






ಭರವಸೆ ನೀಡಿ ಮೋಸ ಮಾಡುವುದು ಜನಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲ-ಶಾಸಕ ಅಶೋಕ್ ರೈ


ಪುತ್ತೂರು: ಜನಪ್ರತಿನಿಧಿಗಳ ಬಳಿ ಜನರು ಬರುವುದು ಅವರ ಊರಿನ ಸಮಸ್ಯೆ ಹೇಳಿಕೊಳ್ಳುವುದಕ್ಕೆ ಮತ್ತು ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಾಗಿರುತ್ತದೆ, ನಮ್ಮ ಬಳಿ ಬರುವ ಯಾವುದೇ ಜನ ಸಾಮಾನ್ಯನ ಬಳಿಯೂ ಸುಳ್ಳು ಭರವಸೆಯನ್ನು ಕೊಟ್ಟು ಮೋಮಾಡಬಾರದು ಅದು ಜನಪ್ರತಿನಿಧಿಗಳಿಗೆ ಶೋಭೇ ತರುವುದಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು.



ಅವರು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮ , ಕೊಳ್ತಿಗೆ ಗ್ರಾಮ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತಡೆಗೋಡೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಬಾರದ ಅನುದಾನವನ್ನು ಬರುತ್ತದೆ ಎಂದು ಜನರಿಗೆ ಈ ಹಿಂದೆ ಮೋಸಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಜನಪ್ರತಿನಿಧಿಗಳು ಮಾತು ಕೊಟ್ಟರೆ ಅದನ್ನು ಜನ ನಂಬಿ ಬಿಡುತ್ತಾರೆ ಆ ಬಳಿಕ ಹೇಳಿದ ಕೆಲಸ ಆಗದೇ ಇದ್ದಲ್ಲಿ ಅವರು ನಮ್ಮನ್ನು ತೂಕ ಮಾಡುತ್ತಾರೆ ಎಂಬ ಪರಿಜ್ಞಾನ ಪ್ರತೀಯೊಬ್ಬ ಜನಪ್ರತಿನಿಧಿಯಲ್ಲೂ ಇರಬೇಕು ಎಂದರು.
ಅಭಿವೃದ್ದಿ ಬಿಟ್ಟು ಬೇರೆ ವಿಚಾರವೇ ಇಲ್ಲ
ಪುತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ದಿಯೊಂದೇ ನನ್ನ ಮೂಲ ಮಂತ್ರ ಇದೊಂದು ಬಿಟ್ರೆ ಬೇರೆ ವಿಚಾರವೇ ಇಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದರ ಜೊತೆ ಹೊಸ ಹೊಸ ಉದ್ಯಮಗಳನ್ನು ಪುತ್ತೂರಿಗೆ ತರುವುದು, ಇಲ್ಲಿನ ಯುವಕರಿಗೆ ಉದ್ಯೋಗ ಕೊಡಿಸುವುದು ನನ್ನ ಮುಖ್ಯ ಧ್ಯೇಯವಾಗಿದೆ. ಮೆಡಿಕಲ್ ಕಾಲೇಜು , ಮೆಡಿಕಲ್ ಆಸ್ಪತ್ರೆ ಮಂಜೂರಾಗಿದೆ ಇನ್ನು ಅದರ ಕಾಮಗಾರಿ ನಡೆಯುತ್ತದೆ. ಟೀಕಿಸುವವರ ಟೀಕೆಗೆ ಉತ್ತರ ಕೊಡಲು ಸಮಯವೇ ಇಲ್ಲದಂತ ಪರಿಸ್ಥಿತಿ ಇದೆ, ಪುತ್ತೂರಿನ ಗ್ರಾಮೀಣ ಭಾಗದ ರಸ್ತೆ, ಕುಡಿಯುವ ನೀರಿಗೆ ಆಧ್ಯತೆಯನ್ನು ನೀಡಲಾಗಿದೆ. ಇದೀಗ 5.45 ಕೋಟಿ ರೂ ಮಂಜೂರಾಗಿದ್ದು ಆದ್ಯತೆ ಮೇರೆಗೆ ತುರ್ತು ಕೆಲಸ ಆಗಬೇಕಾದ ಸ್ಥಳಕ್ಕೆ ಅನುದಾನ ನೀಡಲಾಗಿದೆ. 