ಕೊಳ್ನಾಡು: ಮನೆಯಿಂದ ಚಿನ್ನಾಭರಣ ಕಳವು

0

ವಿಟ್ಲ: ಕುಡ್ತಮುಗೇರು-ನಾರ್ಶ ಸಂಪರ್ಕ ರಸ್ತೆಯ ಕೊಳ್ನಾಡು ಗ್ರಾಮದ ಕೆ.ಪಿ.ಬೈಲು ಎಂಬಲ್ಲಿ ಮನೆಯಿಂದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.


ಕೊಳ್ನಾಡು ಗ್ರಾಮದ ಕೆ.ಪಿ.ಬೈಲು ದಿ.ಇಬ್ರಾಹಿಂ ರವರ ಪತ್ನಿ ರಹಮತ್ ರವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ರಹಮತ್ ರವರು ಫೆ.13ರಂದು ಮಂಗಳೂರಿನಲ್ಲಿರುವ ತನ್ನ ಪುತ್ರಿಯ ಮನೆಗೆ ಹೋಗಿದ್ದರು. ಫೆ.17ರಂದು ಸಂಜೆ ಮರಳಿ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದ್ದಾರೆ. ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಅಪಾರ ಪ್ರಮಾಣದ ಚಿನ್ನಾಭರಣಕ್ಕಾಗಿ ಜಾಲಾಡಿದ್ದಾರೆ. ಮನೆಯೊಳಗಿನ ಮೂರು ಕೋಣೆಗಳಿಗೂ ನುಗ್ಗಿದ ಕಳ್ಳರು ಆರು ಕಪಾಟುಗಳಲ್ಲೂ ಚಿನ್ನಾಭರಣಕ್ಕಾಗಿ ಸಾಕಷ್ಟು ಹೊತ್ತು ಜಾಲಾಡಿದ್ದಾರೆ.
ಬಟ್ಟೆ-ಬರೆಗಳು, ದಾಖಲೆಗಳು ಸೇರಿದಂತೆ ಕಪಾಟಿನಲ್ಲಿದ್ದ ಎಲ್ಲಾ ವಸ್ತುಗಳನ್ನೂ ಚಲ್ಲಾಪಿಲ್ಲಿ ಮಾಡಿ ಹುಡುಕಾಡಿದ್ದಾರೆ. ಬಳಿಕ ಮನೆಯಲ್ಲಿದ್ದ ಒಂದು ಜೊತೆ ಬೆಂಡೋಲೆ, ಒಂದು ಚಿನ್ನದುಂಗುರ ಮತ್ತು ಒಂದಿಷ್ಟು ವಿದೇಶಿ ಕರೆನ್ಸಿಗಳನ್ನು ಕಳವುಗೈದಿದ್ದಾರೆ.


ರಹಮತ್ ಅವರು ತನ್ನಲ್ಲಿದ್ದ ಚಿನ್ನಾಭರಣಗಳನ್ನೆಲ್ಲಾ ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದರಿಂದಾಗಿ ಕಳ್ಳರಿಗೆ ಹೆಚ್ಚಿನ ಚಿನ್ನಾಭರಣಗಳು ಸಿಕ್ಕಿಲ್ಲ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ, ಎಸೈ ರಾಮಕೃಷ್ಣ ಮತ್ತು ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಮತ್ತು SOCOತಂಡದ ಸಿಬ್ಬಂದಿಗಳು ಆಗಮಿಸಿದ್ದು ತನಿಖೆ ನಡೆಸಿದ್ದಾರೆ. ಮನೆಯವರು ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here