






ಪುತ್ತೂರು: ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ,, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಿರ್ದೇಶನಾಲಯ ಬೆಂಗಳೂರು, ಟಿ.ಸಿ.ಎಸ್, ಹಾಗೂ ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಸುದಾನ ವಸತಿಯುತ ಶಾಲೆ ಪುತ್ತೂರು ಇವರ ಆಶ್ರಯದಲ್ಲಿ 2026- 27 ನೇ ಸಾಲಿನ ದ.ಕ ಜಿಲ್ಲಾಮಟ್ಟದ ಗ್ರಾಮೀಣ ಐ.ಟಿ ಕ್ವಿಝ್ ದಿನಾಂಕ 28.10.2026 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿನಯ್ ಶೆಟ್ಟಿ ನೋಡೆಲ್ ಆಫೀಸರ್ ಮತ್ತು ಉಪನ್ಯಾಸಕರು ಸರಕಾರಿ ಪಿ ಯು ಕಾಲೇಜು ಕಾರ್ ಸ್ಟ್ರೀಟ್ ಮಂಗಳೂರು ಇವರು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಲಕ್ಷ್ಮೀ ನಾರಾಯಣ್ ( Subject Inspector DDPI office Mangaluru) ಶೋಭಾ ಜಿ.ಎನ್ (Asst. Project co-ordinator DDPI office), ದೇವದಾಸ್ ( Subject Inspector DDPI office), ,ಶಾಲಾ ಕೋಶಾಧಿಕಾರಿ ಆಸ್ಕರ್ ಆನಂದ್, ಶಾಲಾ ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್, ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಸ್ವಾಗತಿಸಿ, ನವೀನ್ ವೇಗಸ್ ಸಂಯೋಜಕರು ಬಿ.ಆರ್.ಸಿ ಪುತ್ತೂರು ವಂದಿಸಿದರು. ಶಾಲಾ ಐ.ಟಿ ಶಿಕ್ಷಕಿ ಗಾಯತ್ರಿ ಎಂ ಈ ಕಾರ್ಯ ಕ್ರಮವನ್ನು ನಿರೂಪಿಸಿದರು.
ಕ್ವಿಝ್ ನಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ ಸುಮಾರು 138 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ 50 ವಿದ್ಯಾರ್ಥಿಗಳು ನವೆಂಬರ್ 2, 2026 ರಂದು ಮೈಸೂರಿನಲ್ಲಿ ನಡೆಯಲಿರುವ ವಿಭಾಗೀಯ ಮಟ್ಟದ ಕ್ವಿಝ್ ಗೆ ಆಯ್ಕೆಯಾಗಿರುತ್ತಾರೆ.












