್ತು ವಿಮಲ ವಿಶ್ವನಾಥರವರ ಮಗ) ಆಷ್ಲೇಶ್ ನಾಯಕ್ ಎಲ್ (9ನೇ) (ಶ್ರೀ ಸಿ. ಶೈಲೇಶ್ ನಾಯಕ್ ಮತ್ತು ರಾಜೇಶ್ವರಿ ಎಂ ರವರ ಮಗ) ವಿಜೇತರಾಗಿದ್ದು ಮುಂದೆ ನಡೆಯಲಿರುವ ಮೈಸೂರು ವಿಭಾಗೀಯ ಮಟ್ಟದಕ್ವಿಜ್ ಸ್ಪರ್ಧೆಗೆಆಯ್ಕೆಯಾಗಿರುತ್ತಾರೆ.
ವಿಜೇತರನ್ನು ಶಾಲಾ ಸಂಚಾಲಕರಾದರೆ. ವಿಜಯ ಹಾರ್ವಿನ್, ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಅಭಿನಂದಿಸಿ ಶುಭಹಾರೈಸಿದ್ದಾರೆ.ಇವರಿಗೆ ಶಾಲೆಯ ಕಂಪ್ಯೂಟರ್ ಶಿಕ್ಷಕರಾದ ಸುಂದರ್ ನಾವೂರ್ರವರು ಮಾರ್ಗದರ್ಶನ ಮಾಡಿದ್ದಾರೆ












