






ವಿಟ್ಲ: ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು. ಸಂಘದ ಅಧ್ಯಕ್ಷರಾದ ನರ್ಸಪ್ಪ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಫಲಾನುಭವಿಗಳು ಪ್ರಯೋಜನವನ್ನು ಪಡೆದರು.






ಸಂಘದ ಉಪಾಧ್ಯಕ್ಷರಾದ ಮಂಜು, ನಿರ್ದೇಶಕರುಗಳಾದ ಸದಾನಂದ ಸೇರಾಜೆ, ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವಿಟ್ಲ ವಲಯ ಮೇಲ್ವಿಚಾರಕಾರು ಯೋಗೀಶ್ ಹೆಚ್, ಸಂಧ್ಯಾಮೋಹನ, ಹರೀಶ ನಾಯ್ಕ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ವರ ಬಿ. ಮೊದಲಾದವರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಮೋಹನದಾಸ್ ಉಕ್ಕುಡ ಸ್ವಾಗತಿಸಿದರು.
ಪ್ರಸಾದ್ ನೇತ್ರಾಲಯದ ಮನೋಹರ್, ಡಾ| ಪ್ರಶಾಂತ್ ಸೇರಿದಂತೆ ಸಿಬ್ಬಂದಿ ವರ್ಗದವರು ಕಣ್ಣಿನ ಚಿಕಿತ್ಸಾ ಹಾಗೂ ಸಲಹೆಗಳನ್ನು ನೀಡಿದರು. ರೋಟರಿ ಕ್ಲಬ್ ಪುತ್ತೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಹಾಗೂ ಇತರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.










