ಆಲಂತಾಯ ಶಾಲಾ ಶತಮಾನೋತ್ಸವ ಲೆಕ್ಕಪತ್ರ ಮಂಡನೆ, ಅಭಿನಂದನಾ ಸಭೆ

0

ನೆಲ್ಯಾಡಿ: ಕಡಬ ತಾಲೂಕಿನ ಆಲಂತಾಯ ಗ್ರಾಮದ ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಯ ಶತಮಾನೋತ್ಸವ ಸಂಭ್ರಮಾಚರಣೆಯ ಲೆಕ್ಕಪತ್ರ ಮಂಡನೆ ಹಾಗೂ ಅಭಿನಂದನಾ ಸಭೆ ಫೆ.19ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್ ಸಿ.ಬಿ. ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕಿ ರಾಜೇಶ್ವರಿ ಅವರು ಮಾತನಾಡಿ, ಶತಮಾನೋತ್ಸವ ಸಮಾರಂಭದಲ್ಲಿ ನಡೆದ ’ಗುರುವಂದನಾ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆದಿದೆ ಎಂದು ಹೇಳಿ ಶಾಲೆಯ ಬೆಳವಣಿಗೆಗೆ ಸಂತಸ ವ್ಯಕ್ತಪಡಿಸಿದರು. ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಪೂವಪ್ಪ ಕರ್ಕೇರ ಪಾಲೇರಿ ಮಾತನಾಡಿ, ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್ ಸಿ.ಬಿ. ಅವರ ಸಮರ್ಥ ನಾಯಕತ್ವ ಹಾಗೂ ಅವರ ಜೊತೆಗಿನ ಸಮಿತಿ ಸದಸ್ಯರು ಮತ್ತು ಶಾಲಾ ಸಿಬ್ಬಂದಿಗಳ ಒಗ್ಗಟ್ಟಿನ ಶ್ರಮದಿಂದಾಗಿ ಶತಮಾನೋತ್ಸವವು ಅತ್ಯಂತ ಯಶಸ್ವಿಯಾಗಿ ನೆರವೇರಿದೆ ಎಂದು ಶ್ಲಾಘಿಸಿದರು. ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಅವರು ಶಾಲೆಯ ಮುಂದಿನ ಅಭಿವೃದ್ಧಿ ಕೆಲಸದ ಬಗ್ಗೆ ಮಾರ್ಗದರ್ಶನ ನೀಡಿದರು. ಶತಮಾನೋತ್ಸವ ಸಮಿತಿ ಸಂಚಾಲಕರೂ, ಕಟ್ಟಡ ನಿರ್ಮಾಣ ಉಸ್ತುವಾರಿಯೂ ಆದ ಮನೋಹರ್ ಧವಳಗಿರಿ, ಹಳೆವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ಪಾಲೇರಿ ಶುಭ ಹಾರೈಸಿದರು.


ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ಆಲಂತಾಯ, ಸದಸ್ಯರಾದ ಪದ್ಮನಾಭ ಪೆರ್ನಾರ್, ಶಿವಪ್ರಸಾದ್ ಶಿವಾರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಂದರ್ ಪಾಲೇರಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಶಶಿಕಲಾ, ಶತಮಾನೋತ್ಸವದ ಆರ್ಥಿಕ ಸಮಿತಿ ಸಂಚಾಲಕ ಬಾಬು ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಅಲಂಗಪ್ಪೆ ಅವರು ಶತಮಾನೋತ್ಸವದ ಆಯ-ವ್ಯಯದ ವರದಿಯನ್ನು ಮಂಡಿಸಿದರು. ಅತಿಥಿ ಶಿಕ್ಷಕಿ ದೀಕ್ಷಿತಾ ಪಿ.ಆರ್. ಸ್ವಾಗತಿಸಿದರು. ಶಾಲಾ ಶಿಕ್ಷಕಿ ರಶ್ಮಿ ಪಿ. ವಂದಿಸಿದರು. ಸಮಿತಿಯ ಸದಸ್ಯರು, ಅಂಗನವಾಡಿ ಶಿಕ್ಷಕಿಯರು, ಪೋಷಕರು ಮತ್ತು ಊರವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here