350 ಕೋಟಿ ರೂ ಬೇಡಿಕೆ ಇದ್ದು ಎಲ್ಲಾ ಬೇಡಿಕೆ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ, ಯಾವುದೇ ಭರವಸೆಯನ್ನು ನಾನು ನೀಡಿಲ್ಲ, ಅನುದಾನ ಬಂದಲ್ಲಿ ಅದನ್ನು ಹಂಚಿಕೆ ಮಾಡಲಾಗುವುದು ಎಂದು ಶಾಸಕರು ಹೇಳಿದರು.
ಪುತ್ತೂರಿನಲ್ಲಿ ಕಾಂಗ್ರೆಸ್ ಇನ್ನಷ್ಟು ಬಲಿಷ್ಟ: ಕೆ ಪಿ ಆಳ್ವ
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಇನ್ನಷ್ಟು ಬಲಿಷ್ಟವಾಗುತ್ತಿದೆ, ಜನರ ಬೇಡಿಕೆಗಳು ಒಂದೊಂದಾಗಿ ಈಡೇರುತ್ತಿದೆ, ಸರಕಾರದ ಅಭಿವೃದ್ದಿ ಕಾರ್ಯಗಳಿಂದ ಜನ ಸಾಮಾನ್ಯ ತೃಪ್ತಿಗೊಂಡಿದ್ದಾನೆ ಎಂದು ಪುತ್ತೂರು ಬ್ಲಾಕ್ ಅದ್ಯಕ್ಷ ಕೃಷ್ಣಪ್ರಸಾದ್ ಆಳ್ವ ಹೇಳಿದರು.
ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರದ ಸಾವಿರಾರು ಕುಟುಂಬಗಳು ಜೀವನ ನಡೆಸುವಂತಾಗಿದೆ. ಕೇಂದ್ರ ಸರಕಾರ ಪ್ರತೀಯೊಂದು ವಸ್ತುಗಳ ಬೆಲೆ ಏರಿಕೆಯನ್ನು ಮಾಡಿ ಬಡವರನ್ನು ಹಸಿವಿನಿಂದ ಇರುವಂತಹ ಮಾಡುವ ಕೆಲಸವನ್ನು ಮಾಡುತ್ತಿದೆ ಆದರೆ ಕರ್ನಾಟದಲ್ಲಿ ಪಂಚ ಗ್ಯಾರಂಟಿ ಯೋಜನೆಯ ಉಚಿತ ಅನ್ನ ಭಾಗ್ಯ ಯೋಜನೆಯಿಂದ ಇನ್ನೂ ನೆಮ್ಮದಿಯಿಂದಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಸರಕಾರವಿದ್ದಲ್ಲಿ ಮಾತ್ರ ನಮಗೆ ಶಾಂತಿ, ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂಬುದು ಎಲ್ಲರಿಗೂ ಅರಿವಿದೆ ಮುಂದಿನ ಗ್ರಾಪಂ , ತಾಪಂ , ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಲಿದೆ , ಬಡವರ ಆಶೀರ್ವಾದ ಮತ್ತು ಶಾಸಕ ಅಶೋಕ್ ರೈ ಅಭಿವೃದ್ದಿ ಕಾರ್ಯಗಳೇ ನಮಗೆ ವರದಾನವಾಗಿದೆ ಎಂದು ಹೇಳಿದರು.
ವಿಟ್ಲ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ದಿ: ಪೂಜಾರಿ
