ಇಳಂತಾಜೆ ದೀಪಿಕಾ ಎಸ್ ಶೆಟ್ಟಿ  ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ 

0

ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದ ವತಿಯಿಂದ ಸನ್ಮಾನ 

ಕೆಯ್ಯೂರು : ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯ 2025 ನೇ ಸಾಲಿನಲ್ಲಿ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಪರೀಕ್ಷೆ ನಡೆಸಿತ್ತು. ಕಳೆದ ಅಕ್ಟೋಬರ್ ತಿಂಗಳಲ್ಲಿ ಪ್ರಾಥಮಿಕ ಪರೀಕ್ಷೆ ನಡೆದು ಡಿಸೆಂಬರ್ ತಿಂಗಳಲ್ಲಿ ಮುಖ್ಯ ಪರೀಕ್ಷೆ ಹಾಗೂ ಜನವರಿ ತಿಂಗಳಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಡೆದಿದ್ದ ನೇರ ಸಂದರ್ಶನದ ಮೂರು ಹಂತದ ಕಠಿಣ ಪರೀಕ್ಷೆಗಳನ್ನು ಪೂರ್ಣಗೊಳಿಸಿ ದೀಪಿಕಾ ಎಸ್ ಶೆಟ್ಟಿ ಇಳಂತಾಜೆ ರಾಜ್ಯಕ್ಕೆ  4ನೇ ರ‍್ಯಾಂಕ್ ಪಡೆದು ಇದೀಗ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. 

ಇವರನ್ನು ಶ್ರೀ ಮಹೀಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ಎ.ಕೆ ಜಯರಾಮ ರೈ ಕೆಯ್ಯೂರು,   ಶ್ರೀ ಕ್ಷೇತ್ರ ಕೆಯ್ಯೂರು ದೇವಳದ  ಜೀರ್ಣೋದ್ಧಾರ  ಸಮಿತಿ ಅಧ್ಯಕ್ಷ ಇ. ಸಂತೋಷ್ ಕುಮಾರ್ ರೈ ಇಳಾಂತಜೆ, ಶ್ರೀ ಹೊಸಮ್ಮ ದೈವಸ್ಥಾನ ಫಲ್ಲತ್ತಡ್ಕ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ , ದೇವಳದ  ವ್ಯವಸ್ಥಾಪನ ಸಮಿತಿ ಸದಸ್ಯರಾದ ಜಲಜಾಕ್ಷಿ ಎ.ರೈ ಸಾಗು, ಸುಜಯ ಕೆಯ್ಯೂರು ,  ಅರ್ಚಕ ಶ್ರೀನಿವಾಸರಾವ್, ಉಮಾಕಾಂತ್ ಬೈಲಾಡಿ, ಅಶೋಕ್ ರೈ ದೇರ್ಲ, ದಾಮೋದರ ಪೂಜಾರಿ ಕೆಂಗುಡೇಲು,  ಹರಿನಾಥ ನಾಯ್ಕ ಇಳಂತಾಜೆ ,  ಕೆ.ಎಸ್ ಚಂದ್ರಶೇಖರ ಪೂಜಾರಿ ಕಣಿಯಾರು,  ಬಂಟರ ಸಂಘ ಗ್ರಾಮ ಸಮಿತಿ ಕೆಯ್ಯೂರು ಅಧ್ಯಕ್ಷ  ರಮೇಶ್ ಅಬ್ಬೆಜಾಲು, ಮಧುಸೂದನ್ ಭಟ್ ಕಜೆಮೂಲೆ , ದೇವಳದ ಸಿಬ್ಬಂದಿ ಚಂದ್ರಶೇಖರ ರೈ ಕಜೆ ಉಪಸ್ಥಿತರಿದ್ದರು.

 ಇವರು ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಕೆಪಿಎಸ್ ಕೆಯ್ಯೂರಿನಲ್ಲಿ ಪೂರ್ಣಗೊಳಿಸಿ, ಕಾನೂನು ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾನೂನು ಕಾಲೇಜು ಮತ್ತು ಬೆಂಗಳೂರಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.ಕೆಯ್ಯೂರು ಗ್ರಾಮದ ಇಳಂತಾಜೆ ನಿವಾಸಿ ಶ್ರೀಧರ ಶೆಟ್ಟಿ, ಹರಿಣಾಕ್ಷಿ ದಂಪತಿಗಳ ಪುತ್ರಿ.

LEAVE A REPLY

Please enter your comment!
Please enter your name here