







ಪುತ್ತೂರು: ಇಲ್ಲಿನ ದರ್ಬೆ ಪ್ರಶಾಂತ್ ಮಹಲ್ ನಲ್ಲಿ ವ್ಯವಹಾರ ನಡೆಸುತ್ತಿದ್ದ ಶ್ರೀ ಮಂಜುನಾಥೇಶ್ವರ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ ಸಂಸ್ಥೆಯ ಗಿಫ್ಟ್ ಸ್ಟೀಮ್ ನ 33ನೇ ಡ್ರಾ ಸಂಸ್ಥೆಯಲ್ಲಿ ನಡೆಯಿತು.


ಪುತ್ತೂರು ನಗರಸಭಾ ಸದಸ್ಯರಾದ ಪದ್ಮನಾಭ ನಾಯ್ಕ್ ಪಡೀಲು ಡ್ರಾ ನಡೆಸಿಕೊಟ್ಟರು. ಪುತ್ತೂರು ಮಿನಿ ವಿಧಾನಸೌದದಲ್ಲಿ ಸರ್ವೇಯರ್ ಆಗಿರುವ ಮಧುರವರು ಹೋಂಡಾ ಆ್ಯಕ್ಟೀವಾ ದ್ವಿಚಕ್ರ ವಾಹನ ವಿಜೇತರಾದರು. ಈ ಸಂದರ್ಭದಲ್ಲಿ ಕಕ್ಕೆಬೆಟ್ಟು ಎಎಲ್ ಪಿಎಸ್ ನ ಅಧ್ಯಾಪಕರಾದ ವಿಠಲ, ವಾಸುದೇವ ಪುತ್ತೂರು, ಶೇಖರ್ ಪುತ್ತೂರು, ಲುಬ್ನ ಪುತ್ತೂರು, ಪುತ್ತೂರು ಪ್ರವೀಣ್ ಕ್ಯಾಪಿಟಲ್ ನ ಲತಾ, ಮಹೇಂದ್ರಕುಮಾರ್, ಹರ್ಷಿತಾ, ಶೇಖರ್, ರಂಜನಿ, ಧನ್ಯ, ಇಶನ್ ರೈ, ಸುರೇಶ್ ಪುತ್ತೂರು, ಕೃಷ್ಣಪ್ಪ, ಜೆ.ಆರ್. ಎಂಟರ್ ಪ್ರೈಸಸ್ ನ ಮಾಲಕರಾದ ಜಯರಾಜ್ ಪೂಜಾರಿ, ಸಂಸ್ಥೆಯ ಮಾಲಕರ ಪತ್ನಿ ರಶ್ಮಿ ಮಂಜುನಾಥ, ಮಕ್ಕಳಾದ ಶ್ರೀಶಾಸ್ತ, ಶ್ರೀದೇವಿ, ಸಿಬ್ಬಂದಿಗಳಾದ ಶಿವಪ್ರಸಾದ್ ಕೆ., ಸ್ವಸ್ತಿಕ್, ಶೋಧನ್, ಪ್ರಮೀಳ, ಧನ್ಯ, ವಿಘ್ನೇಶ್ ಮೊದಲಾದವರು ಉಪಸ್ಥಿತರಿದ್ದರು. ಹೋಂಡಾ ಆ್ಯಕ್ಟೀವಾ ದ್ವಿಚಕ್ರ ವಾಹನ ವಿಜೇತ ಮಧುರವರಿಗೆ ವೇದಿಕೆಯಲ್ಲಿ ಕೀ ಹಸ್ತಾಂತರ ಮಾಡಲಾಯಿತು. ಸಂಸ್ಥೆಯ ಮಾಲಕರಾದ ಮಂಜುನಾಥರವರು ಸ್ವಾಗತಿಸಿ ವಂದಿಸಿದರು.