ಅಶೋಕ್ ರೈ ಅವರು ಶಾಸಕರಾದ ಬಳಿಕ ಬಂಟ್ವಾಳ ತಾಲೂಕು ವ್ಯಾಪ್ತಿಯ ವಿಟ್ಲ ಭಾಗಕ್ಕೆ ಹೆಚ್ಚಿನ ಅನುದಾನವನ್ನು ನೀಡಿದ್ದಾರೆ. ಅನೇಕ ವರ್ಷಗಳ ರಸ್ತೆ ಬೇಡಿಕೆಯನ್ನು ಈಡೇರಿಸಲಾಗಿದೆ, ದಾರಿ ಸಮಸ್ಯೆ, ರಸ್ತೆ ವಿವಾದವನ್ನು ಇತ್ಯರ್ಥ ಮಾಡುವ ಮೂಲಕ ಜನರ ಬೇಡಿಕೆಗಳನ್ನು ಈಡೇರಿಸಲಾಗಿದೆ. ಇಷ್ಟು ವರ್ಷದಲ್ಲಿ ಆಗದ ಕಾಮಗಾರಿಗಳೂ ಈ ಬಾರಿ ನಡೆದಿದೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ತಡೆಗೋಡೆ ಕಾಮಗಾರಿಗೆ ಇಂದು ಶಿಲಾನ್ಯಾಸ ನೆರವೇರಿಸಲಾಗಿದೆ. ಸುಮಾರು 12 ವಿವಿಧ ಕಡೆಗಳಲ್ಲಿ ತಡೆಗೋಡೆ ಶಿಲಾನ್ಯಾಸ ನಡೆದಿದೆ. ಜನರ ನಿರೀಕ್ಷೆಗೂ ಮೀರಿ ಕ್ಷೇತ್ರಕ್ಕೆ ಅನುದಾನ ಬರುತ್ತಿದೆ ಎಂದು ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ಹೇಳಿದರು.
ಅಭಿವೃದ್ದಿ ಪರ್ವ ಆರಂಭವಾಗಿದೆ: ತೌಸೀಫ್
ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು ಟಿ ತೌಸೀಫ್ ರವರು ಮಾತನಾಡಿ ಪುತ್ತೂರನ್ನು ಮುಂದಿನ 30 ವರ್ಷಗಳ ಬಳಿಕ ಹೇಗೆ ಮಾಡಬೇಕು ಎಂಬುದನ್ನು ಈಗಲೇ ಪ್ಲಾನ್ ರೆಡಿ ಮಾಡುತ್ತಿರುವ ಶಾಸಕ ಅಶೋಕ್ ರೈ ಅವರ ಮುಂದಾಲೋಚನೆ ಯಶಶ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಿಂದೆ ಕೆಲವು ಶಾಸಕರು ಅಭಿವೃದ್ದಿಯ ಬಗ್ಗೆ ಆಶ್ವಾಸನೆ ಮಾತ್ರ ಕೊಟ್ಟಿದ್ದರೆ ಅಶೋಕ್ ರೈ ಅವರು ಆಶ್ವಾಸನೆ ನೀಡದೆ ಅಭಿವೃದ್ದಿ ಮಾಡುತ್ತಿರುವುದು ಕ್ಷೇತ್ರದ ಜನರ ಪಾಲಿನ ಭಾಗ್ಯವಾಗಿದೆ . ಮುಂದಿನ ಎರಡು ವರ್ಷದಲ್ಲಿ ಇನ್ನಷ್ಟು ಅನುದಾನಗಳು ಪುತ್ತೂರಿಗೆ ಹರಿದು ಬರಲಿದ್ದು , ಮೆಡಿಕಲ್ ಕಾಲೇಜು ಪುತ್ತೂರನ್ನು ಹತ್ತೂರು ಕಣ್ಣು ಬಿಟ್ಟು ನೋಡುವಂತೆ ಮಾಡಿದೆ ಎಂದು ಹೇಳಿದರು.
ಶಿಲಾನ್ಯಾಸ ಸಮಾರಂಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರೈ, ಮಾಜಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ, ಕಾರ್ಯಾಧ್ಯಕ್ಷ ವಿಕ್ರಂಶೆಟ್ಟಿ, ಉಸ್ತುವಾರಿ ಪ್ರಸಾದ್ ಕೌಶಲ್ ಶೆಟ್ಟಿ, ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ವಲಯಾಧ್ಯಕ್ಷೆ ಅಬ್ದುಲ್ ಶಾಫಿ, ಬೂತ್ ಅಧ್ಯಕ್ಷ ಪುಸ್ಕರ ಪೂಜಾರಿ, ಉಮೇಶ್ , ತನಿಯಪ್ಪ ಪೂಜಾರಿ ಬಿಳಿಯೂರು, ಮಿತ್ರದಾಸ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಮೋನಪ್ಪ ಗೌಡ ಕಳೆಂಜ, ಸೀತಾರಾಮ ಶೆಟ್ಟಿ ಕಳೆಂಜ, ಕಬಕ ವಲಯ ಅಧ್ಯಕ್ಷ ಆದಂ ಕೆದುವಡ್ಕ, ಸಾಬಾ ಕಬಕ, ಗುತ್ತಿಗೆದಾರ ಫಾರೂಕ್ , ಸುರೇಶ್ ಭಟ್ ಚತ್ರಪೋಳ್ಯ, ವಲಯ ಅಧ್ಯಕ್ಷ ಕೇಶವ ಬಿ, ಬೂತ್ ಅಧ್ಯಕ್ಷ ಇಬ್ರಾಹಿಂ, ಬೂತ್ ಅಧ್ಯಕ್ಷ ಶರೀಫ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರದ ಹಸೈನಾರ್, ಶ್ರೀನಿವಾಸ್ ಶೆಟ್ಟಿ, ಕೊಲ್ಯ, ಲತಾ ಅಶೋಕ್, ಪದ್ಮಿನಿ ಸೇರಾಜೆ, ಬೂತ್ ಅಧ್ಯಕ್ಷರುಗಳಾದ ಶರೀಫ್ ಸೇರಾಜೆ, ಅಶೋಕ್ ಪೂಜಾರಿ, ವಿಟ್ಲ ಮುಡ್ನೂರು ವಲಯ ಅಧ್ಯಕ್ಷ ಸುಶಾಂತ್ ಶೆಟ್ಟಿ, ಸುಮಿತ್ ಶೆಟ್ಟಿ, ಎಲ್ಯಣ್ಣ ಪೂಜಾರಿ, ಜುನಾರ್ಧನ ಕುಂಡಡ್ಕ, ಕೋಟಿ ಪೂಜಾರಿ, ಅಬ್ದುಲ್ ಕರೀಂ, ಬಾಲಕೃಷ್ಣ ಶೆಟ್ಟಿ ಬೈಂಗ್ರೋಡಿ, ಕೇಶವ ನಾಯ್ಕ್, ಅಳಿಕೆ ವಲಯಾಧ್ಯಕ್ಷೆ ಸೀತಾರಾಮ ಶೆಟ್ಟಿ , ಗ್ರಾಪಂ ಸದಸ್ಯ ಸದಾಶಿವ ಶೆಟ್ಟಿ, ಶಾಂಭವಿ, ಸೆಲ್ವಿನಾ ಡಿಸೊಜಾ, ಕೀರ್ತನ್ ಕುಮಾರ್, ಪ್ರವೀಣ್ ಸಣ್ಣಗುತ್ತು, ಶ್ರೀಧರ್ ಬಾಳೆಕಲ್ಲು, ನಾರಾಯಣ ಪಿಕೆ, ಜಯರಾಂ ಬಲ್ಲಾಲ್, ಬೆಟ್ಟಂಪಾಡಿ ವಲಯ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ, ಬೂತ್ ಅಧ್ಯಕ್ಷರಾದ ಸದಾಶಿವ ರೈ ಅಜ್ಜಿಕಲ್ಲು, ದಾಮೋದರ ಪಾಟಾಳಿ, ಸುಬ್ಬಣ್ಣ ನಾಯ್ಕ ಬಾರ್ತಕುಮೇರು, ಕೊಳ್ತಿಗೆ ಗ್ರಾಮದ ಪಕ್ಷ ಪ್ರಮುಖರಾದ ಪ್ರಮೋದ್ ಕೆ ಎಸ್, ಅಮಲರಾಮಚಂದ್ರ, ಪ್ರದೀಪ್ ರೈ ಪಾಂಬಾರು, ಬಾಲಕೃಷ್ಣ ಗೌಡ ಪಡ್ರೆ, ಶ್ಯಾಂಸುಂದರ್ ರೈ, ವೆಂಕಪ್ಪ ನಾಯ್ಕ ಕನ್ನಕಜೆ, ಲಿಂಗಪ್ಪ ಪೂಜಾರಿ, ಭಾಸ್ಕರ್ ಪೂಜಾರಿ, ವೆಂಕಟ್ರಮಣ ಗೌಡ ಕಟ್ಟೆಪುಣಿ, ವಸಂತ ಕುಮಾರ್ ರೈ ದುಗ್ಗಳ, ಮೊದಲಾದವರು ಉಪಸ್ಥಿತರಿದ್ದರು,
ಶಿಲಾನ್ಯಾಸಗೊಂಡ ತಡೆಗೋಡೆ ಕಾಮಗಾರಿಗಳು ಹಾಗೂ ಬಿಡುಗಡೆಯಾದ ಅನುದಾನ:
ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಬಳಿಯ ರಸ್ತೆಯ ಬದಿಯ ತೋಡಿಗೆ ತಡೆಗೋಡೆ ರಚನೆಗೆ 15 ಲಕ್ಷ ರೂ ಅನುದಾನದಲ್ಲಿ ಶಿಲಾನ್ಯಾಸ ನಡೆಯಿತು.

