ಗೆಜ್ಜೆಗಿರಿ ವಾರ್ಷಿಕ ಜಾತ್ರಾ ಮಹೋತ್ಸವ ಅಮ್ಮನ ಮಡಿಲ ಪ್ರಸಾದ, ಹರಿದು ಬಂದ ಜನಸಾಗರ

0

ಬಡಗನ್ನೂರು: ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.25ರಂದು ಮೊದಲ್ಗೊಂಡು ಮಾ.1ರ ವರೆಗೆ ಶ್ರೀ ಶಿವಾನಂದ ತಂತ್ರಿಯವರ ನೇತೃತ್ವದಲ್ಲಿ ವೈದಿಕ ವಿಧಿ-ವಿಧಾನದೊಂದಿಗೆ ತೌಳವ ಪರಂಪರೆಯ ಅನುಸಾರ ನಡೆಯುತ್ತಿದ್ದು, ಇದರ ಅಂಗವಾಗಿ ಫೆ.28ರಂದು ಮಡಿಲು ಸೇವೆ ಪ್ರಸಾದ ವಿತರಣೆ ನಡೆಯಿತು 

ಬೆಳಿಗ್ಗೆ ಗಣಪತಿ ಹೋಮ, ಸಾನಿಧ್ಯಗಳಿಗೆ ನವಕ ಕಲಶಾಭಿಷೇಕ ಮಧ್ಯಾಹ್ನ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಪಲ್ಲಪೂಜೆ, ನಡೆದು ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.

ಅಮ್ಮನ ಮಡಿಲ ಪ್ರಸಾದ ವಿತರಣೆ :
ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆಯ ನಂತರ ಮಡಿಲು ಸೇವೆ ಪ್ರಸಾದ ವಿತರಣೆ ನಡೆಯಿತು. ಆರಂಭದಲ್ಲಿ ಶ್ರೀ ಮಾತೆ ದೇಯಿ ಬೈದೈತಿ ಅಮ್ಮನವರ ಮಹಾ ಸಂಕಲ್ಪದಂತೆ ಅಮ್ಮನ ಪ್ರೀತಿ ತುಂಬಿದ ಆಶೀರ್ವಾದ ರೂಪದಲ್ಲಿ 9 ಮಂದಿ ಮಾತೆಯರಿಗೆ ತುಳುನಾಡ ಗೌರವ ರೂಪದಲ್ಲಿ ಅರಸಿನ ಕಂಕುಮ ತಿಲಕ, ಇಟ್ಟು ಕೖೆಗೆ ಬಲೆ ಮಲ್ಲಿಗೆ ಸೀರೆ ಕೊಟ್ಟು  ಮಡಿಲು ತುಂಬಿಸುವ ಕಾರ್ಯಕ್ರಮ ನಡೆದು. ಬಳಿಕ  ಸಮಾರು 5 ಸಾವಿರ ಕ್ಕೂ ಮಿಕ್ಕಿ ಮಾತೆಯರಿಗೆ ಅಮ್ಮನ ಮಡಿಲ ಪ್ರಸಾದ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ದೇಯಿ ಬೈದೈತಿ, ಕೋಟಿ-ಚೆನ್ನಯ ಮೂಲಸ್ಥಾನ ಆಡಳಿತ ಸಮಿತಿ ಗೌರವಾಧ್ಯಕ್ಷರಾದ ಪೀತಾಂಬರ ಹೇರಾಜೆ, ಡಾ.ರಾಜಶೇಖರ ಕೋಟ್ಯಾನ್ ಜಯಂತ ನಡುಬೈಲು, ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಮೊಕ್ತೇಸರ ಶ್ರೀಧರ ಪೂಚಾರಿ ಪ್ರಧಾನ ಕಾರ್ಯದರ್ಶಿ ಡಾ. ರಾಜರಾಮ್ ಕೆ.ಬಿ, ಜತೆ ಕಾರ್ಯದರ್ಶಿ ಡಾ.ಸಂತೋಷ್ ಬೈರಂಪಳ್ಳಿ ಕೋಶಾಧಿಕಾರಿ ಮೋಹನ್‌ದಾಸ್ ವಾಮಂಜೂರು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ, ಉಪಾಧ್ಯಕ್ಷ ಶೈಲೇಂದ್ರ ವೈ. ಸುವರ್ಣ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಹರೀಶ್ ಸಾಲ್ಯಾನ್ ಮುಂಬೈ, ಕುಮಾರ್  ಇರುವೖೆಲ್,  ಗೆಜ್ಜೆಗಿರಿ, ಯಕ್ಷಗಾನ ಮೇಳದ ಗೌರವ ಸಂಚಾಲಕ ಪ್ರಶಾಂತ್ ಪೂಜಾರಿ ಮಸ್ಕೃತ್, ಪ್ರಧಾನ ಸಂಚಾಲಕ ಪ್ರಮಲ್ ಕುಮಾರ್ ಕಾರ್ಕಳ ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ, ವಿಶೇಷ ಅಹ್ವಾನಿತರಾಗಿ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ, ಸಂಜೀವ ಮಠಂದೂರು, ಕ್ಷೇತ್ರಾಡಳಿತ ಸಮಿತಿ ಸದಸ್ಯರಾದ ಸುರೇಂದ್ರ ಪೂಜಾರಿ ಮುಂಬೈ, ಭಾಸ್ಕರ್ ಎಂ. ಸಾಲ್ಯಾನ್,  ಹರೀಶ್ ಕೆ. ಪೂಜಾರಿ ನಾರಾಯಣ ಮಚ್ಚಿನ, ಜಯಾನಂದ ಎಂ ಮಂಗಳೂರು ಲೀಲಾವತಿ ಗೆಜ್ಜೆಗಿರಿ, ರವೀಂದ್ರ ಸುವರ್ಣ,  ಹಾಗೂ ಊರಪರವೂರ ಭಕ್ತಾದಿಗಳು ಭಾಗವಹಿಸಿದರು.

ಮಹಾ ಅನ್ನಸಂತರ್ಪಣೆ
ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ಅಮ್ಮನ ಮಡಿಲ ಪ್ರಸಾದ ಸ್ವೀಕರಿಸಿ ಅನ್ನಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here