ದೇರಾಜೆ: ಚರಂಡಿಗೆ ಬಿದ್ದು ಧರೆಗೆ ಡಿಕ್ಕಿಯಾದ ಓಮ್ನಿ-ದಂಪತಿಗೆ ಗಾಯ

0

ಕಡಬ: ಓಮ್ನಿ ಕಾರು ಚರಂಡಿಗೆ ಬಿದ್ದು ಧರೆಗೆ ಗುದ್ದಿದ ಪರಿಣಾಮ ದಂಪತಿ ಗಾಯಗೊಂಡ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ರಸ್ತೆಯ ದೇರಾಜೆಯ ಕುದ್ರಡ್ಕ ಎಂಬಲ್ಲಿ ಮಾ.8ರಂದು ಸಂಜೆ ನಡೆದಿದೆ.

ಕೊಣಾಜೆ ಗ್ರಾಮದ ಕೋಡಿಯಡ್ಕ ನಿವಾಸಿ ದಯಾನಂದ ಕೆ.(43ವ.)ಹಾಗೂ ಅವರ ಪತ್ನಿ ಚಿತ್ರಾವತಿ ಗಾಯಗೊಂಡವರಾಗಿದ್ದಾರೆ. ಇವರು ಓಮ್ನಿ ಕಾರು (ಕೆಎ21, ಪಿ 3293)ನಲ್ಲಿ ಚಾರ್ವಾಕ ಗ್ರಾಮದ ಉದಲಡ್ಕ ಎಂಬಲ್ಲಿಗೆ ಹೋಗಿ ಹಿಂತಿರುಗಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಸ್ತೆಯಲ್ಲಿ ಬರುತ್ತಿದ್ದ ವೇಳೆ ದೇರಾಜೆಯ ಕುದ್ರಡ್ಕ ಎಂಬಲ್ಲಿಗೆ ತಲುಪುತ್ತಿದ್ದಂತೆ ಕಾರು ಚಾಲಕಿಯ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಇಳಿದು ಧರೆಗೆ ಗುದ್ದಿದೆ. ಪರಿಣಾಮ ಕಾರಿನ ಎಡಬದಿಯಲ್ಲಿ ಕುಳಿತಿದ್ದ ದಯಾನಂದ ಕೆ.ಹಾಗೂ ಒಮ್ನಿ ಚಲಾಯಿಸುತ್ತಿದ್ದ ಚಿತ್ರಾವತಿಯವರು ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ಉಪಚರಿಸಿ ಕಡಬ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಹಿತ ಆಸ್ಪತ್ರೆಗೆ ತೆರಳಿ ಅಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here