ಕೆದಿಲ ಗ್ರಾಮದ ಕಾಂತುಕೋಡಿಯಲ್ಲಿ ಹೊಳೆ ಬದಿ ತಡೆಗೋಡೆ ಕಾಮಗಾರಿಗೆ ರೂ 20 ಲಕ್ಷ ರೂ ಅನುದಾನದಲ್ಲಿ ಶಿಲಾನ್ಯಾಸ ನಡೆಯಿತು.

ಕಬಕ ಗ್ರಾಮದ ಪೋಳ್ಯ ಸುರೇಶ್ ರವರ ಮನೆಯ ಬಳಿ ತಡೆಗೋಡೆ ನಿರ್ಮಾಣಕ್ಕೆ ರೂ 20 ಲಕ್ಷ ರೂ ಬಿಡುಗಡೆಯಾಗಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು.

ಕಬಕ ಗ್ರಾಮದ ಸಾಬ ರವರ ಮನೆಯ ಬಳಿ ತಡೆಗೋಡೆ ನಿರ್ಮಾಣಕ್ಕೆ ರೂ 20 ಲಕ್ಷ ರೂ ಮಂಜೂರಾಗಿದ್ದು ಇದರ ಶಿಲಾನ್ಯಾಸ ನಡೆಯಿತು.

ಕೊಡಿಪ್ಪಾಡಿ ಗ್ರಾಮದ ಬಟ್ರಿಪ್ಪಾಡಿ ಎಂಬಲ್ಲಿ ಇಬ್ರಾಹಿಂ ರವರ ಮನೆಯ ಸಮೀಪ ತೋಡಿಗೆ ತಡೆಗೋಡೆ 65 ಲಕ್ಷ ರೂ ಮಂಜೂರಾಗಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು. ಇದು ಬಹುವರ್ಷದ ಬೇಡಿಕೆಯಾಗಿತ್ತು.

ವಿಟ್ಲ ಪಟ್ಟಣ ಪಂ. ವ್ಯಾಪ್ತಿಯ ಮಾಮೇಶ್ವರ ಸುಂದರಿ,ಕೆ ಇವರ ಮನೆ ಬಳಿ ತೋಡಿಗೆ ತಡೆಗೋಡೆ ನಿರ್ಮಾಣಕ್ಕೆ 30 ಲಕ್ಷ ರೂ ಮಂಜೂರಾಗಿದ್ದು ಶಿಲಾನ್ಯಾಸ ನಡೆಯಿತು.

ವಿಟ್ಲ ಮುಡ್ನೂರು ಗ್ರಾಮದ ಮಾಣಿಬೆಟ್ಟು ಎಂಬಲ್ಲಿ ತೋಡು ಬದಿಗೆ ತಡೆಗೋಡೆ ನಿರ್ಮಾಣ.20 ಲಕ್ಷ ರೂ ಮಂಜೂರಾಗಿದ್ದು ಶಿಲಾನ್ಯಾಸ ನಡೆಯಿತು.

ವಿಟ್ಲ ಕಸಬ ಗ್ರಾಮದ ನೆತ್ತರಕೆರೆ ಎಂಬಲ್ಲಿ ತೋಡಿನ ಬದಿಗೆ ತಡೆಗೋಡೆ ರಚನೆ. ರೂ 30 ಲಕ್ಷ ರೂ ಮಂಜೂರಾಗಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು.

