






ಪುತ್ತೂರು: ಶಂಸುಲ್ ಉಲಮಾ ಯಂಗ್ಮೆನ್ಸ್ ಸಾರೆಪುಣಿ ಇದರ ವತಿಯಿಂದ ಅರ್ಹ ಕುಟುಂಬಗಳಿಗೆ ರಂಜಾನ್ ಕಿಟ್ ವಿತರಣೆ ಹಾಗೂ ಇಫ್ತಾರ್ ಕೂಟ ಸಾರೆಪುಣಿ ಮುಹಿಯುದ್ದಿನ್ ಜುಮಾ ಮಸೀದಿಯಲ್ಲಿ ನಡೆಯಿತು. ಯಂಗ್ಮೆನ್ಸ್ ಅಧ್ಯಕ್ಷ ಶರೀಫ್ ಗಟ್ಟಮನೆ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಮನ್ಸೂರ್ ರಯೀಸಿ ಉದ್ಘಾಟಿಸಿ ಮಾತನಾಡಿದರು. ಸಾರೆಪುಣಿ ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಸಾರೆಪುಣಿ ಶುಭ ಹಾರೈಸಿದರು.


ಸಹ ಅಧ್ಯಾಪಕರಾದ ಹಮೀದ್ ಮುಸ್ಲಿಯಾರ್ ಗಟ್ಟಮನೆ, ದಾರುಲ್ ಉಲೂಮ್ ಮದ್ರಸದ ಮಾಜಿ ಅಧ್ಯಕ್ಷ ಅರಬಿಕುಂಞಿ ಸಾರೆಪುಣಿ, ಎಸ್.ಎನ್ ಅಬ್ದುಲ್ಲ,ಸಾರೆಪುಣಿ ಜುಮಾ ಮಸೀದಿಯ ಪ್ರ.ಕಾರ್ಯದರ್ಶಿ ಎಚ್.ಎ ಇಕ್ಬಾಲ್, ಕೋಶಾಧಿಕಾರಿ ಇಬ್ರಾಹಿಂ ಕುಯ್ಯಾರ್, ಸದಸ್ಯರಾದ ಲತೀಫ್ ಸಾರೆಪುಣಿ, ಅಬ್ದುರ್ರಹ್ಮಾನ್ ಸಾರೆಪುಣಿ, ಉಸ್ಮಾನ್ ಸಾರೆಪುಣಿ, ಯಂಗ್ಮೆನ್ಸ್ ಲೆಕ್ಕಪರಿಶೋಧಕ ಇಕ್ಬಾಲ್ ಜಿ ಸಾರೆಪುಣಿ, ಕೋಶಾಧಿಕಾರಿ ಹನೀಫ್ ಗಟ್ಟಮನೆ, ಜೊತೆ ಕಾರ್ಯದರ್ಶಿ ಝಕೀರ್ ಹುಸೈನ್, ಸದಸ್ಯರಾದ ರಫೀಕ್ ಸಾರೆಪುಣಿ, ಖಲಂದರ್ ಶರೀಫ್, ಎಸ್ ಇಬ್ರಾಹಿಂ ಸಾರೆಪುಣಿ, ತಾಜುದ್ದೀನ್ ಸಾರೆಪುಣಿ, ಆಸೀಫ್ ಸಾರೆಪುಣಿ, ಉನೈಸ್ ಸಾರೆಪುಣಿ ಹಾಗೂ ಹುಸೈನ್ ಸಾರೆಪುಣಿ, ನೌಫಲ್ ಸಾರೆಪುಣಿ, ನವಾಝ್ ಸಾರೆಪುಣಿ, ಅಫ್ತಾಬ್ ಸಾರೆಪುಣಿ ಉಪಸ್ಥಿತರಿದ್ದರು. ಇಫ್ತಾರ್ ಕೂಟದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಶಂಸುಲ್ ಉಲಮಾ ಯಂಗ್ಮೆನ್ಸ್ನ ಪ್ರ.ಕಾರ್ಯದರ್ಶಿ ಡಿ.ಎ ಬಶೀರ್ ಗಟ್ಟಮನೆ ಸ್ವಾಗತಿಸಿ ವಂದಿಸಿದರು.













