ಕಾಪುತಕಾಡು ಶ್ರೀ ರಾಜಗುಳಿಗ ಸಾನಿಧ್ಯದ ಸಂಪರ್ಕದ ಶಾಂತಿಮೂಲೆ ರಸ್ತೆಯ ಉದ್ಘಾಟನೆ

0

ಸವಣೂರು :ಪೆರುವಾಜೆ ,ಪಾಲ್ತಾಡಿ,ಕೊಳ್ತಿಗೆ ಗ್ರಾಮಗಳಿಗೆ ಸಂಬಂಧಪಟ್ಟಿರುವ ಪಾಲ್ತಾಡು ಕಾಪುತಕಾಡು ಶ್ರೀ ರಾಜಗುಳಿಗ ಸಾನಿಧ್ಯದ ಸಂಪರ್ಕದ ಶಾಂತಿಮೂಲೆ ರಸ್ತೆಯ ಅಭಿವೃದ್ದಿಗೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಅನುದಾನ ನೀಡಿದ್ದು,ಕಾಂಕ್ರೀಟಿಕೃತ ರಸ್ತೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು। ಭಾಗೀರಥಿ ಮುರುಳ್ಯ ಅವರು ಮಾ.8ರಂದು ಉದ್ಘಾಟಿಸಿದರು.

 ಈ ಸಂದರ್ಭದಲ್ಲಿ ಕೊಳ್ತಿಗೆ ಗ್ರಾ.ಪಂ.ಮಾಜಿ ಸದಸ್ಯರಾದ ಸುನೀಲ್ ರೈ ಪಾಲ್ತಾಡು,ಬೆಳ್ಳಾರೆ ಸಿಎ ಬ್ಯಾಂಕ್ ಉಪಾಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ನಿರ್ದೇಶಕ ನಾರಾಯಣ ಕೊಂಡೆಪ್ಪಾಡಿ,ಮುರ್ಕೆತ್ತಿ ಬಿಜೆಪಿ ಬೂತ್ ಮಾಜಿ ಅಧ್ಯಕ್ಷ ಚಿದಾನಂದ,ಕಾರ್ಯದರ್ಶಿ ಶಶಿ ಕುಮಾರ್,ದಾಮೋದರ ನಾಯ್ಕ ನಾಗನಮಜಲು,ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಸಂತ ನಡುಬೈಲು, ರಾಜಗುಳಿಗ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಪಿ.ಮಂಜಪ್ಪ ರೈ, ಅಧ್ಯಕ್ಷರಾದ ಡಾ.ಹರಿಕೃಷ್ಣ ರೈ ಜಿ.ಎನ್.,ಕಾರ್ಯದರ್ಶಿ ಪ್ರವೀಣ್ ಚೆನ್ನಾವರ,ಜತೆ ಕಾರ್ಯದರ್ಶಿ ದಿನೇಶ್ ಶಾಂತಿಮೂಲೆ,ಕೋಶಾಧಿಕಾರಿ ಬಾಬು ನಾಯ್ಕ ಶಾಂತಿಮೂಲೆ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು. 

ರಾಜಗುಳಿಗ ಕ್ಷೇತ್ರಕ್ಕೆ ಭೇಟಿ ,ಗೌರವಾರ್ಪಣೆ 
ಶಾಸಕಿ ಭಾಗೀರಥಿ ಮುರುಳ್ಯ ಅವರು ಶ್ರೀ ರಾಜಗುಳಿಗ ಕ್ಷೇತ್ರಕ್ಕೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ರಸ್ತೆಗೆ ಅನುದಾನ ನೀಡಿದಕ್ಕಾಗಿ ಶ್ರೀ ರಾಜಗುಳಿಗ ಸೇವಾ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ರಸ್ತೆಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here