ವಿಟ್ಲ ಕಸಬ ಗ್ರಾಮದ ಜೋಗಿ ಮಠ ಎಂಬಲ್ಲಿ ರಸ್ತೆ ಬದಿ ತೋಡಿಗೆ ತಡೆಗೋಡೆ ನಿರ್ಮಾಣ.30 ಲಕ್ಷ ರೂ ಮಂಜೂರಾಗಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು.

ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಎರುಂಬು ಎಂಬಲ್ಲಿ ರಸ್ತೆ ಬದಿ ತಡೆಗೋಡೆ ನಿರ್ಮಾಣ 20 ಲಕ್ಷ ರೂ ಮಂಜೂರಾಗಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು.

ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕ ಮರಕ್ಕಿಣಿ ಎಂಬಲ್ಲಿ ತೋಡಿನ ಬದಿಗೆ ತಡೆಗೋಡೆ ನಿರ್ಮಾಣ 20 ಲಕ್ಷ ರೂ ಮಂಜೂರಾಗಿದೆ.

ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ಪುಂಚಿತ್ತಾಯರ ಬೈಲು ಬನದ ಹತ್ತಿರ ತೋಡಿಗೆ ತಡೆಗೋಡೆ ನಿರ್ಮಾಣ 15 ಲಕ್ಷ ರೂ ಮಂಜೂರಾಗಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು.

ಕೊಳ್ತಿಗೆ -ಬೆಟ್ಟಂಪಾಡಿ ಗ್ರಾಮ
ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕದಲ್ಲಿ ಹೊಳೆ ಬದಿ ತಡೆಗೋಡೆ ನಿರ್ಮಾಣಕ್ಕೆ 60 ಲಕ್ಷ ರೂ ಮಂಜೂರಾಗಿದ್ದು ಕಾಮಗಾರಿಗೆ ಶಿಲಾನ್ಯಾಸ ನೆರವೇರಿತು.

ಬೆಟ್ಟಂಪಾಡಿ ಗ್ರಾಮದ ಬಾರ್ತಕುಮೇರು ಎಂಬಲ್ಲಿ ಹೊಳೆ ಬದಿ ತಡೆಗೋಡೆ ಕಾಮಗಾರಿಗೆ 60 ಲಕ್ಷ ರೂ ಬಿಡುಗಡೆಯಾಗಿದ್ದು ಕಾಮಗಾರಿ ಪೂರ್ಣಗೊಂಡಿದ್ದು ಶಾಸಕರು ಉದ್ಘಾಟನೆ ನೆರವೇರಿಸಿದರು.

ಕೊಳ್ತಿಗೆ ಗ್ರಾಮದ ಮುಖ್ಯ ರಸ್ತೆಯ ಬಳಿ ತಡೆಗೋಡೆ ಕಾಮಗಾರಿಗೆ 40 ಲಕ್ಷ ರೂ ಮಂಜೂರಾಗಿದ್ದು ಕಾಮಗಾರಿಗೆ ಶಾಸಕರು ಶಿಲಾನ್ಯಾಸ ನಡೆಸಿದರು.

ಕೊಳ್ತಿಗೆ ಗ್ರಾಮದ ಪಾಂಬಾರು ಬೀರ್ಮಕಜೆ ರಸ್ತೆ ಬದಿ ತಡೆಗೋಡೆಗೆ 20 ಲಕ್ಷ ರೂ ಮಂಜೂರಾಗಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು.

ಕೊಳ್ತಿಗೆ ಗ್ರಾಮದ ಕಟ್ಟಪುಣಿ ಎಂಬಲ್ಲಿ ಹೊಳೆ ಬದಿ ತಡೆಗೋಡೆ ಕಾಮಗಾರಿಗೆ 50 ಲಕ್ಷ ರೂ ಮಂಜೂರಾಗಿದ್ದು ಕಾಮಗಾರಿಗೆ ಶಿಲಾನ್ಯಾಸ ನಡೆಯಿತು

ಬೆದ್ರಾಳದಲ್ಲಿ ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ಹೊಳೆ ಬದಿ ತಡೆಗೋಡೆ ಕಾಮಗಾರಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನೆರವೇರಿಸಿದರು.










