ಪುತ್ತೂರು ಜಾತ್ರೆಗೆ ಸೇವಾ ರೂಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರಿ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉಚಿತವಾಗಿ ನೀಡುವವರು ಅರ್ಜಿ ಸಲ್ಲಿಸುವಂತೆ ದೇವಳದಿಂದ ಪ್ರಕಟಣೆ ನೀಡಲಾಗಿದೆ.


ಎ.10 ರಿಂದ 20ರ ತನಕ ಶ್ರೀ ದೇವರ ಜಾತ್ರೆಯ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಚಿತವಾಗಿ ಸೇವಾ ರೂಪದಲ್ಲಿ ನಡೆಸಲು ಇಚ್ಚಿಸುವವರು ಮಾ.20ರ ಒಳಗಾಗಿ ಅರ್ಜಿಯನ್ನು ದೇವಳದ ಕಚೇರಿಗೆ ನೀಡಬೇಕು. ಅರ್ಜಿಯಲ್ಲಿ ಸಂಸ್ಥೆಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಕಾರ್ಯಕ್ರಮದ ವಿವರ, ತಂಡದಲ್ಲಿ ಭಾಗವಹಿಸುವ ಸದಸ್ಯರ ಸಂಖ್ಯೆಯನ್ನು ನಮೂದಿಸಬೇಕು. ತಂಡಗಳು ನೀಡುವ ಕಾರ್ಯಕ್ರಮಗಳು ಭಾರತೀಯ ಸಂಸ್ಕೃತಿಯದ್ದಾಗಿದ್ದು, ಪಾಶ್ಚಾತ್ಯ ಶೈಲಿಗೆ ಅವಕಾಶವಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಮೊ: 9448732414 ಗೆ ಅನ್ನು ಸಂಪರ್ಕಿಸಬೇಕು. ಸ್ವೀಕೃತಗೊಂಡ ಅರ್ಜಿಗಳನ್ನು ದೇವಳದ ಆಡಳಿತ ಮಂಡಳಿ ಪರಿಶೀಲಿಸಿ ಅರ್ಹ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here